ಕರ್ನಾಟಕ ವಿಧಾನ ಪರಿಷತ್ ಬಲಾಬಲ

ಬೆಂಗಳೂರು: ಮೊನ್ನೆ ಮೊನ್ನೆವರೆಗೂ ಕರ್ನಾಟಕ ವಿಧಾನಸಭೆಯ ಕೆಳಮನೆಯ ಚುನಾವಣೆಯತ್ತ ತಮ್ಮ ಚಿತ್ತ ನೆಟ್ಟಿದ್ದ ರಾಜಕೀಯ ಪಕ್ಷಗಳೀಗ ಅದೇ ಚಿತ್ತವನ್ನ ಮೇಲ್ಮನೆ ಚುನಾವಣೆಯತ್ತ ಹರಿಸಬೇಕಿದೆ. ಹಾಗೇ ಸಂಖ್ಯಾ ಬಲದ ಲೆಕ್ಕಾಚಾರದ ಆಟದಲ್ಲಿ ವಿಧಾನಪರಿಷತ್ ಸಭಾಪತಿ, ಮತ್ತು ಉಪಸಭಾಪತಿ ಸ್ಥಾನಗಳನ್ನೂ ತಮ್ಮ ತೆಕ್ಕೆಗೆ ಹಾಕಿಕೊಳ್ಳೋ ಗೇಮ್ ಪ್ಲಾನ್ ರಚಿಸಬೇಕಿದೆ. ಲೆಕ್ಕಾಚಾರದ ಈ ಆಟದಲ್ಲಿ ಗೆಲುವು ಯಾರದ್ದು ಅನ್ನೋದೇ ಮುಂದಿರೋ ಕುತೂಹಲ.

ದಿನಾಂಕ: 15-6-2016ರ ವರೆಗಿನ ಬಲಾಬಲ

ಪಕ್ಷ/ಇತರೆ                ಬಲ
ಕಾಂಗ್ರೆಸ್ –                30
ಬಿಜೆಪಿ     –    23 +1 =24
ಜೆ ಡಿ (ಎಸ್) 12 + 1 =13
ಇತರೆ                        5
ಖಾಲಿ                        3
ಒಟ್ಟು                       75

13/6/2018 ರವರೆಗಿನ ಬಲಾಬಲ

ಪಕ್ಷ/ ಇತರೆ

ಕಾಂಗ್ರೆಸ್ – 30 +2 = 32
ಬಿಜೆಪಿ –                  24
ಜೆಡಿಎಸ್ –   12+1 =13
ಖಾಲಿ –                  06
ಒಟ್ಟು –                  75

ವಿಧಾನಸಭೆಯ ರಂಗಿನ ರಾಜಕೀಯ ಲೆಕ್ಕಾಚಾರದ ಫಲಿತಾಂಶದ ಫಲವಾಗಿ ರಾಜ್ಯ ರಾಜಕಾರಣದೊಳಗೆ ಸಮ್ಮಿಶ್ರ ಸರ್ಕಾರದ ಆಡಳಿತ ಆರಂಭವಾಗಿದೆ. ಮೈತ್ರಿ ಫಲವಾಗಿ ರಾಜ್ಯಾಡಳಿತ ಹಂಚಿಕೊಂಡಿರೋ ಜೆಡಿಎಸ್ ಕಾಂಗ್ರೆಸ್ ಪಕ್ಷಗಳಿಗೆ ಮೇಲ್ಮನೆಯಲ್ಲೂ ಮತ್ತೊಂದು ಮೈತ್ರಿ ಧರ್ಮ ಪಾಲನೆ ಮಾಡೋ ಸನ್ನಿವೇಶ ಎದುರಾಗಿದೆ.

ಸಂಖ್ಯಾ ಬಲದ ಲೆಕ್ಕಾಚಾರದಲ್ಲಿ ಇಲ್ಲಿವರೆಗೆ ಪ್ರಬಲ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಕಳೆದ ಬಾರಿ ವಿಧಾನಪರಿಷತ್ ಸಭಾಪತಿ ಸ್ಥಾನವನ್ನ ತನ್ನದಾಗಿಸಿಕೊಂಡಿತ್ತು. ಹೀಗಾಗಿ ಡಿ.ಎಚ್. ಶಂಕರಮೂರ್ತಿ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ​ರು. ಮೆಲ್ಮನೆ ಮೊದಲ ಮೈತ್ರಿ ಲೆಕ್ಕಾಚಾರದಲ್ಲಿ ಜೆಡಿಎಸ್ ನ ಮರಿತಿಬ್ಬೇಗೌಡ ಉಪಸಭಾಪತಿಯಾಗಿ ಕಾರ್ಯ ನಿರ್ವಹಿಸಿದ್ರು. ಆದರೆ ಇತ್ತೀಚಿಗೆ ನಡೆದ ಚುನಾಣೆಗಳು ಬಿಜೆಪಿ ಶಕ್ತಿಯನ್ನ ಕುಂದಿಸಿ ಕಾಂಗ್ರೆಸ್ ಗೆ ಬಲ ತುಂಬಿದ್ವು. ಇದ್ರ ಜೊತೆಗೆ ಮೈತ್ರಿ ರಾಜಕಾರಣದ ಲೆಕ್ಕಾಚಾರದ ಲಾಭ ಕಾಂಗ್ರೆಸ್ ಗೆ ದೊರೆಯುವಂತೆ ಮಾಡ್ತು.

ಒಟ್ಟು 75 ಜನ ಸದಸ್ಯರ ಬಲಹೊಂದಬೇಕಿರೋ ವಿಧಾನಪರಿಷತ್ ನಲ್ಲಿ ಸದ್ಯ ಇರೋ ಶಾಸಕ ಬಲ 69. ಉಳಿದ ಆರು ಸ್ಥಾನಗಳು ಚುನಾವಣೆ ಹಾಗೂ ನಾಮ ನಿರ್ದೇಶನ ಕಾರಣದಿಂದ ಖಾಲಿ ಉಳಿದುಕೊಂಡಿವೆ. ಹೀಗಾಗಿ ಹಾಲಿ ಕಾಂಗ್ರೆಸ್ ಪಕ್ಷ ಮೇಲ್ಮನೆಯಲ್ಲಿ 32 ಜನರ ಸದಸ್ಯ ಬಲವನ್ನ ಹೊಂದಿದ್ರೆ, ಬಿಜೆಪಿ – 24 ಹಾಗೂ ಜೆಡಿಎಸ್ -13 ಸ್ಥಾನಗಳನ್ನ ಪಡೆದಿವೆ. ಹೀಗಾಗಿ ಮೇಲ್ಮನೆಯ ಸಭಾಪತಿ ಸ್ಥಾನ ಕಾಂಗ್ರೆಸ್ ಗೂ ಮೈತ್ರಿ ಲೆಕ್ಕಾಚಾರದಲ್ಲಿ ಉಪಸಭಾಪತಿ ಸ್ಥಾನ ಜೆಡಿಎಸ್ ಗೂ ಸಿಗಲಿದೆ. ಒಂದು ವೇಳೆ ಮೈತ್ರಿ ಲೆಕ್ಕಾಚಾರ ಬದಲಾದಲ್ಲಿ ಸ್ಥಾನ ಹಂಚಿಕೆ ಅದಲು ಬದಲಾಗೋ ಸಾಧ್ಯತೆ ಕೂಡಾ ಇದೆ.

ಪೊಲಿಟಿಕಲ್ ಬ್ಯೂರೋ ಸುದ್ದಿ ಟಿವಿ

0

Leave a Reply

Your email address will not be published. Required fields are marked *