ಕಣಕುಂಬಿಯಲ್ಲಿ ಗ್ರಾಮ ವಾಸ್ತವ್ಯ ಹೂಡಲಿರುವ ಜೆಡಿಎಸ್​​ ಶಾಸಕ

ಬೆಳಗಾವಿ: ಗೋವಾ ವಿಧಾನಸಭೆ ಸ್ಪೀಕರ್ ನೇತೃತ್ವದ ತಂಡ ಕಳಸಾ ಕೊಳ್ಳಕ್ಕೆ ಭೇಟಿ ಕೊಟ್ಟ ಬೆನ್ನಲ್ಲೇ ಉತ್ತರ ಕರ್ನಾಟಕದ ಭಾಗದ ಜೆಡಿಎಸ್ ಶಾಸಕ ಎನ್.​ಎಚ್ ಕೋನರಡ್ಡಿ ಗೋವಾಕ್ಕೆ ತಿರಗೇಟು ನೀಡಲು ಸಿದ್ದರಾಗಿದ್ದಾರೆ. ಉತ್ತರ ಕರ್ನಾಟಕ ಭಾಗದ ಮಹದಾಯಿ ಹೋರಾಟದಲ್ಲಿ ಸದಾ ಸಕ್ರೀಯನಾಗಿರುವ ನವಲಗುಂದ ಶಾಸಕ ಎನ್​.ಎಚ್ ಕೋನರಡ್ಡಿ ಇಂದು ಕಣಕುಂಬಿಯಲ್ಲಿ ಗ್ರಾಮ ವಾಸ್ತವ್ಯದ ಮೂಲಕ ಮತ್ತೊಮ್ಮೆ ಮಹದಾಯಿ ಹೋರಾಟದ ಕಾವನ್ನು ಜಾಸ್ತಿ ಮಾಡುವ ಲಕ್ಷಣಗಳು ಕಂಡುಬರುತ್ತಿವೆ. ಇಂದು ರಾತ್ರಿ ಕಣಕುಂಬಿಯ ಮಾವುಲಿ ದೇವಸ್ಥಾನದಲ್ಲಿ ಶಾಸಕ ಕೋನರಡ್ಡಿ 200 ಕ್ಕೂ ಹೆಚ್ಚು ಜನ ತಮ್ಮ ಬೆಂಬಲಿಗರ ಜೊತೆ ಗ್ರಾಮ ವಾಸ್ತವ್ಯವನ್ನು ಮಾಡಿಲಿದ್ದು ರಾತ್ರಿ ಪೂರ್ತಿ ಮಹದಾಯಿ ಹೋರಾಟದ ಘೋಷಣೆಗಳು ಕಣಕುಂಬಿಯ ಮಾವುಲಿ ದೇವಸ್ಥಾನದಲ್ಲಿ ಮೊಳಗಲಿವೆ. ನಾನು ಗ್ರಾಮ ವಾಸ್ತವ್ಯ ಮಾಡುವುದರಿಂದ ಉಳಿದ ಪಕ್ಷಗಳ ಕೆಲವು ನಾಯಕರುಗಳ ಚಿತ್ತವೂ ಮಹದಾಯಿ ಹೊರಾಟದ ಬಗ್ಗೆ ಹರಿತವಾಗಲಿದೆ. ಅವರು ಸಹ ಬೇರೆ ರೀತಿಯಲ್ಲಿ ಕಣಕುಂಬಿಗೆ ಜಾಥಾ ಅಥವಾ ಕಾಮಗಾರಿ ನಿಂತಿರುವ ಪ್ರದೇಶದಲ್ಲೇ ಪ್ರತಿಭಟನೆ ಮಾಡುವ ಬಗ್ಗೆಯೂ ಯೋಚಿಸುವುದು ಸಹಜ ಹೀಗಾಗಿ ನಾನು ಈ ರೀತಿ ಯೋಜಿಸಿದ್ದೇನೆ ಅಂತಾರೆ.

0

Leave a Reply

Your email address will not be published. Required fields are marked *