ರಂಗೇರಿದೆ ರಾಜ್ಯಸಭಾ ಅಖಾಡ..!

ರಾಜ್ಯಸಭೆ ಚುನಾವಣೆಗೆ ಕೈಪಾಳಯ ಸಜ್ಜಾಗಿದೆ. ಈ ಬಾರಿ ರಾಜ್ಯಸಭೆಗೆ ಮೂವರು ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳೋದಕ್ಕೆ ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ಈ ಮೂಲಕ ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನ ಬೆಂಬಲಿಸಲಿದೆ ಅನ್ನೋ ಅನುಮಾನಗಳಿಗೆ ತೆರೆ ಬಿದ್ದಿದೆ..ರಾಜ್ಯಸಭೆಯಲ್ಲಿ ಖಾಲಿ ಇರುವ 4 ಸ್ಥಾನಗಳಿಗೆ ಮಾರ್ಚ್23 ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಜೆಡಿಎಸ್ ಅಭ್ಯರ್ಥಿಯಾಗಿ ಉದ್ಯಮಿ ಬಿ.ಎಂ.ಫಾರೂಕ್ ನಾಮಪತ್ರ ಸಲ್ಲಿಸಿದೆ. ಈ ಚುನಾವಣೆಯಲ್ಲಿ ಕೈಪಡೆ ಜೆಡಿಎಸ್ ಬೆಂಬಲಿಸಲಿದೆ ಅನ್ನೋ ಊಹಾಪೋಹಗಳಿಗೆ ಕಾಂಗ್ರೆಸ್ ತೆರೆ ಎಳೆದಿದೆ. ದಲಿತ ಕೋಟಾದಡಿಯಲ್ಲಿ ಎಲ್. ಹನುಮಂತಯ್ಯ, ಅಲ್ಪಸಂಖ್ಯಾತ ಕೋಟಾದಲ್ಲಿ ಸೈಯದ್ ನಾಸೀರ್ ಹುಸೇನ್, ಒಕ್ಕಲಿಗರ ಕೋಟಾದಲ್ಲಿ ಜಿ.ಸಿ. ಚಂದ್ರಶೇಖರ್ ರನ್ನ ಅಂತಿಮಗೊಳಿಸಿದ್ದು, ಕಾಂಗ್ರೆಸ್ 3ರನ್ನು ಗೆಲ್ಲಿಸಿಕೊಳ್ಳುವುದಕ್ಕೆ ಮುಂದಾಗಿದೆ..

ರಾಜ್ಯಸಭೆಗೆ ಅಭ್ಯರ್ಥಿಗಳನ್ನ ಹಾಕುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯದ ಹಿರಿಯ ನಾಯಕರ ಮಧ್ಯೆ ಸ್ವಲ್ಪ ಮಟ್ಟಿನ ಭಿನ್ನಬಿಪ್ರಾಯ ಮೂಡಿತ್ತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬೆಂಬಲಿಸಬೇಕು ಅನ್ನೋದು ಹಲವರ ನಿಲುವಾಗಿತ್ತು. ಆದರೆ ಸಿದ್ದರಾಮಯ್ಯ ಮಾತ್ರ 3 ಅಭ್ಯರ್ಥಿಗಳನ್ನ ಕಣಕ್ಕಿಳಿಸಬೇಕು ಎಂದು ಪಟ್ಟುಹಿಡಿದಿದ್ರು. ಕಡೆಗೂ ಸಿದ್ದರಾಮಯ್ಯ ನವರ ಮಾತಿಗೆ ಕೈ ವರಿಷ್ಠರು ಸೈ ಎಂದಿದ್ದಾರೆ. ಅದರಲ್ಲಿ ಮೂವರು ಕನ್ನಡಿಗರನ್ನು ಕಣಕ್ಕಿಳಿಸಬೇಕೆಂಬ ವಿಚಾರದಲ್ಲೂ ಕಾಂಗ್ರೆಸ್ ಬುದ್ಧಿವಂತಿಕೆ ಪ್ರದರ್ಶಿಸಿದ್ದು ಟಿಕೆಟ್ ಫೈನಲ್ ಮಾಡಿದೆ..ಎಲ್ ಹನುಮಂತಯ್ಯ ಕೆಪಿಸಿಸಿ ಉಪಾಧ್ಯಕ್ಷರಾಗಿ, ಮಾದಿಗ ಸಮುದಾಯಕ್ಕೆ ಪ್ರತಿನಿಧ್ಯ ನೋಡಿಕೊಳ್ಳಲಿದ್ದಾರೆ. ಅದೇ ರೀತಿ ಕೆಪಿಸಿಸಿ ಕಾರ್ಯದರ್ಶಿಯಾಗಿರುವ ಜಿ.ಸಿ.ಚಂದ್ರಶೇಖರ್, ಜಿ.ಪರಮೇಶ್ವರ್ ಅವರಿಗೆ ಆಪ್ತರಾಗಿದ್ದು, ಆ ಸ್ನೇಹ ಕೈಹಿಡಿದಿದೆ. ಇನ್ನು ನಾಸಿರ್ ಹುಸೇನ್ ಎಐಸಿಸಿ ವಕ್ತಾರರಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಸೀರ್ ಅವರ ಬೆನ್ನಿಗೆ ನಿಂತಿದೆ. ಒಮ್ಮತದಿಂದ ಅಭ್ಯರ್ಥಿ ಗಳನ್ನ ಕಣಕ್ಕಿಳಿಸುವಲ್ಲಿ ಕೈ ಪಾಳಯ ಯಶಸ್ಸಿಯಾಗಿದೆ. ಇಂದು ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಲಿದ್ದಾರೆ..

ಇನ್ನು ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ಗೊಂದಲ ಸೃಷ್ಟಿಸಿತ್ತು. ಬಿಜೆಪಿ ಹೈಕಮಾಂಡ್ ಸಹ ಅಳೆದೂ ತೂಗಿ ಉದ್ಯಮಿ ರಾಜೀವ್ ಚಂದ್ರಶೇಖರ್ ರವರ ಹೆಸರನ್ನು ಘೋಷಿಸಿದೆ. ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಜೆಡಿಎಸ್ ಪಕ್ಷದಿಂದ ಉದ್ಯಮಿ.ಬಿ.ಎಂ.ಫಾರೂಕ್ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ..ಒಂದು ಸ್ಥಾನದ ಬದಲು ಕಾಂಗ್ರೆಸ್ 2 ಸ್ಥಾನಗಳನ್ನು ಗೆಲ್ಲಿಸಿಕೊಳ್ಳುವಷ್ಟು ಶಾಸಕರನ್ನು ಹೊಂದಿದೆ. ಕಾಂಗ್ರೆಸ್ ನ 3ನೇ ಅಭ್ಯರ್ಥಿ ಆಯ್ಕೆಗೆ ಬೆರಳೆಣಿಕೆ ಮತಗಳ ಕೊರತೆ ಆಗಲಿದೆ. ಕಾಂಗ್ರೆಸ್ ಪಕ್ಷೇತರ ಶಾಸಕರ ಬೆಂಬಲ ಪಡೆದು ತನ್ನ 3ನೇ ಅಭ್ಯರ್ಥಿ ಗೆಲ್ಲಿಸಿಕೊಳ್ಲಿದೆ. ಇನ್ನು 2ಸ್ಥಾನಗಳ ಪೈಕಿ ಬಿಜೆಪಿ ಈ ಸಲ ಒಬ್ಬಬರನ್ನು ಮಾತ್ರ ಗೆಲ್ಲಿಸಿಕೊಳ್ಳುವಷ್ಟು ಶಾಸಕರ ಮತಗಳನ್ನು ಹೊಂದಿದೆ. ಆದರೆ ಜೆಡಿಎಸ್ ಅಭ್ಯರ್ಥಿ ಗೆಲ್ಲುವಷ್ಡು ಮತಗಳು ಪಕ್ಷದಲ್ಲಿಲ್ಲ. ಸಧ್ಯ ಜೆಡಿಎಸ್ ಶಾಸಕರು ಕೇವಲ 39 ಮಾತ್ರ ಇದ್ದು, ಪಕ್ಷದ ಅಭ್ಯರ್ಥಿ ಫಾರೂಕ್ ಗೆಲುವಿಗೆ 14 ಮತಗಳ ಕೊರತೆ ಎದುರಾಗಲಿದೆ. ಹಾಗಾಗಿ ಜೆಡಿಎಸ್ ಗೆಲುವು ಕಷ್ಟ ಎನ್ನಲಾಗಿದೆ..

ಪೊಲಿಟಿಕಲ್ ಬ್ಯೂರೋ ರಿಪೋರ್ಟ್, ಸುದ್ದಿ ಟಿವಿ ಬೆಂಗಳೂರು.

0

Leave a Reply

Your email address will not be published. Required fields are marked *