ಕರ್ನಾಟಕದಲ್ಲಿ ಸಂವಿಧಾನದ ಮೇಲೆ ದಾಳಿ ಆರಂಭವಾಗಿದೆ: ಪ್ರಕಾಶ್ ರೈ

ಕರ್ನಾಟಕದ ಸಂವಿಧಾನದ ಮೇಲೆ ದಾಳಿ ಆರಂಭವಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. ಇಲ್ಲಿ ನಾಗರಿಕ ತೀರ್ಮಾನಕ್ಕೆ ಬೆಲೆ ಇಲ್ಲ ಎಂದಿರುವ ಅವರು, ಪ್ರಸಕ್ತ ವಿದ್ಯಮಾನಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು, ರೆಸಾರ್ಟ್​​ನಲ್ಲಿರುವ ಶಾಸಕರ ದೃಶ್ಯಗಳನ್ನು ನೋಡುವುದಕ್ಕೆ ಸಂತೋಷವಾಗುತ್ತಿದೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ, ಇಂಗ್ಲಿಷ್ ಮತ್ತು ಕನ್ನಡ ಅವತರಣಿಕೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ರಾಜ್ಯದ ಅಂತಂತ್ರ ವಿಧಾನಸಭೆ ಸೃಷ್ಟಿ ಮತ್ತು ಬಹುಮತವಿಲ್ಲದ ಬಿಜೆಪಿ ಅಧಿಕಾರ ಹಿಡಿದಿದ್ದರ ಕುರಿತು ಟ್ವೀಟ್​​ನಲ್ಲಿ ಪ್ರತಿಕ್ರಿಯಿಸಿರುವ ಬಹುಭಾಷಾ ನಟ ಪ್ರಕಾಶ್ ರೈ, ನಮ್ಮ ಕ್ಷೇತ್ರದ ಪ್ರತಿನಿಧಿಗಳ ಮೇಲೆ ನಾವಿಟ್ಟ ನಂಬಿಕೆಯನ್ನು, ಇವರು ಇನ್ಯಾರಿಗೋ ಮಾರಿಕೊಳ್ಳುವುದನ್ನು ಬೇರೆ ದಾರಿ ಇಲ್ಲದೆ ಈ ರಾಜಕಾರಣಿಗಳ ದೊಂಬರಾಟವನ್ನು ನಾವು ಒಪ್ಪಿಕೊಳ್ಳುವಂತೆ ನಮ್ಮ ಮೇಲೆ ಅಭಿಪ್ರಾಯ ಹೇರುವುದನ್ನು ನಾವು ಪ್ರಶ್ನಿಸದಿದ್ದರೆ ನಮ್ಮ ಈ ಅಸಹಾಯಕತೆಗೆ, ನಮ್ಮ ಅಮಾಯಕತೆಯ ದುರುಪಯೋಗಕ್ಕೆ, ಯಾರು ಕಾರಣವೆಂದು ನಾವು ಬೇಗ ಗೊತ್ತು ಮಾಡಿಕೊಳ್ಳದಿದ್ದರೆ, ಮತ್ತೊಮ್ಮೆ ಸೋಲುವುದು ನಾವೇ!! ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಬಿಜೆಪಿ ವಿರುದ್ಧದ ಸುಮ್ಮನೇ ಕೇಳುತ್ತಿದ್ದೇನೆ ಅಭಿಯಾನವನ್ನು ಮುಂದುವರೆಸಿದ್ದಾರೆ.

ಕರ್ನಾಕದಲ್ಲಿ ಯಾರ ಪರ ಜನಾದೇಶವಿದೆ? ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಬಿಜೆಪಿ 104 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ, ಕಾಂಗ್ರೆಸ್ 78 ಕ್ಷೇತ್ರಗಳಲ್ಲಿ ಗೆದ್ದಿದೆ. ಸಿಎಂ, ಸಚಿವರು ಭಾರಿ ಅಂತರದಲ್ಲಿ ಸೋತಿದ್ದಾರೆ ಎಂದಿರುವ ಅವರು, ಜೆಡಿಎಸ್​ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್​​ನ ಬಹುತೇಕರು ಠೇವಣಿ ಕಳೆದುಕೊಂಡಿದ್ದಾರೆ. ಜನ ಎಲ್ಲವನ್ನೂ ಅರಿಯುವಷ್ಟು ಬುದ್ಧಿವಂತರಿದ್ದಾರೆ ಎಂದು ಟ್ವೀಟ್ ಮೂಲಕ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ ಎಂದು ಬಿ ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ನೀವು ನಮ್ಮ ಮೇಲೆ ವಿಶ್ವಾಸವಿಟ್ಟು ಮತ ಚಲಾಯಿಸಿದ್ದರಿಂದ ಇದು ಸಾಧ್ಯವಾಗಿದೆ ಎಂದಿರುವ ಅವರು, ರಾಜ್ಯವು ಪ್ರಗತಿಪಥದಲ್ಲಿ ಸಾಗಬೇಕೆಂಬ ನಿಮ್ಮ ಆಕಾಂಕ್ಷೆಯನ್ನು ನಿಜ ಮಾಡುವುದು ನಮ್ಮ ಹೊಣೆ. ಎಂದಿನಂತೆ ನಮ್ಮ ಜೊತೆಗಿರಿ. ನಿಮ್ಮ ಕನಸುಗಳನ್ನು ನನಸಾಗಿಸುತ್ತೇವೆ. ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

0

Leave a Reply

Your email address will not be published. Required fields are marked *