ಬೆಂಗಳೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ….

ಬೆಂಗಳೂರಿನ ಒಟ್ಟು 28 ವಿಧಾನಸಭಾ ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಅದರಂತೆ ಇವತ್ತು ಹೊರ ಬಿದ್ದ ಫಲಿತಾಂಶದಲ್ಲಿ ಯಾರು ಗೆದ್ದರು..?

ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಪಕ್ಷ ಮತ
ಯಲಹಂಕ ಎಸ್ ಆರ್ ವಿಶ್ವನಾಥ್ 1,16,196
ಕೆ.ಆರ್ ಪುರ ಬಿ.ಎ ಬಸವರಾಜ 91,693
ಬ್ಯಾಟರಾಯನಪುರ ಕೃಷ್ಣ ಬೈರೇಗೌಡ 1,14,964
ಯಶವಂತಪುರ ಎಸ್ ಟಿ ಸೋಮಶೇಖರ 1,15,273
ದಾಸರಹಳ್ಳಿ ಮಂಜುನಾಥ್ 86,669
ಮಹಾಲಕ್ಷ್ಮಿ ಲೇಔಟ್ ಗೋಪಾಲಯ್ಯ 88,218
ಮಲ್ಲೇಶ್ವರಂ ಡಾ. ಸಿಎನ್ ಅಶ್ವತ್ಱ ನಾರಾಯಣ 83,130
ಪುಲಕೇಶಿನಗರ ಅಖಂಡ ಶ್ರೀನಿವಾಸಮೂರ್ತಿ 97,574
ಸರ್ವಜ್ಞನಗರ ಕೆ.ಜೆ. ಜಾರ್ಜ್ 1,03,168
ಸಿ.ವಿ ರಾಮನ್ ನಗರ ಎಸ್. ರಘು 58,887
ಶಿವಾಜಿನಗರ ಆರ್ ರೋಶನ್ ಬೇಗ್ 59,742
ಶಾಂತಿನಗರ ಎನ್.ಎ ಹ್ಯಾರಿಸ್ 60,009
ಗಾಂಧಿನಗರ ದಿನೇಶ್ ಗುಂಡೂರಾವ್ 47,354
ರಾಜಾಜಿನಗರ ಎಸ್ ಸುರೇಶ್ ಕುಮಾರ್ 56,271
ಗೋವಿಂದರಾಜ ನಗರ ವಿ. ಸೋಮಣ್ಣ 79,135
ವಿಜಯ ನಗರ ಎಂ. ಕೃಷ್ಣಪ್ಪ 73,353
ಚಾಮರಾಜಪೇಟೆ ಜಮೀರ್ ಅಹ್ಮದ್ ಖಾನ್ 65,339
ಚಿಕ್ಕಪೇಟೆ ಉದಯ್ ಗರುಡಾಚಾರ್ 57,312
ಬಸವನಗುಡಿ ರವಿ ಸುಬ್ರಮಣ್ಯ 76,018
ಪದ್ಮನಾಭ ನಗರ ಆರ್ ಅಶೋಕ್ 77,868
ಬಿಟಿಎಂ ಲೇಔಟ್ ರಾಮಲಿಂಗಾ ರೆಡ್ಡಿ 67,085
ಮಹದೇವಪುರ ಅರವಿಂದ ಲಿಂಬಾವಳಿ 1,41,682
ಬೊಮ್ಮನಹಳ್ಳಿ ಸತೀಶ್ ರೆಡ್ಡಿ 1,11,863
ಬೆಂಗಳೂರು ದಕ್ಷಿಣ ಎಂ. ಕೃಷ್ಣಪ್ಪ 65,600
ಆನೇಕಲ್ ಬಿ ಶಿವಣ್ಣ 1,13,894
ಹೆಬ್ಬಾಳ ಬಿ ಎಸ್ ಸುರೇಶ್ 62,819

ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ಆರ್ ವಿಶ್ವನಾಥ್ ಅವರು ಜೆಡಿಎಸ್​​ನ ಎ.ಎಂ ಹನುಮಂತೇಗೌಡ ವಿರುದ್ಧ ಗೆಲುವು ಸಾಧಿಸಿದ್ಧಾರೆ. ಕೆ.ಆರ್ ಪುರ ಕ್ಷೇತ್ರದ ಬಿಜೆಪಿಯ ನಂದೀಶ್​ ರೆಡ್ಡಿ ಅವರು ಕಾಂಗ್ರೆಸ್​​ನ ಬಿ ಎ ಬಸವರಾಜ ವಿರುದ್ಧ ಸೋಲು ಅನುಭವಿಸಿದ್ದಾರೆ. ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ಬಿಜೆಪಿಯ ಎ. ರವಿ ವಿರುದ್ದ ಗೆಲುವು ಸಾಧಿಸಿದ್ಧಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಎಸ್.ಟಿ ಸೋಮಶೇಖರ ಅವರು ಬಿಜೆಪಿಯ ನಟ ಜಗ್ಗೇಶ್​ ಹಾಗೂ ಜೆಡಿಎಸ್​​ನ ಜವರಾಯಿ ಗೌಡ ವಿರುದ್ಧ ಗೆಲುವು ಸಾಧಿಸಿದ್ಧಾರೆ. ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್​ ಮುನಿರಾಜು ಅವರು ಜೆಡಿಎಸ್​​ನ ಮಂಜುನಾಥ್ ವಿರುದ್ಧ ಪರಾಭವಗೊಂಡಿದ್ದಾರೆ. ಮಹಾಲಕ್ಷ್ಮಿ ಲೇಔಟ್​​ನ ಬಿಜೆಪಿ ಅಭ್ಯರ್ಥಿ ಎನ್​.ಎಲ್​. ನರೇಂದ್ರ ಬಾಬು ಅವರು ಜೆಡಿಎಸ್​ನ ಗೋಪಾಲಯ್ಯ ವಿರುದ್ಧ ಸೋಲು ಅನುಭವಿಸಿದ್ಧಾರೆ. ಮಲ್ಲೇಶ್ವರಂ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಸಿಎನ್ ಅಶ್ವತ್ಱ ನಾರಾಯಣ ಅವರು ಕಾಂಗ್ರೆಸ್​​ನ ಕೆಂಗಲ್ ಶ್ರೀಪಾದ ರೇಣು ಅವರನ್ನು ಸೋಲಿಸಿದ್ಧಾರೆ. ಇನ್ನು ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವೈ ನಾರಾಯಣಸ್ವಾಮಿ ಅವರು ಕಾಂಗ್ರೆಸ್​ನ ಭೈರತಿ ಸುರೇಶ್​ ವಿರುದ್ಧ ಸೋಲು ಅನುಭವಿಸಿದ್ಧಾರೆ. ಇನ್ನು ಪುಲಕೇಶಿನಗರದ ಕಾಂಗ್ರೆಸ್​​ ಅಭ್ಯರ್ಥಿ ಅಖಂಡ ಶ್ರೀನಿವಾಸಮೂರ್ತಿ ಜೆಡಿಎಸ್​ನ ಪ್ರಸನ್ನ ಕುಮಾರ್ ವಿರುದ್ಧ ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ. ಸರ್ವಜ್ಞನಗರ ಕ್ಷೇತ್ರದ ಕಾಂಗ್ರೆಸ್​​ನ ಕೆ ಜೆ ಜಾರ್ಜ್ ಅವರು ಬಿಜೆಪಿಯ ಎಂ ಎನ್ ರೆಡ್ಡಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಸಿವಿ ರಾಮನ್ ನಗರದ ಬಿಜೆಪಿಯ  ಎಸ್ ರಘು ಕಾಂಗ್ರೆಸ್​​ನ ಮೇಯರ್​ ಸಂಪತ್ ರಾಜ್ ವಿರುದ್ಧ ಗೆಲುವ ಸಾಧಿಸಿದ್ಧಾರೆ. ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಆರ್ ರೋಶನ್ ಬೇಗ್ ಅವರು ಬಿಜೆಪಿಯ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಗೆಲುವು ಸಾಧಿಸಿದ್ದಾರೆ. ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಎನ್ ಎ ಹ್ಯಾರಿಸ್ ಅವರು ಬಿಜೆಪಿಯ ವಾಸುದೇವ ಮೂರ್ತಿ ವಿರುದ್ಧ ಗೆಲುವು ಸಾಧಿಸಿದ್ಧಾರೆ. ಗಾಂಧಿನಗರ ಕ್ಷೇತ್ರದ ಕಾಂಗ್ರೆಸ್​ನ ದಿನೇಶ್ ಗುಂಡೂರಾವ್ ಅವರು ಬಿಜೆಪಿಯ ಸಪ್ತಗಿರಿ ಗೌಡ ವಿರುದ್ಧ ಗೆಲುವು ಸಾಧಿಸಿದ್ಧಾರೆ. ರಾಜಾಜಿನಗರ ಕ್ಷೇತ್ರದಲ್ಲಿ ಬಿಜೆಪಿಯ ಎಸ್. ಸುರೇಶ್ ಕುಮಾರ್ ಅವರು ಕಾಂಗ್ರೆಸ್​ನ ಜಿ. ಪದ್ಮಾವತಿ ವಿರುದ್ಧ ಗೆಲುವು ಸಾಧಿಸಿದ್ಧಾರೆ. ಗೋವಿಂದರಾಜ ನಗರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಪ್ರಿಯಾ ಕೃಷ್ಣ ಬಿಜೆಪಿಯ ಸೋಮಣ್ಣ ವಿರುದ್ಧ ಪರಾಭವಗೊಂಡಿದ್ಧಾರೆ. ವಿಜಯ ನಗರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಎಂ ಕೃಷ್ಣಪ್ಪ ಬಿಜೆಪಿಯ ಎಚ್ ರವೀಂದ್ರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​ನ ಜಮೀರ್ ಅಹ್ಮದ್ ಖಾನ್ ಬಿಜೆಪಿಯ ಎಂ. ಲಕ್ಷ್ಮೀನಾರಾಯಣ ವಿರುದ್ಧ ಗೆಲುವು ಸಾಧಿಸಿದ್ಧಾರೆ. ಚಿಕ್ಕಪೇಟೆ ಕ್ಷೇತ್ರದಲ್ಲಿ ಬಿಜೆಪಿಯ ಉದಯ್ ಗರುಡಾಚಾರ್ ಕಾಂಗ್ರೆಸ್​ನ ಆರ್ ವಿ ದೇವರಾಜ್ ವಿರುದ್ಧ ಗೆಲುವು ಸಾಧಸಿದ್ದಾರೆ. ಬಸವನಗುಡಿ ಕ್ಷೇತ್ರದ ರವಿ ಸುಬ್ರಮಣ್ಯ ಅವರು ಜೆಡಿಎಸ್​ನ ಬಾಗೇ ಗೌಡ ವಿರುದ್ಧ ಗೆಲುವು ಸಾಧಿಸಿದ್ಧಾರೆ. ಪದ್ಮನಾಭ ನಗರ ಕ್ಷೇತ್ರದಲ್ಲಿ ಬಿಜೆಪಿಯ ಆರ್ ಅಶೋಕ್​ ಅವರು ಜೆಡಿಎಸ್​ನ ಗೋಪಾಲ್ ವಿರುದ್ಧ ಗೆಲುವು ಸಾಧಿಸಿದ್ಧಾರೆ. ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಕಾಂಗ್ರೆಸ್​ನ ರಾಮಲಿಂಗಾ ರೆಡ್ಡಿ ಅವರು ಬಿಜೆಪಿಯ ಲಲ್ಲೇಶ್ ರೆಡ್ಡಿ ವಿರುದ್ಧ ಗೆಲುವು ಸಧಿಸಿದ್ಧಾರೆ. ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿಯ ಅರವಿಂದ ಲಿಂಬಾವಳಿ ಅವರು ಕಾಂಗ್ರೆಸ್​ ಎಚ್​.ಸಿ ಶ್ರೀನಿವಾಸ್​ ವಿರುದ್ಧ ಗೆಲುವು ಸಾಧಿಸಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯ ಸತೀಶ್ ರೆಡ್ಡಿ ಅವರು ಕಾಂಗ್ರೆಸ್​ನ ಸುಷ್ಮಾ ರಾಜಗೋಪಾಲ ರೆಡ್ಡಿ ವಿರುದ್ಧ ಗೆಲುವು ಸಾಧಿಸಿದ್ಧಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಎಂ ಕೃಷ್ಣಪ್ಪ ಅವರು ತಮ್ಮ ಸಮೀಪ ಸ್ಪರ್ಧಿ ಆರ್ ಕೆ ರಮೇಶ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಆನೇಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಬಿ ಶಿವಣ್ಣ ಬಿಜೆಪಿಯ ಎ ನಾರಾಯಣಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದಾರೆ.ಇನ್ನು ಜಯನಗರ ಹಾಗೂ ರಾಜರಾಜೇಶ್ವರಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿಲ್ಲ. ಹೀಗಾಗಿ ಈ ಎರಡು ಕ್ಷೇತ್ರಗಳಲ್ಲಿ ಯಾಪ ಪಕ್ಷಕ್ಕೆ ಗೆಲುವು ಸಿಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

– ನ್ಯೂಸ್​ ಬ್ಯೂರೋ ಸುದ್ದಿ ಟಿವಿ

0

Leave a Reply

Your email address will not be published. Required fields are marked *