ದೇಶದ್ರೋಹದ ಆರೋಪಿಯಿಂದ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ

ಹರಿಯಾಣ: ಜಾಟ್ ಸಮುದಾಯದ ಪರ ಮೀಸಲಾತಿ ಹೋರಾಟಗಾರ ಸೋಮ್​​ಬೀರ್ ಜಸ್ಸಿಯಾ ಟೋಲ್ ಪ್ಲಾಜಾದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೂನ್ 11, 2018ರಂದು ನಡೆದ ಈ ಘಟನೆಯ ದೃಶ್ಯವನ್ನು ಇದೀಗ ಬಹಿರಂಗಪಡಿಸಲಾಗಿದೆ. ಹರಿಯಾಣದ ಟೋಲ್ ಸಿಬ್ಬಂದಿ ಮೇಲೆ ಜಸ್ಸಿಯಾ ಹಲ್ಲೆ ನಡೆಸಿದ್ದು, ಮೀಸಲಾತಿ ಹೋರಾಟದ ಸಮಯದಲ್ಲಿ ಪ್ರಧಾನಿ ಮೋದಿ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದಡಿ, ಅವರ ವಿರುದ್ಧ ದೇಶದ್ರೋಹದ ದೂರು ದಾಖಲಾಗಿದೆ. ಆದರೆ, ಇದುವರೆಗೆ ಅವರನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.

0

Leave a Reply

Your email address will not be published. Required fields are marked *