ಸಿಎಂ ಹೆಚ್​ಡಿ ಕುಮಾರಸ್ವಾಮಿ ಜನತಾ ದರ್ಶನ….

ಕಳೆದ ಬಾರಿ ಸಿಎಂ ಆಗಿದ್ದ ಸಂದರ್ಭದಲ್ಲಿ ಹೆಚ್​ಡಿ ಕುಮಾರಸ್ವಾಮಿ ಪ್ರಾರಂಭಸಿದ್ದ ಗ್ರಾಮ ವ್ಯಾಸ್ತವ್ಯ ಜನತಾ ದರ್ಶನ ಅವರ ಜನಪ್ರಿಯತೆಯನ್ನು ತಂದು ಕೊಟ್ಟಿತ್ತು..ಇದೀಗ ಹೆಚ್​ಡಿಕೆ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ ಮತ್ತೆ ಗ್ರಾಮ ವಾಸ್ತವ್ಯ ಜನಾತ ದರ್ಶನವನ್ನು ಆರಂಭಿಸುತ್ತಿದ್ದಾರೆ..ಈ ಗ್ರಾಮದ ಜನ ನಾಡಿನ ದೊರೆಯ ಬರುವಿಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ…ಹೆಚ್.ಡಿ.ಕುಮಾರಸ್ವಾಮಿ ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನಪ್ರಿಯತೆ ತಂದುಕೊಟ್ಟಿದ್ದು, ಗ್ರಾಮ ವಾಸ್ತವ್ಯ ಕಾರ್ಯಕ್ರಮ.ಅದರಂತೆ ರಾಜ್ಯದ ಗಡಿ ಜಿಲ್ಲೆ ಚಾಮರಾಜನ ಗರ ತಾಲೂಕಿನ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಡಗಲಮೋಳೆ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಹೆಚ್ಡಿಕೆ ರಾಜ್ಯದ ಗಮನ ಸೆಳೆದಿದ್ದರು.

ಅಂದಹಾಗೆ ಹಿಂದುಳಿದ ವರ್ಗದ ಉಪ್ಪಾರ ಸಮುದಾಯವೇ ಇರುವ ಬಡಗ ಲಮೋಳೆಯಲ್ಲಿ ಸುಮಾರು120 ಕುಟುಂಬಗಳಿವೆ. ಗ್ರಾಮದ ತುಂಬೆಲ್ಲಾ ಗುಡಿಸಲು ಮನೆಗಳಿದ್ದವು.ಸರಿಯಾದ ರಸ್ತೆಗಳಿರ್ಲಿಲ್ಲ..ಚರಂಡಿಗಳಂತು ದೂರದ ಮಾತು..ಆದ್ರೆ ಸಿಎಂ ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ಹೂಡಿನ ನಂತರ ಈ ಗ್ರಾಮದ ಚಿತ್ರಣವೇ ಬದಲಾಯಿತು ರಸ್ತೆ ನಿರ್ಮಾಣವಾಯಿತು, ವಿದ್ಯುತ್ ಸೌಲಭ್ಯ ದೊರೆಯಿತು ವಿದ್ಯುತ್​ ಸಂಪರ್ಕ ಬಂತು ಹೀಗೆ ಗ್ರಾಮ ಸಂಪೂರ್ಣವಾಗಿ ಅಭಿವೃದ್ಧಿಯಾಯಿತು..ಅಂದು ಸಿಎಂ ಕುಮಾರಸ್ವಾಮಿ ಸಿದ್ದರಾಜು ಎನ್ನುವವರ ಮನೆಯಲ್ಲಿ ವಾಸ್ತವ್ಯ ಹೂಡಿದ್ರು..ಆದ್ರೆ ಅಂದು ಕುಮಾರಸ್ವಾಮಿ ಬಂದು ಹೋದ ನಂತ್ರ ಯಾವುದೇ ಜನಪ್ರತಿನಿಧಿಗಳು ಇತ್ತ ತಲೆಹಾಕಿ ನೋಡಿಲ್ಲ…ಈಗ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ..ಮತ್ತೆ ಎಚ್​ಡಿಕೆ ಈ ಗ್ರಾಮಕ್ಕೆ ಹೆಚ್​ಡಿಕೆ ಆಗಮನದ ನಿರೀಕ್ಷೆಯಲ್ಲಿದ್ದಾರೆ ಸಿದ್ದರಾಜು…ಒಟ್ನಲ್ಲಿ ಸಿಎಂ ಕುಮಾರಸ್ವಾಮಿ ಈ ಗ್ರಾಮಕ್ಕೆ ತೆರಳಿ ಅಲ್ಲಿನ ಜನರ ಸಮಸ್ಯೆಯನ್ನು ಆಲಿಸಲಿ ಅನ್ನೋದೆ ನಮ್ಮ ಆಶಯ

ಸುಂದರ್ ಸುದ್ದಿಟಿವಿ ಚಾಮರಾಜನಗರ.

0

Leave a Reply

Your email address will not be published. Required fields are marked *