ಐಪಿಎಲ್​​ನಲ್ಲಿ ಸಿಕ್ಸರ್​​ಗಳದ್ದೇ ಹವಾ..

ಐಪಿಎಲ್​​ ಎಂಬ ಲೀಗ್​​ನಲ್ಲಿ ಬ್ಯಾಟ್ಸ್​​ಮನ್​​ಗಳ ಸ್ಟಾರ್​​ಗಳು.. ಸಿಕ್ಸರ್​ ಬಾರಿಸಿದಾಗ ಸಿಳ್ಳೆ ಹೊಡೆಯುತ್ತಾರೆ ಅಭಿಮಾನಿಗಳು.. ಏಪ್ರಿಲ್​​ 7 ರಿಂದ ಆರಂಭವಾಗುವ ಲೀಗ್​ನಲ್ಲಿ ಅಬ್ಬರಿಸೋಕೆ ರೆಡಿಯಾಗಿರುವ ತಂಡಗಳು ತಾಲೀಮು ನಡೆಸಿವೆ. ಈ ಬಾರಿಯು ಖ್ಯಾತ ನಾಮರು ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಹಿಂದಿನ ಟೂರ್ನಿಗಳಲ್ಲಿ ರನ್​​ ಹೊಳೆ ಹರಿಸಿದ್ದ ಸ್ಟಾರ್​​ಗಳೇ ಅಭಿಮಾನಿಗಳ ಹಾಟ್​ ಫೆವರೀಟ್​​. ಐಪಿಎಲ್​​ ಹವಾ ಏಪ್ರೀಲ್​ 7 ರಿಂದ ಹರಡಲಿದೆ. ಅಕ್ಷರಶಃ ಬ್ಯಾಟ್ಸ್​ಮನ್​​ಗಳು ಈ ಲೀಗ್​ನ ಹೀರೋ.. ಅಬ್ಬರಿಸಿ ಬೊಬ್ಬೆರಿವು ಸ್ಟಾರ್​ಗಳು ಅಭಿಮಾನಿಗಳಿಗೆ ಅಚ್ಚುಮೆಚ್ಚು. ದೊಡ್ಡ ಇನ್ನಿಂಗ್ಸ್​​ ಕಟ್ಟೋದು ಹಾಗೂ ಸಿಕ್ಸರ್​ ಬಾರಿಸೋದು ಅಂದ್ರೆ, ಖ್ಯಾತ ನಾಮರಿಗೆ ಬಲು ಇಷ್ಟ. ಏಕೆಂದ್ರೆ ಹಣದ ಹೊಳೆಯನ್ನೆ ಹರಿಸುವ ಐಪಿಎಲ್​​ನಲ್ಲಿ ಏನೇ ಮಾಡಿದ್ರು ದುಡ್ಡು. ಈ ಲೀಗ್​​ನಲ್ಲಿ ಬೆಸ್ಟ್​ ಕ್ಯಾಚ್​ ಹಿಡಿದ್ರು ದುಡ್ಡು, ಲಾಂಗೆಸ್ಟ್​​ ಸಿಕ್ಸರ್​ ಬಾರಿಸಿದ್ರು ದುಡ್ಡು.

ಈ ಪ್ರೋತ್ಸಾಹ ಆಟಗಾರರಿಗೆ ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ. ಶತಕ ಹಾಗೂ ಅರ್ಧಶತಕ ಬಾರಿಸಿ ಮಿಂಚುವ ಸ್ಟಾರ್​​​ಗಳು ಮೈದಾನದಲ್ಲಿ ರನ್​​ ಹೊಳೆ ಹರಿಸುತ್ತಾರೆ. ಮಹೇಂದ್ರ ಸಿಂಗ್​ ಧೋನಿ ತಮ್ಮ ಸ್ಪೋಟಕ ಬ್ಯಾಟಿಂಗ್​ನಿಂದಲೇ ಹೆಸರು ವಾಸಿಯಾದ ಆಟಗಾರ. ಧೋನಿ ಮೈದಾನದಲ್ಲಿ ತಳವೂರಿ ನಿಂತ್ರೆ ರನ್​​ಗಳ ಪ್ರವಾಹ. ಮಾಹಿ ಹೆಲಿಕ್ಯಾಪ್ಟರ್​​ ಶಾಟ್​​ಗೆ ಫಿದಾ ಆಗದವರೆ ಇಲ್ಲ. ಆದ್ರೂ ಧೋನಿ LONGEST ಸಿಕ್ಸರ್​​ಗಳ ಪಟ್ಟಿಯಲ್ಲಿ 8ನೇ ಸ್ಥಾನ. ತಮ್ಮ ಭರ್ಜರಿ ಬ್ಯಾಟಿಂಗ್​ನಿಂದಲೇ ಹೆಸರುವಾಸಿಯಾದ ಧೋನಿ ಮತ್ತೊಮ್ಮೆ ಕಮಾಲ್​​ನ ಬ್ಯಾಟಿಂಗ್ ಮಾಡೋಕೆ ರೆಡಿಯಾಗಿದ್ದಾರೆ.

ಇನ್ನು ಸನ್​ರೈಸರ್ಸ್​ ಪರ ಆಡಿದ ಬೆನ್​ ಕಟಿಂಗ್​ ಹೆಸರಲ್ಲೂ ಸಿಕ್ಸರ್​​ಗಳ ದಾಖಲೆ ಇದೆ. 2016ರಲ್ಲಿ ಕಟಿಂಗ್​​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ದೊಡ್ಡ ಸಿಕ್ಸರ್​ ಬಾರಿಸುವ ಮೂಲಕವೇ ಎಲ್ಲರ ಮನ ಗೆದ್ದಿದ್ದರು. ದೊಡ್ಡ ಸಿಕ್ಸರ್​​ಗಳನ್ನು ಬಾರಿಸೋದ್ರಲ್ಲಿ ವಿಂಡೀಸ್​ ದೈತ್ಯ ಆಟಗಾರ ಕ್ರಿಸ್​ ಗೇಲ್​ ಕೈ ಸಹ ಮುಂದಿರುತ್ತದೆ. 2013ರಲ್ಲಿ ಕ್ರಿಸ್​ ಭರ್ಜರಿ ಫಾರ್ಮ್​​ನಲ್ಲಿದ್ರು. ಈ ಆವೃತ್ತಿಯಲ್ಲೇ ಗೇಲ್​ ಐಪಿಎಲ್​​ನಲ್ಲಿ ಗರಿಷ್ಠ ರನ್​ ಬಾರಿಸಿ ದಾಖಲೆ ಬರೆದಿದ್ದರು. ಈ ಇನ್ನಿಂಗ್ಸ್​​ನಲ್ಲಿ ಗೇಲ್​ 119 ಮಿಟರ್​ ಉದ್ದದ ಸಿಕ್ಸರ್​​ ಬಾರಿಸಿ ದಾಖಲೆಯ ಪುಟ ಸೇರಿದ್ದಾರೆ.

ಕಿವೀಸ್​ ಸ್ಟಾರ್​ ಆಟಗಾರ ರಾಸ್​ ಟೇಲರ್​​ 119 ಮೀಟರ್​ ಸಿಕ್ಸರ್​ ಬಾರಿಸಿದ್ದಾರೆ.  ಆ್ಯಡಮ್​ ಗಿಲ್​ಕ್ರಿಸ್ಟ್​ ಸಹ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು 122 ಮೀಟರ್​​ ನಷ್ಟು ದೂರ ಚೆಂಡನ್ನು ಅಟ್ಟುವಲ್ಲಿ ಸಫಲರಾಗಿದ್ದಾರೆ.2010ರಲ್ಲಿ ರಾಯಲ್​ ಚಾಲೆಂಜರ್ಸ್​ ತಂಡದ ಪರ ಆಡುತ್ತಿದ್ದ ಸ್ಟಾರ್ ಆಟಗಾರ ರಾಬಿನ್​ ಉತ್ತಪ್ಪ. ಕನ್ನಡಿಗ ಐಪಿಎಲ್​​ನಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇವರ ಹೆಸರಲ್ಲಿ ದೊಡ್ಡ ಸಿಕ್ಸರ್​ ಬಾರಿಸಿದ ದಾಖಲೆ ಇದೆ. ಉತ್ತಪ್ಪ 120 ಮೀಟರ್​​ ನಷ್ಟು ಬಿಗ್​ ಸಿಕ್ಸ್​ ಬಾರಿಸಿ ಮಿಂಚಿದ್ದಾರೆ. ಇನ್ನು ಅತಿ ದೊಡ್ಡ ಸಿಕ್ಸರ್​ ಬಾರಿಸಿದ ಪಟ್ಟಿಯಲ್ಲಿ ಎಲ್ಬಿ ಮಾರ್ಕೆಲ್​​ಗೆ ಅಗ್ರಸ್ಥಾನ. ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡುತ್ತಿದ್ದ ಮಾರ್ಕೆಲ್​ 125 ಮೀಟರ್​​ ದೊಡ್ಡ ಸಿಕ್ಸರ್​ ಬಾರಿಸಿ ಮಿಂಚಿದ್ದಾರೆ. ಈ ಬಾರಿಯ ಐಪಿಎಲ್​​ನಲ್ಲಿ ಯಾವೆಲ್ಲಾ ಆಟಗಾರರು ಹೇಗೆ ಆಡ್ತಾರೆ.. ಯಾರು ಲಾಂಗೆಸ್ಟ್​ ಸಿಕ್ಸರ್​​ ಬಾರಿಸುತ್ತಾರೆ ಎಂಬೆಲ್ಲಾ ಕುತೂಹಗಳು ಮೂಡಿವೆ.

ವಿನಾಯಕ ಲಿಮಯೆ, ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿಟಿವಿ

0

Leave a Reply

Your email address will not be published. Required fields are marked *