ಕೆ.ಆರ್.ಎಸ್ ಭರ್ತಿಗೆ ಇನ್ನು ಕೆಲವೇ ಅಡಿಗಳು ಬಾಕಿ

ಕೊಡಗಿನಲ್ಲಿ ಭಾರೀ ಮಳೆಯಾಗ್ತಿರೋ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್. ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರ್ತಿದೆ. ಸತತ ನಾಲ್ಕು ವರ್ಷಗಳ ಬರಗಾಲದಿಂದ ಪೂರ್ಣ ಭರ್ತಿ ಆಗದಿದ್ದ ಡ್ಯಾಂ ಈಗ ತುಂಬುವ ಹಂತ ತಲುಪಿದೆ. ಗರಿಷ್ಠ 124 ಅಡಿಯುಳ್ಳ ಕೆ.ಆರ್.ಎಸ್ ಜಲಾಶಯದಲ್ಲಿ ನೀರಿನ ಮಟ್ಟ 112ಕ್ಕೆ ಏರಿಕೆಯಾಗಿದೆ. ಇದರ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ..

 ಈ ಬಾರಿ ಕಾವೇರಿ ಕೊಳ್ಳದಲ್ಲಿ ಹೆಚ್ಚಿನ ಮಳೆಯಾಗ್ತಿದೆ. ಇದ್ರಿಂದಾಗಿ ಈ ಭಾಗದ ಕೆ.ಆರ್‌ಎಸ್ ಜಲಾಶಯ ಸತತ 4 ವರ್ಷದ ಬರಗಾಲದ ನಂತರ ಭರ್ತಿಯಾಗುವ ಹಂತಕ್ಕೆ ತಲುಪಿದೆ. 124.80 ಗರಿಷ್ಠ ಅಡಿ ಎತ್ತರದ ಕೆ.ಆರ್.ಎಸ್ ಜಲಾಶಯ ಮಳೆಗಾಲದ ಆರಂಭದಲ್ಲೇ 112 ಅಡಿ ದಾಟಿದೆ. ಜಲಾಶಯ ಭರ್ತಿಗೆ ಇನ್ನು ಕೇವಲ 13 ಅಡಿ ಬಾಕಿ ಇದೆ. ಇದರಿಂದಾಗಿ ಇನ್ನು ಕೆಲವೇ ದಿನಗಳಲ್ಲಿ krs ಜಲಾಶಯ ಭರ್ತಿಯಾಗು ನಿರೀಕ್ಷೆಯಿದೆ.

ಇನ್ನು ಜಿಲ್ಲೆಯಲ್ಲಿ ಸತತ ೪ ವರ್ಷಗಳಿಂದ ಮಳೆ ಬೆಳೆ ಇಲ್ಲದೆ ಅನ್ನದಾತ ಕಂಗಾಲಾಗಿದ್ದ.‌ ಈ ಬಾರಿ‌ ಹೆಚ್ಚಿನ‌ ಮಳೆ ಬಿದ್ದು krs ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರ್ತಿರೋದಕ್ಕೆ ರೈತಾಪಿ ವರ್ಗಕ್ಕೆ ನೆಮ್ಮದಿ ತಂದಿದೆ. ಸತತ ಬರದಿಂದ ಆತ್ಮಹತ್ಯೆ ಹಾದಿ ಹಿಡಿದಿದ್ದ ಜಿಲ್ಲೆಯ ರೈತರಿಗೆ krs ಜಲಾಶಯ ಭರ್ತಿಯಾಗ್ತಿರೋದು ಸಂತಸ ಉಂಟುಮಾಡಿದೆ. ರೈತರು ಈ ಬಾರಿ‌ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿದ್ದು, ಸರ್ಕಾರ ಜಿಲ್ಲೆಯ ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಜಿಲ್ಲೆಯ ಕಾಲುವೆಗಳಿಗೆ ನೀರು ಹರಿಸಿ ಕೆರೆಗಳನ್ನು ತುಂಬಿಸಿ ರೈತರಿಗೆ ಅನುಕೂಲ ಮಾಡಿ ಕೊಡುವಂತೆ ರೈತ ಮತ್ತು ರೈತ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡ್ತಿದ್ದಾರೆ.

 ಒಟ್ನಲ್ಲಿ ಸತತ ನಾಲ್ಕು ವರ್ಷಗಳ ಬರಗಾಲದಿಂದ ಕೆಂಗೆಟ್ಟು ಹೋಗಿದ್ದ ಮಂಡ್ಯ ಜಿಲ್ಲೆಯ ಜನ್ರಿಗೆ ಈ ಬಾರಿ ಉತ್ತಮ ಮಳೆಯಿಂದ krs ಜಲಾಶಯ ಭರ್ತಿಯಾಗ್ತಿರೋದು ಜಿಲ್ಲೆಯ ಜನ್ರಲ್ಲಿ ಸಂತಸ ಮೂಡಿಸಿರೋದು ಮಾತ್ರ ಸುಳ್ಳಲ್ಲ.

0

Leave a Reply

Your email address will not be published. Required fields are marked *