ನಿಲ್ಲದ ಐಟಿ ಅಧಿಕಾರಿಗಳ ಶೋಧ ಕಾರ್ಯ….

ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮನೆ ಮೇಲೆ ಬುಧವಾರ ಬೆಳಿಗ್ಗೆ ದಾಳಿ ಮಾಡಿದ್ದ ಐಟಿ ಅಧಿಕಾರಿಗಳು, ನಿನ್ನೆ ಇಡೀ ದಿನ ತಪಾಸಣೆ ನಡೆಸಿ, kel ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.. ಡಿಕೆಶಿ ಮನೆ ಪಕ್ಕದಲ್ಲೇ ಕೆಲ ಕಾಂಗ್ರೆಸ್ ಕಾರ್ಯಕರ್ತರು ಬೀಡುಬಿಟ್ಟಿದ್ದಾರೆ. ಇನ್ನು ರೆಸಾರ್ಟ್​ ಮೇಲೆಐಟಿ ಅಧಿಕಾರಿಗಳ ದಾಳಿ ನಡೆಸಿದಾಗ ಪೊಲೀಸರು ನಮ್ಮನ್ನು ಭಯೋತ್ಪಾದಕರಂತೆ ನಡೆಸಿಕೊಂಡ್ರು ಅಂತ ಗುಜರಾತ್ ಶಾಸಕರೊಬ್ಬರು ಆರೋಪಿಸಿದ್ದಾರೆ.. ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮನೆ ಮೇಲೆ ಮೊನ್ನೆ ಆರಂಭವಾದ ಐಟಿ ಅಧಿಕಾರಿಗಳ ಕಾರ್ಯಾಚರಣೆ ಮಧ್ಯರಾತ್ರಿಯವರೆಗೂ ನಡೆದಿತ್ತು. ಅಲ್ದೇ ನಿನ್ನೆ ಬೆಳಿಗ್ಗೆ 6 ಗಂಟೆಗೆ ಐಟಿ ಅಧಿಕಾರಿಗಳು ಪುನಃ ಪರಿಶಿಲನೆ ಆರಂಭಿಸಿದ್ರು.. ನಿನ್ನೆ ಕೆಲ ಅಧಿಕಾರಿಗಳು ಹಲವು ದಾಖಲೆಗಳೊಂದಿಗೆ ಸಚಿವ ಡಿ.ಕೆ. ಶಿವಕುಮಾರ್‌ ಮನೆಯಿಂದ ಹೊರ ನಡೆದಿದ್ದು, ಇನ್ನೂ ಕೆಲ ಅಧಿಕಾರಿಗಳು ಅಲ್ಲೇ ಉಳಿದುಕೊಂಡು ಮಧ್ಯರಾತ್ರಿವರೆಗೂ ತಪಸಾಣೆ ನಡೆಸಿದ್ದಾರೆ.. ಇನ್ನು ಬೆಂಗಳೂರು, ಹಾಸನ, ಮಂಡ್ಯದಲ್ಲಿರುವ ಶಿವಕುಮಾರ್‌ ಅವರ ಸಂಬಂಧಿಕರು ಮತ್ತು ಆಪ್ತರಿಗೆ ಸೇರಿದ ಮನೆಗಳಲ್ಲೂ ಐಟಿ ಅಧಿಕಾರಿಗಳು ನಿನ್ನೆ ಶೋಧ ನಡೆಸಿದ್ರು..

ಇತ್ತ ಡಿ.ಕೆ.ಶಿವಕುಮಾರ್ ಮನೆಗಳ ಮೇಲಿನ ಐಟಿ ದಾಳಿಯನ್ನು ಕಾಂಗ್ರೆಸ್ ನಾಯಕರು ಖಂಡಿಸಿ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ನಿನ್ನೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಚುನಾವಣೆ ಗೆಲ್ಲಲು ಬಿಜೆಪಿ ವಾಮಮಾರ್ಗ ಅನುಸರಿಸುತ್ತಿದೆ ಎಂದು ಕಿಡಿಕಾರಿದ್ರು. ಇದೇ ವೇಳೆ ಕೇಂದ್ರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು.. ರೆಸಾರ್ಟ್​ ಮೇಲೆ ಮೊನ್ನೆ ನಡೆದಿದ್ದ ಐಟಿ ಅಧಿಕಾರಿಗಳ ದಾಳಿ ವೇಳೆ ಪೊಲೀಸರು ನಮ್ಮನ್ನು ಭಯೋತ್ಪಾದಕರಂತೆ ನಡೆಸಿಕೊಂಡರು ಎಂದು ಗುಜರಾತ್ ಕಾಂಗ್ರೆಸ್ ಶಾಸಕ ಫರೇಶ್ ಧನಾನಿ ಆರೋಪಿಸಿದ್ದಾರೆ. ಸಿಆರ್​ಫಿಎಫ್ ಜೊತೆ ಬಂದವರು ನಮ್ಮನ್ನು ಭಯೋತ್ಪಾದರಂತೆ ಗನ್​ ಹಿಡಿದು ಬೆದರಿಸಿದ್ದಾರೆ. ಡಿ.ಕೆ.ಶಿವಕುಮಾರ್ ಮೇಲೆ ದಾಳಿ ನೆಪ ಮಾತ್ರ. ನಮ್ಮನ್ನು ಹೆದರಿಸಲೆಂದೇ ದಾಳಿ ನಡೆಸಲಾಗಿದೆ. ಐಟಿ ಅಧಿಕಾರಿಗಳ ಜೊತೆ ಬಂದವರು ಹಣದ ಆಮಿಷ ಒಡ್ಡಿದ್ದಾರೆ ಎಂದು ಶಾಸಕ ಫರೇಶ್ ಧನಾನಿ ಹೇಳಿಕೆ ನೀಡಿದ್ದಾರೆ.

ಡಿಕೆಶಿ ಮನೆಯ ಪಕ್ಕದ ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೀಡುಬಿಟ್ಟಿದ್ದಾರೆ.. ಪೊಲೀಸ್ರು ಎಷ್ಟು ಹೇಳಿದ್ರೂ ಕಾರ್ಯಕರ್ತರು ಸ್ಥಳವನ್ನು ಬಿಟ್ಟು ಕದಲದೆ ರಸ್ತೆ ಬದಿಯಲ್ಲೇ ಮಲಗಿಕೊಂಡಿದ್ದಾರೆ.. ಅದೇನೇ ಇರ್ಲಿ ಗುಜರಾತ್ ಶಾಸಕರು ಕರ್ನಾಟಕದ ಪ್ರವಾಸದಲ್ಲಿರುವಾಗಲೇ ಐಟಿ ದಾಳಿ ನಡೆಸಿರೋದು ಬಾರೀ ಚರ್ಚೆಗೆ ಗ್ರಾಸವಾಗಿದೆ..

ನ್ಯೂಸ್ ಬ್ಯೂರೋ, ಸುದ್ದಿಟಿವಿ

0

Leave a Reply

Your email address will not be published. Required fields are marked *