ರಜನಿ ಜೊತೆ ರಾಜಕೀಯಕ್ಕೆ ಬರ್ತಾರಾ ಕಮಲ್..

ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿ
ಹಿಂದೂ ಭಯೋತ್ಪಾದನೆ ಇದೆ ಎಂದು ನಟ ಕಮಲ್​ ಹಾಸನ್​ ನೀಡಿರುವ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ. ಟ್ವೀಟರ್​ನಲ್ಲಿ ಕಮಲ್​ ಪರ ಕೆಲವರು ಬ್ಯಾಟಿಂಗ್​​ ಬೀಸಿದ್ರೆ ಇನ್ನೂ ಕೆಲವರು ಕಮಲ್​ ಹಾಸನ್​ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಟ ಕಮಲ್​ ಹಾಸನ್​ ನನ್ನ ದನಿಯನ್ನು ಕೊಲ್ಲಲಾಗದು ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ನನ್ನ ಹೋರಾಟ ಮುಂದುವರೆಯಲಿದ್ದು, ಎರಡು ದಿನಗಳಲ್ಲಿ ದೊಡ್ಡ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಕಮಲ್​ ಹಾಸನ್ ರ ಈ ಹೇಳಿಕೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ರಾಷ್ಟ್ರಗೀತೆ ವಿಚಾರವಾಗಿ ವಿವಾದ
ಸಿನಿಮಾ ಹಾಲ್​ಗಳಲ್ಲಿ ರಾಷ್ಟ್ರಗೀತೆಗೆ ಎದ್ದುನಿಂತು ಗೌರವ ಸೂಚಿಸೋ ವಿಚಾರವಾಗಿ ಸ್ಟಾರ್​ ವಾರ್​ ನಡೀತಿದೆ. ಇತ್ತೀಚೆಗೆ ತಮ್ಮ ಸಿನಿಮಾಗಿಂತಲೂ ವಿವಾದಾತ್ಮಕ ಹೇಳಿಕೆಯಿಂದಲೇ ಹೆಚ್ಚು ಫೇಮಸ್​ ಆಗುತ್ತಿರುವ ನಟ ಕಮಲ್​ ಹಾಸನ್​ ಮತ್ತೆ ರಾಷ್ಟ್ರಗೀತೆ ವಿಚಾರವಾಗಿ ಬಾಯಿ ಹರಿಬಿಟ್ಟಿದ್ದಾರೆ. ಕಂಡ ಕಂಡಲ್ಲಿ ನಿಂತುಕೊಳ್ಳಿ ಎಂದು ನನ್ನ ದೇಶಭಕ್ತಿಯನ್ನು ಪರೀಕ್ಷಿಸದಿರಿ. ಸಿಂಗಾಪುರದಲ್ಲಿ ಮಧ್ಯರಾತ್ರಿ ರಾಷ್ಟ್ರಗೀತೆ ಹಾಕಲಾಗುತ್ತೆ. ಹಾಗೆ ನೀವು ಕೂಡ ದೂರದರ್ಶನದಲ್ಲಿ ರಾಷ್ಟ್ರಗೀತೆ ಹಾಕಿ ಎಂದು ಟ್ವೀಟ್​ ಮಾಡಿದ್ದಾರೆ.

ಎಐಎಡಿಎಂಕೆ ಪಕ್ಷದ ವಿರುದ್ಧ ಕಿಡಿ
ಹಲವು ದಿನಗಳಿಂದ ರಾಜಕೀಯದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಕಮಲ್​ಹಾಸನ್​ ಆಡಳಿತ ಪಕ್ಷ ಎಐಎಡಿಎಂಕೆ ಭ್ರಷ್ಟಾಚಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಆಡಳಿತ ಹಾಗೂ ಪ್ರತಿಪಕ್ಷ ಎರಡರಲ್ಲೂ ಭ್ರಷ್ಟಾಚಾರ ತುಂಬಿಕೊಂಡಿದ್ದು, ನಾನು ನನ್ನದೇ ಪಕ್ಷ ಕಟ್ಟುತ್ತೇನೆ ಎಂದು ಕಮಲ್​ ಹಾಸನ್​ ಮುಂದಾಗಿದ್ದಾರೆ.

ಕಮಲ್​ ಜೊತೆ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಜನಿ..?
ರಾಜಕೀಯಕ್ಕೆ ಈ ಇಬ್ಬರು ಮಹಾನ್​ ದಿಗ್ಗಜರು ಪಾದಾರ್ಪಣೆ ಮಾಡ್ತೀವಿ ಅಂತ ಸುಳಿವು ನೀಡಿದ ಬೆನ್ನಲ್ಲೇ ಇವ್ರು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಚೆನ್ನೈನಲ್ಲಿ ನಟ ಪ್ರಭು ತಮ್ಮ ತಂದೆ ಹಾಗೂ ಹಿರಿಯ ನಟ ಶಿವಾಜಿ ಗಣೇಶನ್​ ಸ್ಮಾರಕ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ರಜನಿಕಾಂತ್​, ಕಮಲ್​ಹಾಸನ್​ ಇಬ್ಬರೂ ಒಂದೇ ವೇದಿಕೆ ಹಂಚಿಕೊಂಡ್ರು. ಈ ಮೂಲಕ ಕಮಲ್​ ಹಾಸನ್​, ರಜನಿಕಾಂತ್​ ಜೊತೆ ಕೈ ಜೋಡಿಸುವ ಸುಳಿವನ್ನೂ ನೀಡಿದ್ರು.

ಕೇಜ್ರಿವಾಲ್ ಭೇಟಿಯಾಗಿದ್ದ ಕಮಲ್
ಬಹು ದಿನಗಳಿಂದ ರಾಜಕೀಯ ಸೇರುವುದಾಗಿ ಹೇಳಿಕೆ ನೀಡಿದ್ದು, ಹಾಗೆ ಅದಕ್ಕೆ ತಕ್ಕಂತೆ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಸರ್ಕಾರದ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲಾ ವಾಗ್ದಾಳಿ ನಡೆಸುತ್ತ. ತಮಿಳಿಗರನ್ನು ಎಚ್ಚರಿಸುತ್ತಿದ್ದ ನಟ ಕಮಲ್​ ಹಾಸನ್​ ಯಾವ ರಾಜಕೀಯ ಪಕ್ಷ ಸೇರ್ತಾರೆ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ. ಅದಕ್ಕೆ ಇಂಬು ಕೊಡುವಂತೆ ಇಂದು ಕಮಲ್​ ಹಾಸನ್​ ದೆಹಲಿ ಸಿಎಂ​ ಅರವಿಂದ್​ ಕೇಜ್ರಿವಾಲ್​ರನ್ನು ಚೆನ್ನೈನ ತಮ್ಮ ನಿವಾಸದಲ್ಲಿ ಭೇಟಿಯಾಗಿದ್ರು. ಇಬ್ಬರು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸೋದಾಗಿ ಸಾರಿದ್ದಾರೆ.

0

Leave a Reply

Your email address will not be published. Required fields are marked *