ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್​ ನೌಕರರ ಪ್ರತಿಭಟನೆ..

ಬ್ಯಾಂಕ್ ನೌಕರರು ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಿನ್ನೆ ದೇಶದಾದ್ಯಂತ ಬೀದಿಗಿಳಿದು ಪ್ರೊಟೆಸ್ಟ್​ ಮಾಡಿದ್ರು. ಪ್ರತಿಭಟನೆ ಬಿಸಿ ನೇರವಾಗಿ ಗ್ರಾಹಕರಿಗೆ ತಟ್ಟಿದ್ದು, ಬೆಂಗಳೂರು ನಗರದಾದ್ಯಂತ ಸಾರ್ವಜನಿಕರು ಪರದಾಟ ನಡೆಸಿದ್ರು.ಒಂದೆಡೆ ಸಂಪೂರ್ಣ ಬಂದ್ ಆಗಿರುವ ಬ್ಯಾಂಕ್ ಗಳು… ಇದ್ರಿಂದ ನಿರಾಸೆಗೊಂಡು ಹಿಂದಿರುಗುತ್ತಿರುವ ಗ್ರಾಹಕರು.. ಇದರ ನಡುವೆ ಪ್ರತಿಭಟನೆ ನಡೆಸುತ್ತಿರುವ ಬ್ಯಾಂಕ್ ನೌಕರರು.. ಇದು ಯುನೈಡೆಟ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಕರೆ ನೀಡಿದ್ದ ಮುಷ್ಕರದ ಎಫೆಕ್ಟ್..ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೇಶಾದ್ಯಂತ ನಿನ್ನೆಯಿಂದ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಲಾಗಿದೆ. ಮೊದಲ ದಿನವೇ ನೌಕರರ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯ್ತು. ಬೆಂಗಳೂರು ನಗರಾದ್ಯಂತ ಬಹುತೇಕ ಬ್ಯಾಂಕ್ ಗಳು ಸಂಪೂರ್ಣ ಬಂದ್ ಆಗಿದ್ವು. ಇತ್ತೀಚೆಗೆ ಆರಂಭವಾದ ಕೆಲವೇ ಕೆಲವು ಖಾಸಗಿ ಬ್ಯಾಂಕ್ ಗಳಲ್ಲಿ ಮಾತ್ರ ಗ್ರಾಹಕರಿಗೆ ಸೇವೆ ಲಭ್ಯವಾಗುತ್ತಿದ್ದರ ಹೊರತಾಗಿ ಇನ್ನುಳಿದ ಯಾವುದೇ ಬ್ಯಾಂಕ್ ಗಳಲ್ಲಿ ಸೇವೆ ಲಭ್ಯವಿರಲಿಲ್ಲ. ಇನ್ನು ಇತ್ತ ಮೈಸೂರು ಬ್ಯಾಂಕ್ ಸರ್ಕಲ್​​ನಲ್ಲಿ ಸಾವಿರಾರು ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ರು. ಈ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ರು.

ಇನ್ನು ಬ್ಯಾಂಕ್ ನೌಕರರು ಶೇಖಡಾ 2 ರಷ್ಟು ವೇತನ ಪರಿಷ್ಕರಣೆಗಾಗಿ ಹಲವು ದಿನಗಳಿಂದ ಒತ್ತಾಯಿಸುತ್ತಿದ್ರು. ಅಲ್ಲದೆ ಸರ್ಕಾರದ ಗಮನ ಸೆಳೆಯಲು ಹಲವು ಪ್ರತಿಭಟನೆಯನ್ನೂ ನಡೆಸಿದ್ರು. ಹೀಗಾಗಿ ಇತ್ತೀಚೆಗಷ್ಟೆ ಸಂಧಾನ ಸಭೆಯನ್ನು ಕರೆಯಲಾಗಿತ್ತು. ಆದ್ರೆ ಸಭೆ ವಿಫಲವಾದ ಹಿನ್ನೆಲೆ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿಲಾಗಿದೆ. ಈ ಮುಷ್ಕರಲ್ಲಿ ದೇಶಾದ್ಯಂತ 10 ಲಕ್ಷ ಬ್ಯಾಂಕ್ ನೌಕರರು ಮತ್ತು ಕರ್ನಾಟಕ ರಾಜ್ಯದಲ್ಲಿ 1 ಲಕ್ಷ ಬ್ಯಾಂಕ್ ನೌಕರರು ಭಾಗವಹಿಸಿದ್ರು. ಹೀಗಾಗಿ ಬ್ಯಾಂಕ್ ಗಳಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿಗಳಿಲ್ಲದ ಕಾರಣ ಬಹುತೇಕ ಬ್ಯಾಂಕ್ ಗಳು ಬಂದ್ ಆಗಿದ್ವು. ಇನ್ನು ಮೊದಲ ದಿನವೇ ಬ್ಯಾಂಕ್ ಬಂದ್ ಆದ ಕಾರಣ ಗ್ರಾಹಕರು ಸಾಕಷ್ಟು ಪರದಾಡಬೇಕಾಯ್ತು. ಹೆಚ್ಚಿನ ಎಟಿಎಮ್ ಗಳಲ್ಲಿ ನಗದು ಕೂಡ ಲಭ್ಯವಿರಲಿಲ್ಲ. ಇತ್ತ ಬ್ಯಾಂಕ್ ಗೆ ತೆರಳಿದ್ರೆ ಅಲ್ಲಿಯೂ ಸೇವೆ ಲಭ್ಯವಿರಲಿಲ್ಲ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗುತ್ತಿದ್ರು.ಇನ್ನು ಕೆಲ ಎಟಿಎಮ್​ಗಳಲ್ಲಿ ನಗದು ಲಭ್ಯವಿದ್ದ ಕಾರಣ ಗ್ರಾಹಕರು ಕೊಂಚ ಸಮಾಧಾನದಿಂದ ಹಿಂದಿರುಗಿದ್ರು. ಇಂದು ಕೂಡ ಮುಷ್ಕರವಿರುವುದರಿಂದ ಎಟಿಎಮ್ ಗಳಲ್ಲಿ ನಗದು ಕೊರತೆ ಎದುರಾಗುವ ಸಾಧ್ಯತೆ ಇದೆ. ಒಟ್ಟಾರೆ ಬ್ಯಾಂಕ್ ನೌಕರರು ಮತ್ತು ಕೇಂದ್ರ ಸರ್ಕಾರದ ಹಗ್ಗ ಜಗ್ಗಾಟದಿಂದ ಗ್ರಾಹಕರು ಪರದಾಡಬೇಕಾಯ್ತು.

ಸುಬ್ರಹ್ಮಣ್ಯ ಎಸ್ ಹಂಡಿಗೆ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *