ಚಂದನ್ ಶೆಟ್ಟಿಗಾಗಿ ಕಾಯುತ್ತಿದೆ 10 ಕೋಟಿಯ ಆಫರ್!!!

ಸುದ್ದಿ ಟಿವಿ ಸ್ಟುಡಿಯೋದಲ್ಲಿ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ. ಚಂದನವನದ ಚಂದನದ ಬೊಂಬೆ : ಚಂದನ್ ಶೆಟ್ಟಿ!!! ಚಂದನ್’ಗಾಗಿ ಕಾಯುತ್ತಿದೆ 10 ಕೋಟಿಯ ಆಫರ್! 5 ಸಿನೆಮಾ ಮತ್ತು 5 ಈವೆಂಟ್ ಚಂದನ್ ಆಫರ್! ಬಿಗ್ ಬಾಸ್ ಮನೆಯಿಂದ ಬಂದ ಚಂದನ್’ಗೆ ಅವಕಾಶಗಳ ಮಹಾ ಮೇಳ ಕಾಯುತ್ತಿದೆ…ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ. ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅದೃಷ್ಟ ಖುಲಾಯಿಸಿ ಬಿಟ್ಟಿದೆ. ನಾಗರ ಭಾವಿಯ ಹತ್ತಡಿ ಸುತ್ತಳತೆಯ ಮನೆಯಲ್ಲಿ ಬದುಕು ನಡೆಸುತ್ತಿದ್ದ ಚಂದನ್ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿರುವಂತೆಯೇ 5 ಕೋಟಿಯ ಈವೆಂಟ್ ಕಾಯುತ್ತಿದೆ. ಜೊತೆಗೆ 5 ಕೋಟಿಯ ಸಿನೆಮಾ ಅವಕಾಶ ಕೂಡ.ಕಾಯುತ್ತಿದೆ. ಒಟ್ಟಿನಲ್ಲಿ ಅದೃಷ್ಟ ಅಟ್ಟಿಸಿಕೊಂಡು ಬಂದಿದೆ. ಈ ವಿಚಾರವನ್ನು ಚಂದನ್ ಶೆಟ್ಟಿ ಬಹಿರಂಗ ಪಡಿಸಿದ್ದು ಸುದ್ದಿ ಟಿವಿ’ಯ ಸಂದರ್ಶನಕ್ಕಾಗಿ ಬಂದಿದ್ದಾಗ.

ಸಮಯ ಮಧ್ಯಾನ್ಹ 2 ಗಂಟೆಗೆ ಸರಿಯಾಗಿ ಸುದ್ದಿಟಿವಿ ಕಚೇರಿ ಪ್ರವೇಶಿಸಿದ ಚಂದನ್ ಅವರಿಗೆ ಚೆಂದದ ಹೂಗುಚ್ಛ ನೀಫಿ ಸ್ವಾಗತಿಸಲಾಯಿತು. ನಂತರ ಸುದ್ದಿಟಿವಿ ಸ್ಟುಡಿಯೋವನ್ನು ವೀಕ್ಷಿಸಿದ ಚಂದನ್ ಅಚ್ಚರಿಯಿದ ವಾಹ್ ಎಂಬ ಉದ್ಗಾರ ತೆಗೆದರು. ನಂತರ ನಡೆದ ಸಂದರ್ಶನದಲ್ಲಿ ಅಪರ್ಣಾ ಕುತ್ಯಾಡಿ ಜೊತೆ ತಮ್ಮ ಅಂತರಂಗವನ್ನು ಬಿಚ್ಚಿಟ್ಟರು. ಬಿಗ್ ಬಾಸ್ ಮನೆ ಇಂಥಾದ್ದೊಂದು ಅದ್ಭುತ ಅನುಭವಕ್ಕೆ ಕಾರಣವಾದದ್ದನ್ನು ಹೇಳಿಕೊಂಡು ಅಚ್ಚರಿ ಪಟ್ಟರು.ಇದೇ ಹೊತ್ತಿಗೆ ಚಂದನ್ ಜೊತೆ ಬಂದಿದ್ದ ಅವರ ಕುಚಿಕು ಗೆಳೆಯ ದಿನೇಶ್ ತಮ್ಮ ಗೆಳೆಯನ ಒಳ್ಳೆಯತನದ ಬಗ್ಗೆ ಹೇಳಿಕೊಂಡರು. ಮತ್ತೊಬ್ಬ ಗೆಳೆಯ, ನಿರ್ದೇಶಕ ರವಿವರ್ಮ ಕೂಡ ಚಂದನ್’ಗೆ ಸಾಥ್ ನೀಡಿದ್ದರು. ಇವರ ಮುಂದಿನ ಚಿತ್ರದಲ್ಲಿ ಚಂದನ್ ಹೀರೋ. ಚಿತ್ರದ ಹೆಸರು : ವಿಚಿತ್ರ ಪ್ರೇಮ ಕಥೆ. ಇದು ಹಳೆಯ ಕಮಿಟ್ಮೆಂಟ್. ಬಿಗ್ ಬಾಸ್ ಮನೆಗೆ ಹೋಗುವ ಮೊದಲೇ ರೆಡಿಯಾಗಿದ್ದ ಸ್ಕ್ರಿಪ್ಟ್. ಈಗ ಈ ಚಿತ್ರಕ್ಕೆ ವಿಶೇಷವಾದ ಕಳೆ ಬಂದುಬಿಟ್ಟಿದೆ.

ಇದಲ್ಲದೇ, ಎಸ್.ನಾರಾಯಣ್ ಅವರು ಚಂದನ್ ಕಾಲ್’ಶೀಟ್ ಕೇಳಿದ್ದಾರೆ. ಒಂದಷ್ಟು ಇತರ ಆಫರ್’ಗಳಿವೆ. ಬಂದಿರುವ ಆಫರ್ ಪ್ರಕಾರ ಸಿಗುವ ಸಂಭಾವನೆಯ ಮೊತ್ತವೆ 5 ಕೋಟಿ ತಲುಪಬಹುದಂತೆ! ಇನ್ನು ಚಂದನ್ dost ದಿನೇಶ್ ಹೇಳುವ ಪ್ರಕಾರ 5 ಕೋಟಿ ಸಂಭಾವನೆಯ ಈವೆಂಟ್ ಇವರಿಗಾಗಿ ಕಾಯುತ್ತಿದೆಯಂತೆ! ಒಟ್ಟಿನಲ್ಲಿ ಅದೃಷ್ಟ ಖುಲಾಯಿಸಿದೆ.ಚಂದನ್ ಬೆಳೆದ ವಾತಾವರಣವನ್ನು ಮರೆಯದೇ ಜಾಣತನದ ಹೆಜ್ಜೆ ಇಟ್ಟರೆ ಕನ್ನಡ ಚಿತ್ರರಂಗಕ್ಕೊಬ್ಬ ಅದ್ಭುತ ನಾಯಕ ಸಿಗುತ್ತಾನೆ. ಎಲ್ಲಾ ಮುಗಿದ ಮೇಲೆ ಸುದ್ಫಿಟಿವಿ ಸ್ಟುಡಿಯೋವನ್ನು ಸತ್ತಾಡಿದ ಚಂದನ್ ಮತ್ತೆ ಬಿಗ್ ಬಾಸ್ ಮನೆ ಪ್ರವೇಶಿಸಿದ ಫೀಲ್’ನೊಂದಿಗೆ ಹೊರಟು ನಿಂತರು. ಚಂದನ್ ಜೊತೆ ಕ್ಯೂಟ್ ಅಪರ್ಣಾ ನಡೆಸಿದ ಸಂದರ್ಶನ ಸುದ್ದಿ ಟಿವಿಯಲ್ಲಿ ಸಧ್ಯದಲ್ಲೇ ಪ್ರಸಾರವಾಗಲಿದೆ…

ಗಣೇಶ್​.ಕಾಸರಗೋಡು. ಫಿಲ್ಮ್​ ಬ್ಯೂರೋ..ಸುದ್ದಿ ಟಿವಿ..

0

Leave a Reply

Your email address will not be published. Required fields are marked *