ಸಭೆಯಲ್ಲಿ ಉದ್ದೇಶಪೂರ್ವಕವಾಗಿಯೇ ಜೆಡಿಎಸ್ ಕಿರಿಕ್​..!

ಬಜೆಟ್ ಮೇಲಿನ ಕೌನ್ಸಿಲ್ ಸಭೆಯಂದ್ರೆ ಅಲ್ಲಿ ಆಯವ್ಯಯದ ಬಗ್ಗೆ ಚರ್ಚೆಯಾಗ್ಬೇಕು.. ಆದ್ರೆ ಮೊದಲೇ ಗಲಾಟೆ ಮಾಡಲು ನಿರ್ಧರಿಸಿ ಬಂದಂತಿದ್ದ, ಜೆಡಿಎಸ್ ಸದಸ್ಯರು ಚರ್ಚೆ ಬದಲಾಗಿ ಫುಲ್ ಕಿರಿಕ್ ಮಾಡಿದ್ರು.. ಪರಿಣಾಮ ಚರ್ಚೆ ಹಾದಿ ತಪ್ಪಿದ್ದಲ್ಲದೇ ಸದಸ್ಯರ ನಡುವಿನ ತೀವ್ರ ಜಟಾಪಟಿಗೂ ಕಾರಣವಾಯ್ತು.. ಬಿಬಿಎಂಪಿ ಬಜೆಟ್ ಮೇಲಿನ ಚರ್ಚೆ ಮುಂದುವರಿದಿದೆ. ಬಹುತೇಕ ದಿನ ಗಲಾಟೆಯಲ್ಲೆ ಮುಕ್ತಾಯವಾಗಿದ್ದ ಚರ್ಚೆ ಇಂದು ಕೂಡ ಅದೇ ಹಾದಿಯನ್ನು ತುಳಿತು.. ಚರ್ಚೆಯ ಜಾಗದಲ್ಲಿ ಕೇಳಿಸಿದ್ದು ಗದ್ದಲ ಮಾತ್ರ.. ಹೌದು.. ಮೊದಲೇ ಕಿರಿಕ್ ಮಾಡಬೇಕು ಅಂತ ಡಿಸೈಡ್ ಮಾಡ್ಕೊಂಡೇ ಬಿಬಿಎಂಪಿ ಕಡೆ ತಲೆ ಹಾಕಿದ್ದ ಜೆಡಿಎಸ್ ಮುಖಂಡರು ಕೌನ್ಸಿಲ್ ಹೊರಗೆ ಭರ್ಜರಿ ಪ್ರತಿಭಟನೆ ಮಾಡಿದ್ರು. ಲೋಕಾಯುಕ್ತ ನ್ಯಾಯಮೂರ್ತಿ ಮೇಲೆ ಚಾಕು ಇರಿತ ನಡೆದ ಪ್ರಕರಣದ ವಿರುದ್ದ ಜೆಡಿಎಸ್ ಗರಂ ಆಗಿ ಪ್ರತಿಭಟನೆ ನಡೆಸಿತು. ಅಷ್ಟಕ್ಕೇ ಸುಮ್ಮನಾಗದೇ ಇದೇ ಗದ್ದಲವನ್ನು ಕೌನ್ಸಿಲ್ ಒಳಗೂ ನಡೆಸಿತು. ರಾಜ್ಯ ಸರ್ಕಾರವನ್ನು ಗೂಂಡಾ ಸರ್ಕಾರ ಅಂತ ಕರೆದ ಶಾಸಕ ಟಿ ಎ ಸರವಣ ನಮ್ಮನ್ನು ಕಡೆಗಣಿಸಿದರೆ ಅಷ್ಟೇ ಅಂದ್ರು. ಇದರಿಂದ ಕೆರಳಿದ ಕಾಂಗೈ ಸದಸ್ಯರು ಜೆಡಿಎಸ್ ವಿರುಧ್ಧ ವೇ ತಿರುಗಿಬಿದ್ದರು. ಈ ವೇಳೆ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೀತು.

ಇನ್ನು ಜೆಡಿಎಸ್ ಕಿರಿಕ್ ಇಷ್ಟಕ್ಕೇ ನಿಲ್ಲಲಿಲ್ಲ. ಶಾಸಕ ಗೋಪಾಲಯ್ಯ ಎದ್ದು ನಿಂತು ಮಾತನಾಡಲು ಮುಂದಾಗಿ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೇಸ್ ತಮ್ಮನ್ನು ನಿರ್ಲಕ್ಷಿಸಿದೆ ಅಂದ್ರು. ಇದರಿಂದ ವೈಯಕ್ತಿಕ ಗಲಾಟೆ ದೂಷಣೆಗೆ ತಿರುಗಿದ ಕೌನ್ಸಿಲ್ ನಲ್ಲಿ ಮತ್ತೆ ಗಲಾಟೆ ಶುರುವಾಯ್ತು. ನಿಮ್ಮ ಬಜೆಟ್ ನೀವೆ ಇಟ್ಕೊಳ್ಳಿ ಅಂತ ಜೆಡಿಎಸ್ ಕಿರಿಕ್ ಎತ್ತಿಧರೆ ಇದಕ್ಕೆ ಮೇಯರ್ ಸಂಪತ್ ರಾಜ್ ಎಲ್ಲ ಕಡೆಯೂ ನಮ್ಮನ್ನು ಹೆದರಿಸಬೇಡಿ ಅಂದ್ರು. ಇದರಿಂದ ಮಿತ್ರಪಕ್ಷವಾದ ಕಾಂಗ್ರೇಸ್ ಜ್ವರ ಬಿಡಿಸ್ತೀವಿ ಅಂತ ಹೊರಟ ಜೆಡಿಎಸ್ ಸದಸ್ಯರು ಕೌನ್ಸಿಲ್ ಬಾವಿಗಿಳಿದು ಮೇಯರ್ ಗೆ ವಿರುದ್ಧ ಕೂಗಾಡಿದ್ರು. ಆದರೆ ಪಟ್ಟು ಬಿಡದ ಮೇಯರ್ ತಾವೂ ಜೆಡಿಎಸ್ ಸದಸ್ಯರ ವಿರುದ್ಧ ಧ್ವನಿ ಎತ್ತರಿಸಿದ್ರು. ಇತ್ತ ಕಾಂಗ್ರೆಸ್ ಸದಸ್ಯರು ಮೇಯರ್ ಗೆ ಸಾಥ್ ನೀಡಿದ್ರು. ಪರಿಣಾಮ ಕೌನ್ಸಿಲ್ ಸಭೆಯಲ್ಲಿ ಒಂದು ಹಂತದಲ್ಲಿ ಕೋಲಾಹಲವೇ ಉಂಟಾಯ್ತು. ನಂತರ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮೇಯರ್ ನಮ್ದು ಗಂಡ ಹೆಂಡತಿ ಜಗಳ ಇದ್ದಹಾಗೆ ಎಂದು ಘಟನೆಗೆ ತೆರೆ ಎಳೆದ್ರು.ಒಂದೆಡೆ ಮಾತಿನ ಚಕಮಕಿ ನಡಿತಿದ್ರೆ ವಿರೋಧ ಪಕ್ಷ ಬಿಜೆಪಿ ಇವರಿಬ್ಬರ ಗಲಾಟೆಯನ್ನ ಎಂಜಾಯ್ ಮಾಡ್ತಿತ್ತು. ದುರಂತವೆಂದ್ರೆ ಜೆಡಿಎಸ್ ಪಕ್ಷದ ಕಿರಿಕ್ ಅತ್ಯಮೂಲ್ಯ ಸಮಯವನ್ನೇ ನುಂಗಿಹಾಕಿತು. ಇನ್ನೊಂದೆಡೆ ಎಂದಿನಂತೆ ಬಿಬಿಎಂಪಿ ಸದಸ್ಯರ ನಿರಾಸಕ್ತಿ ಮುಂದುವರಿಸಿದ್ದು ಬಹುತೇಕ ಖುರ್ಚಿಗಳು ಖಾಲಿ ಹೊಡಿತಿದ್ವು.

ಸುಬ್ರಹ್ಮಣ್ಯ ಎಸ್ ಹಂಡಿಗೆ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *