ಅಗ್ನಾತ ಸ್ಥಳಕ್ಕೆ ಜೆಡಿಎಸ್ ಶಾಸಕರು ದೌಡು

ಬಿಜೆಪಿಯಿಂದ ಶಾಸಕರ ಆಪರೇಷನ್ ಕಮಲ ಭೀತಿ ಹಿನ್ನೆಲೆ, ಜೆಡಿಎಸ್ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ವರಿಷ್ಠರ ಪ್ಲಾನ್ ರೂಪಸಿದ್ದಾರೆ. ಸರ್ಕಾರ್ ರಚನೆ ಕುರಿತು ರೂಪ ರೇಷೆ ನಡೆಸಲು ಅಜ್ಞಾತ ಸ್ಥಳಕ್ಕೆ ಜೆಡಿಎಸ್ ನ ಶಾಸಕರು ಹೊರಟು ಹೋಗಿದ್ದಾರೆ. ಅದರಲ್ಲಿ ಸಿ ಎಸ್ ಪುಟ್ಟರಾಜು, ಸುರೇಶ್ ಗೌಡ, ಜಿ ಟಿ ದೇವೇಗೌಡ, ಸಾರಾ ಮಹೇಶ್ ಸೇರಿದಂತೆ ಮತ್ತಿತ್ತರ ಶಾಸಕರು ಗುಪ್ತ ಚರ್ಚೆ ಮಾಡಲು ತೆರಳಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಶಾಸಕರು ಸಭೆ ನಡೆಸುವ ಸಾಧ್ಯತೆ ಇತ್ತು, ಆದ್ರೆ ಜೆಡಿಎಸ್ ನ ಮಾಸ್ಟರ್ ಪ್ಲಾನ್ ತಿಳಿಯದಂತೆ ಜೆಡಿಎಸ್ ವರಿಷ್ಠರು ಎಚ್ಚರಿಕೆ ವಹಿಸುತ್ತಿದ್ದಾರೆ. ಅದೇರೀತಿ ಅಜ್ಞಾತ ಸ್ಥಳಕ್ಕೆ ಬರುವಂತೆ ಹೆಚ್ ಡಿ ಕುಮಾರಸ್ವಾಮಿ ಸೂಚಿಸಿದ್ದಾರೆ ಎನ್ನಲಾಗಿದೆ..? ಹಾಗಾಗಿ ಖಾಸಗಿ ಹೋಟೆಲ್ ನಲ್ಲಿದ್ದ ಶಾಸಕರು ಈಗ ಅಗ್ನಾತ ಸ್ಥಳಕ್ಕೆ ತೆರಳಿ ಗುಪ್ತ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

0

Leave a Reply

Your email address will not be published. Required fields are marked *