‘ಅಂಬಿಗೆ 66 ಅಲ್ಲ 16’..

66ನೇ ವಸಂತಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಕಾಲಿಟ್ಟಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನಿಗಳ ಜೊತೆ ಅಂಬಿ ಬರ್ತಡೇ ಆಚರಿಸಿಕೊಂಡರು. ಬೆಂಗಳೂರಿನ ಜೆಪಿ ನಗರದಲ್ಲಿರುವ ನಿವಾಸಕ್ಕೆ ಆಗಮಿಸಿ ತಡರಾತ್ರಿಯಿಂದಲೇ ಅಭಿಮಾನಿಗಳು ಶುಭಕೋರಿದ್ರು. ಇನ್ನು ನಿರ್ದೇಶಕ ಯೋಗರಾಜ್ ಭಟ್ ಅಂಬಿ ನಿನಗೆ 66 ಅಲ್ಲ 16 ಎಂದು ಹಾಡು ಬರೆದು ವಿಶೇಷವಾಗಿ ಶುಭಕೋರಿದ್ದಾರೆ. ಇನ್ನು ಅಭಿಮಾನಿಗಳು ವಿವಿಧ ರೀತಿಯಲ್ಲಿ ತಮ್ಮ ಮೆಚ್ಚಿನ ನಟನಿಗೆ ಶುಭಕೋರಿದ್ರು.ಇನ್ನು ಮಂಡ್ಯದ ಗಾಂಧಿ ಪಾರ್ಕಿನಲ್ಲಿ ಅಂಬಿ ಅಭಿಮಾನಿ ಸಂಘದಿಂದ ಹುಟ್ಟುಹಬ್ಬ ಆಚರಿಸಲಾಯ್ತು. ಅಂಬಿ ಫ್ಲೆಕ್ಸ್ ಗೆ ಕ್ಷೀರಾಭಿಷೇಕ ನಡೆಸಿ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಇದೆ ವೇಳೆ ಈ ವರ್ಷ Sslc ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಮಾಡಲಾಯಿತು.

0

Leave a Reply

Your email address will not be published. Required fields are marked *