ಕಾವ್ಯಮಂಡಲ, ಜನಸಂಸ್ಕೃತಿ ಸಂಸ್ಥೆಗಳಿಂದ ಸಾರ್ಥಕ ಕಾವ್ಯ ಶಿವರಾತ್ರಿ

ಬೆಂಗಳೂರು: ದಿನಾಂಕ 04/03/2014ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಸಂಜೆ 6ಕ್ಕೆ ಕಾವ್ಯ ಶಿವರಾತ್ರಿ, ಪ್ರೊ. ಕಿ.ರಂ.ನಾಗರಾಜ – 75 ಸರಣಿ ಕಾರ್ಯಕ್ರಮಗಳ ಉದ್ಘಾಟನೆ, ಜನಪದ ಮಹಾಕಾವ್ಯಗಳ ಗಾಯಕರಾದ ದೊಡ್ಡ ಗವಿ ಬಸಪ್ಪ ಮತ್ತು ತಂಡದವರಿಗೆ ಕಿ.ರಂ. ಜನಪದ ಪ್ರಶಸ್ತಿ ಪ್ರದಾನ, ಕಾವ್ಯಮಂಡಲದ ಪಿಎಚ್.ಡಿ., ವಿದ್ಯಾರ್ಥಿಗಳಿಗೆ ಪಿಎಚ್.ಡಿ., ಪದವಿ ಪ್ರಮಾಣ ಪತ್ರ ಮತ್ತು ಮಾರ್ಗದರ್ಶಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಮಾರಂಭಗಳ ನಂತರ ಅಹೋರಾತ್ರಿ ಮಂಟೇಸ್ವಾಮಿ ಮತ್ತು ಮಲೆ ಮಹದೇಶ್ವರ ಮಹಾಕಾವ್ಯಗಳ ಗಾಯನವನ್ನು ದೊಡ್ಡಗವಿ ಬಸಪ್ಪ ಮತ್ತು ತಂಡದವರು ನಡೆಸಿಕೊಟ್ಟರು. ಮುಂಜಾನೆ ಆರರವರೆಗೆ ನಡೆದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಎಲ್ಲರಿಗೂ ಜನಸಂಸ್ಕೃತಿ ಮತ್ತು ಕಾವ್ಯಮಂಡಲದ ಸಂಸ್ಥೆಗಳ ವತಿಯಿಂದ ಧನ್ಯವಾದಗಳನ್ನು ಅರ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಶಿವ ಮೂಲತಃ ಬುಡಕಟ್ಟಿಗೆ ಸೇರಿದವನು ಎಂದರು. ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಅವರು ಮತ್ತು ಪ್ರೊ.ಕಿ.ರಂ.ನಾಗರಾಜ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು. ಈ ವೇಳೆ ಮಾತನಾಡಿದ ಪತ್ರಕರ್ತ ಬಿ.ಎಂ.ಹನೀಫ್ ಶಿವನ ವೈಶಿಷ್ಟ್ಯತೆಗಳನ್ನು ಅನಾವರಣಗೊಳಿಸಿದರು. ಇಡೀ ರಾತ್ರಿ ಕಾವ್ಯಗಾಯನದ ವೇಳೆ ಸಂದರ್ಭ ಮತ್ತು ವಿಶೇಷಗಳನ್ನು ಕುರುವ ಬಸವರಾಜ್ ಅವರು ವಿವರಿಸಿದರು. ಈ ವೇಳೆ ಖ್ಯಾತ ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅವರು ಜನಪದ ಗೀತೆಗಳನ್ನು ಹಾಡುವ ಮೂಲಕ ಕಾವ್ಯಶಿವರಾತ್ರಿಗೆ ಮೆರುಗು ತಂದರು.

 

ಈ ವೇಳೆ ಮಾತನಾಡಿದ ಪ್ರದೀಪ್ ಮಾಲ್ಗುಡಿ, ಒಂದು ವರ್ಷಗಳ ಕಾಲ ನಿರಂತರವಾಗಿ ರಾಜ್ಯ ಮತ್ತು ಹೊರರಾಜ್ಯದಲ್ಲಿ ಪ್ರೊ.ಕಿ.ರಂ.ನಾಗರಾಜ – 75 ಕಾರ್ಯಕ್ರಮದ ಅಂಗವಾಗಿ ಒಟ್ಟು 75 ಕವಿಗೋಷ್ಠಿಗಳನ್ನು ಮತ್ತು ಕಿ.ರ.ನಾಗರಾಜ ಅವರ ಚಿಂತನೆಗಳನ್ನು ಪ್ರಸ್ತುತಪಡಿಸುವ ಉಪನ್ಯಾಸಗಳನ್ನು ನೀಡಲಾಗುವುದು. ಕಿ.ರಂ.ರಚಿಸಿದ ನೀಗಿಕೊಂಡ ಸಂಸ, ಕಾಲಜ್ಞಾನಿ ಕನಕ ಮತ್ತು ಮಧ್ಯಮ ವ್ಯಾಯೋಗ ನಾಟಕಗಳನ್ನು ಪ್ರದರ್ಶಿಸಲಾಗುವುದು. ಕಿರಂ ಅವರ ಜೀವನ, ಬರಹ ಮತ್ತು ಅವರ ಒಡನಾಡಿಗಳ ಅಭಿಪ್ರಾಯಗಳನ್ನು ಒಳಗೊಂಡ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಲಾಗುವುದು ಎಂದರು.

ದಿನಾಂಕ 4/2/2019ರಂದು ಕಸಾಪದ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ಕಾವ್ಯ ಶಿವರಾತ್ರಿ , ಪ್ರೊ. ಕಿ.ರಂ. ಜನಪದ ಪುರಸ್ಕಾರ ಮತ್ತು ಪ್ರೊ. ಕಿ.ರಂ. 75 ಉದ್ಘಾಟನಾ ಸಮಾರಂಭದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಎಲ್ಲರಿಗೂ ಜನಸಂಸ್ಕೃತಿ ಮತ್ತು ಕಾವ್ಯಮಂಡಲದಿಂದ ಹೃತ್ಪೂರ್ವಕ ಧನ್ಯವಾದಗಳು. ಬಿಡುವಿಲ್ಲದ ಕಾರ್ಯಕ್ರಮದ ಒತ್ತಡದಲ್ಲಿ ಕೂಡ ಎಲ್.ಹನುಮಂತಯ್ಯ, ಕೋಟಗಾನಹಳ್ಳಿ ರಾಮಯ್ಯ, ಕೆ.ಎನ್.ಕವನ,  ಕುರುವ ಬಸವರಾಜ್, ಉಷಾ ಕಟ್ಟೇಮನೆ, ಬಿ.ಎಂ.ಹನೀಫ್, ಕೆ.ಬಿ. ಬೆಟ್ಟೇಗೌಡ, ಸಂಗಮೇಶ ಉಪಾಸೆ, ಡಾ. ಟಿ. ವೆಂಕಟೇಶಮೂರ್ತಿ, ಅಗ್ರಹಾರ ಕೃಷ್ಣಮೂರ್ತಿ, ಗುಂಡಣ್ಣ ಕಲಬುರ್ಗಿ, ಬೇಲೂರು ರಘುನಂದನ್, ಡಾ. ರುದ್ರೇಶ್ ಅದರಂಗಿ, ಡಾ. ರೇಣುಕಾರಾಧ್ಯ, ಪ್ರಕಾಶ್ ಮೂರ್ತಿ ಎಂ., ಎಲ್.ಎನ್.ಮುಕುಂದರಾಜ್, ದಾಸೋಹ ವ್ಯವಸ್ಥೆ ಮಾಡಿದ ಪ್ರೊ. ಪದ್ಮ ಟಿ ಚಿನ್ಮಯಿ, ಶೂದ್ರ ಶ್ರೀನಿವಾಸ್, ಪ್ರೊ. ಟಿ.ಗೋವಿಂದರಾಜು, ಆರ್.ಜಿ.ಹಳ್ಳಿ ನಾಗರಾಜ್, ಡಾ.ಬಿ.ಗಂಗಾಧರ್, ಡಾ.ಕೆ.ಸಿ.ಶಿವಾರೆಡ್ಡಿ, ಡಾ.ಎಚ್.ಕೆ.ಮಳಲಿಗೌಡ, ಸಿ.ಕೆ.ರಾಮೇಗೌಡ, ಡಾ.ಮಂಗಳ ಪ್ರಿಯದರ್ಶಿನಿ, ಡಾ. ಹೇಮಲತಾ ವಡ್ಡೆ, ಡಾ.ರಾಮಲಿಂಗಪ್ಪ ಟಿ. ಬೇಗೂರು, ಡಾ.ಕೂಡ್ಲೂರು ವೆಂಕಟಪ್ಪ, ಡಾ.ಕಾಂತರಾಜಪುರ ಸುರೇಶ್, ಜೀವನ್ಮುಖಿ ಸುರೇಶ್, ಚಕ್ರವರ್ತಿ ಚಂದ್ರಚೂಡ್, ಸಂಸ ಸುರೇಶ್, ಆರ್.ಹಂಸ, ಡಾ.ಲಕ್ಷ್ಮೀಕಾಂತ್ ಎಸ್.ಬಿ., ಡಾ.ವಿ.ಪುಟ್ಟರಾಜು, ಮೋಹನ್ ರೆಡ್ಡಿ ಸಿ.ಎನ್.,  ಜಿ.ವಿ.ಧನಂಜಯ, ಮುದ್ದು ತೀರ್ಥಹಳ್ಳಿ, ಸೂರ್ಯ ಮುಕುಂದರಾಜ್, ಹನುಮಂತ ಹಾಲಗೇರಿ ಮತ್ತು ವಿವೇಕಾನಂದ ಗೆಳೆಯರ ಬಳಗ, ಗಿರಿನಗರ, ಬೆಂಗಳೂರು, ದಿವ್ಯಾಂಶಿ ಟ್ರಸ್ಟ್, ಬೆಂಗಳೂರು, ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ, ಬೆಂಗಳೂರು, ಸದ್ಭಾವನಾ ಪ್ರತಿಷ್ಠಾನ, ಬೆಂಗಳೂರು, ಪ್ರಜ್ಞಾ ಸಾಂಸ್ಕೃತಿಕ ವೇದಿಕೆ, ಬೆಂಗಳೂರು, ಕನ್ನಡ ಸಂಘ, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು, ಕಾರ್ಯಕ್ರಮದ ಕುರಿತು ವರದಿ ಮಾಡಿದ ಪ್ರಜಾವಾಣಿ, ಕನ್ನಡಪ್ರಭ, ವಿಜಯಕರ್ನಾಟಕ, ವಾರ್ತಾ ಭಾರತಿ ಮತ್ತು ಇತರ ಪತ್ರಿಕೆಗಳಿಗೆ, ಕಸಪಾ ಖಜಾಂಚಿಗಳಾದ ಮಲ್ಲಿಕಾರ್ಜುನಪ್ಪ ಅವರಿಗೆ, ಪೂರ್ವ ನಿಗದಿತ ಕಾರ್ಯಕ್ರಮ ಇದ್ದರೂ ನಮಗೆ ಅವಕಾಶ ಮಾಡಿಕೊಟ್ಟ ಸಿ.ಕೆ.ರಾಮೇಗೌಡ ಅವರಿಗೆ, ಕಸಾಪದ ಎಲ್ಲ ಸಿಬ್ಬಂದಿಗಳಿಗೆ ಮತ್ತು ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೆರವು ನೀಡಿದ ಎಲ್ಲರಿಗೂ ಮತ್ತು ಅಂದು ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಪ್ರಯತ್ನವನ್ನು ಬೆಂಬಲಿಸಿ, ಭವಿಷ್ಯದಲ್ಲಿ ಇನ್ನಷ್ಟು ಕೆಲಸಗಳನ್ನು ಮಾಡಲು ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಗಿದೆ.

0

Leave a Reply

Your email address will not be published. Required fields are marked *