ಮತ್ತೆ ಏರಿಕೆಯಾಯ್ತು ಪೆಟ್ರೋಲ್ ಬೆಲೆ…

ಚುನಾವಣೆ ಸಂದರ್ಭದಲ್ಲಿ ಏಕಾಏಕಿ ಸ್ಥಿರವಾಗಿದ್ದ ತೈಲ ಬೆಲೆ ಮತ್ತೆ ಏರಿಕೆಯತ್ತ ಸಾಗಿದೆ. ಸದ್ಯ ಬೆಂಗಳೂರಿನಲ್ಲಿ ಬೆಲೆ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ. ಹೀಗಾಗಿ ಜನ ರಸ್ತೆಗೆ ವಾಹನವಿಳಿಸಲು ಯೋಚಿಸುವಂತಹ ಪರಿಸ್ಥಿತಿ ಎದುರಾಗಿದೆ. ಇದ್ರಿಂದ ಇದೇನಾ ಸ್ವಾಮಿ ಅಚ್ಛೇ ದಿನ್ ಎಂದು ಪ್ರಶ್ನಿಸುತ್ತಿದ್ದಾರೆ.ಪೆಟ್ರೋಲ್​ ಮತ್ತು ಡಿಸೇಲ್​ ಬೆಲೆ ಪ್ರತಿದಿನ ಪರಿಷ್ಕರಣೆ ಆಗತ್ತೆ. ಆದ್ರೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಹದಿನೈದು ದಿನಗಳ ಕಾಲ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರ್ಲಿಲ್ಲ. ಆದ್ರೆ ಎಲೆಕ್ಷನ್​ ಮುಗಿದಿದ್ದೆ ತಡ, ಬೆಲೆ ಗಗನಕ್ಕೇರ ತೊಡಗಿದೆ. ಅಚ್ಛೆ ದಿನ್​ ನಿರೀಕ್ಷೆಯಲ್ಲಿದ್ದ ಜನ ವಾಹನವನ್ನು ರಸ್ತೆಗಿಳಿಸಲು ಯೋಚನೆ ಮಾಡುವ ಸ್ಥಿತಿ ಬಂದಿದೆ. ಪೆಟ್ರೋಲ್​ ಮತ್ತು ಡಿಸೇಲ್​ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಬೆಂಗಳೂರಿನಲ್ಲಿ ಇಂದಿನ ಬೆಲೆ ಕೇಳಿದ್ರೆ ನೀವು ಬೆಚ್ಚಿಬೀಳ್ತಿರಾ. ಯಾಕಂದ್ರೆ ಸಿಲಿಕಾನ್ ಸಿಟಿಯಲ್ಲಿ ತೈಲ ಬೆಲೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಇಂದಿಗೆ ಪೆಟ್ರೋಲ್ ಬೆಲೆ ಒಂದು ಲೀಟರ್​ ಗೆ 79.71 ರಷ್ಟಾಗಿದೆ. ಇತ್ತ ಡೀಸೆಲ್ ಬೆಲೆ 70.50 ಯಷ್ಟಾಗಿದೆ. ಕೇವಲ 10 ದಿನಗಳ ಅಂತರದಲ್ಲಿ 2 ರೂಪಾಯಿಯಷ್ಟು ಬೆಲೆ ಏರಿಕೆಯಾಗಿದೆ. ಹಾಗಾದ್ರೆ 5 ದಿನಗಳ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆಯನ್ನೊಮ್ಮೆ ನೀವೆ ನೋಡಿ. ಪರಿಷ್ಕರಣೆ ಪ್ರಕಾರ ಏರಿಕೆ ಮತ್ತು ಇಳಿಕೆಯಾಗಬೇಕಿದ್ದ ಬೆಲೆ, ಕೇವಲ ಏರಿಕೆ ಹಂತದಲ್ಲೇ ಇದೆ.

ಸಾರ್ವಕಾಲಿಕ ದಾಖಲೆಯತ್ತ ತೈಲ ಬೆಲೆ
=======================
ಪೆಟ್ರೋಲ್ ಬೆಲೆ
ದಿನಾಂಕ                       ಬೆಲೆ (ಲೀಟರ್​ಗೆ)             ಏರಿಕೆ (ಪೈಸೆಗಳಲ್ಲಿ)
25-05-2018                 79.10                             0.37
26-05-2018                 79.24                             0.14
27-05-2018                 79.40                             0.16
28-05-2018                 79.55                             0.15
29-05-2018                 79.71                             0.16

ಡೀಸೆಲ್ ಬೆಲೆ
ದಿನಾಂಕ                     ಬೆಲೆ (ಲೀಟರ್​ಗೆ)              ಏರಿಕೆ (ಪೈಸೆಗಳಲ್ಲಿ)
25-05-2018                  69.93                            0.22
26-05-2018                  70.09                            0.16
27-05-2018                  70.25                           0.16
28-05-2018                  70.36                           0.11
29-05-2018                  70.50                           0.14

ವಾ- ಈ ರೀತಿಯಾಗಿ ತೈಲ ಬೆಲೆ ಏರಿಕೆಯಾಗುತ್ತಲೇ ಇದೆ. ಇನ್ನು ಪೆಟ್ರೋಲ್ ಬೆಲೆ 80 ರೂಪಾಯಿಯ ಸನಿಹಕ್ಕೆ ಬಂದಿದ್ದು, ಇನ್ನೆರಡು ದಿನಗಳಲ್ಲಿ 80 ರ ಗಡಿ ದಾಟುವ ಎಲ್ಲಾ ಸಾಧ್ಯತೆಗಳಿವೆ. ಇತ್ತ ಡೀಸೆಲ್​ ಬೆಲೆ ಕೂಡ ಪ್ರಪ್ರಥಮ ಬಾರಿಗೆ 70 ರೂಪಾಯಿ ಗಡಿ ದಾಟುವುದರೊಂದಿಗೆ ಗ್ರಾಹಕರಿ ಜೇಬಿಗೆ ಕತ್ತರಿ ಹಾಕುತ್ತಿದೆ. ಬೆಲೆ ಇಳಿಕೆಯಲ್ಲಿರುವ ಜನರ ನಿರೀಕ್ಷೆ ಇನ್ನೂ ಫಲಿಸಿಲ್ಲ. ಇತ್ತ ಕೇಂದ್ರ ಸರ್ಕಾರ ಮಾತ್ರ ಬೆಲೆ ಇಳಿಕೆಯ ಭರವಸೆ ನೀಡುವುದರಲ್ಲೆ ಕಾಲ ಕಳೆಯುತ್ತಿದೆ. ಹೀಗಾಗಿ ಬೆಂಗಳೂರಿನ ಗ್ರಾಹಕರು ಸ್ವಾಮಿ ಇದೇನಾ ಅಚ್ಛೆ ದಿನ್ ಎಂದು ಪ್ರಶ್ನಿಸ್ತಿದ್ದಾರೆ. ಒಟ್ಟಾರೆ ಪರಿಷ್ಕರಣೆ ನೆಪದಲ್ಲಿ ತೈಲ ಬೆಲೆ ಏರಿಕೆಯಾಗುತ್ತಲೇ ಇದೆ. ಮತ್ತೊಂದಡೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸ್ಥಿರವಾಗಿದ್ರೂ ಬೆಲೆ ಯಾಕೆ ಏರಿಕೆಯಾಗುತ್ತಿದೆ ಎಂಬುದು ಜನರ ಪ್ರಶ್ನೆ.

ಸುಬ್ರಹ್ಮಣ್ಯ ಎಸ್ ಹಂಡಿಗೆ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *