ಜೆಡಿಎಸ್​​ ಕಾರ್ಪೋರೇಟರ್​​ನಿಂದ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ..?

ಆತ ಓರ್ವ ಜವಾಬ್ದಾರಿಯುತ ಕಾರ್ಪೋರೇಟರ್​​​​​… ಜನರ ಪ್ರತಿನಿಧಿಯಾಗಿರ ಬೇಕಾದ ಆತ ಆರೋಪ ಹಾಗೂ ಪ್ರತ್ಯಾರೋಪಗಳಿಂದ ದೂರವಿರ ಬೇಕು. ಆದ್ರೆ ಈ ಕಾರ್ಪೋರೇಟರ್​​​​​​ ಮೇಲೆ ಅಪ್ರಾಪ್ತ ಬಾಲಕಿಯೊಬ್ಬಳು ಹಲ್ಲೆ ನಡೆಸಿರುವ ಆರೋಪ ಹೊರೆಸುತ್ತಿದ್ದಾಳೆ.. ಆಕೆ ಹೊಟ್ಟೆ ಪಾಡಿಗಾಗಿ ದೂರ ಊರಿನಿಂದ ಬಂದು ದುಡೀತಿದ್ಳು. ಹಾಗೇ ಹೀಗೇ ಅಂತ ದುಡ್ಡು ಸಂಪಾದಿಸಿ ಬದುಕ ಬಂಡಿ ಸಾಗಿಸುತ್ತಿದ್ದಳು. ಹೌದು.. ಮದ್ದೂರು ಮೂಲದ 15 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳ ಕಥೆ ಇದು. ಆಕೆ ತನ್ನ ಗೇಣು ಬಟ್ಟೆಗಾಗಿ ದುಡಿಯುತ್ತಿದ್ದಿದ್ದು ನಗರದ 44ನೇ ವಾರ್ಡ್​​​ನ ಕಾರ್ಪೋರೇಟರ್​​ ಆದ ಮಹಾದೇವ್​​ ಅವರ ಮನೆಯಲ್ಲಿ. ಮಹಾದೇವ್​​​​ ಜೆಡಿಎಸ್​​ ಪಕ್ಷದಿಂದ ಆಯ್ಕೆಯಾಗಿ ಬಂದ ಕಾರ್ಪೋರೇಟರ್​​. ಸದ್ಯ ಆರ್ಥಿಕ ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರು ಕೂಡ ಆಗಿದ್ದಾರೆ ಮಹಾದೇವ್​​​​​​​​..

ಹೀಗೊಂದು ಒಂದು ದಿನ ಕಾರ್ಪೋರೇಟರ್​​​​​​​​ ಮಹಾದೇವ್​ ಅವರ ಮನೆಯಲ್ಲಿ 5 ಸಾವಿರ ರುಪಾಯಿ ಕಳ್ಳತನವಾಗಿತ್ತು. ಆ ಕಳ್ಳತನ ನಡೆಸಿದ್ದು ಬೇರೆಯಾರು ಅಲ್ಲ. ಇದೇ ಬಾಲಕಿ. ಕಿತ್ತು ತಿನ್ನುವ ಬಡತನದ ಕಾರಣ ಆಕೆಯನ್ನ ಆ ಕಳ್ಳತನ ನಡೆಸುವಂತೆ ಮಾಡಿತ್ತು. ಆದ್ರೆ ಆ ಕಳ್ಳತನ ಮಾಡಿದ ನೆಪವೊಡ್ಡಿ ಕಾರ್ಪೋರೇಟರ್​​ ಮಹಾದೇವ್​​ ಹಾಗೂ ಅವರ ಪತ್ನಿ ಸುಧಾ ಈ ಅಪ್ರಾಪ್ತ ಬಾಲಕಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ ಅನ್ನೋ ಆರೋಪ ಇದೀಗ ಕೆಳಿ ಬಂದಿದೆ.ಇನ್ನು ಈ ಬಗ್ಗೆ ಹಲ್ಲೆಗೆ ಒಳಗಾದ ಆ ಅಪ್ರಾಪ್ತ ಬಾಲಕಿ ಬಳಿ ಕೇಳಿದ್ರೆ, ಮಹಾದೇವ್​ ಅವರು ನನಗೆ ಹೊಡೆದಿದ್ದಾರೆ. ಜೊತೆಗೆ ಅವರ ಹೆಂಡ್ತಿ ಸುಧಾ ಕೂಡ ನನ್ನ ಹೊಟ್ಟೆಗೆ ಹಾಗೂ ​​​​​​​​​ಬೆನ್ನಿಗೆ ಕಾಲಿನಿಂದ ಒದ್ದಿದ್ದಾರೆ. ಅಷ್ಟೇ ಅಲ್ದೇ ಪೊಲೀಸರನ್ನ ಮನೆಗೆ ಕರೆಸಿದ್ರು. ಪೊಲೀಸ್ರು ಕೂಡ ನನ್ನ ಗದರಿಸಿದ್ರು. ಒಬ್ಬ ಪೊಲೀಸ್​​​​​​ ಬೂಟಾಕಿರುವ ಕಾಲಿನಿಂದ ಒದ್ದು, ತುಂಬಾ ಬಸ್ಕಿ ಕೂಡ ತೆಗೆಸಿದ್ರು, ಅಂತ ಹೇಳ್ತಿದ್ದಾಳೆ.ನ್ನು ಹಲ್ಲೆಗೊಳಗಾದ ಬಾಲಕಿ ನೋವು ತಡೆಯಲಾರದೆ ಮನೆಗೆ ಓಡೋಡಿ ಬಂದಿದ್ದಾಳೆ. ಅಲ್ದೇ ಮನೆಯವರ ಮುಂದೆ ಕೂತು ಜೋರಾಗಿ ಅತ್ತಿದ್ದಾಳೆ. ತಕ್ಷಣವೇ ಮನೆಯವರು ಬಾಲಕಿಯನ್ನ ನಗರದ ನಂದಿನಿ ಲೇಔಟ್​​ನಲ್ಲಿರುವ ಕಣ್ವ ಆಸ್ಪತ್ರೆಗೆ ಸೇರಿಸಿದ್ದಾರೆ. ಬೆನ್ನಿಗೆ ಹಾಗೂ ಕಾಲಿಗೆ ಸ್ವಲ್ಪ ಗಾಯವಾಗಿರೋದ್ರಿಂದ ಫಸ್ಟ್​​​​ ಎಡ್​ ಕೊಡಿಸಲಾಗಿದೆ. ಇನ್ನು ಪ್ರಕರಣ ಕಿವಿಗೆ ಬೀಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ನಂದಿನಿ ಲೇಔಟ್​​ ಪೊಲೀಸರು ಪ್ರಕರಣದ ಕುರಿತು ಕೂಲಂಕುಶವಾಗಿ ತನಿಖೆ ನಡೆಸ್ತೇವೆ ಎಂದ್ರು..

ಆಶಿಕ್​ ಮುಲ್ಕಿ ಕ್ರೈಂ ಬ್ಯೂರೋ ಸುದ್ದಿ ಟಿವಿ

0

Leave a Reply

Your email address will not be published. Required fields are marked *