ತಂಡದ ಹೆಸರು ಬದಲಾವಣೆ ಮನವಿ ಸಲ್ಲಿಸಿದ ಫ್ರಾಂಚೈಸಿ..

ಇನ್ನು ಮುಂದೆ ಐಪಿಎಲ್​ನಲ್ಲಿ ಒಂದು ಟೀಮ್​ ಆಡೋದು ಡೌಟ್​.. ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ತನ್ನದೇ ಆದ ಗತ್ತು ಹೊಂದಿದ್ದ ತಂಡ 11ನೇ ಆವೃತ್ತಿಯಲ್ಲಿ ಹೇಗೆ ಎಂಟ್ರಿ ನೀಡಲಿದೆ. ಹಾಗಿದ್ರೆ ಟೀಮ್​​ ಯಾವ ರೀತಿ ಐಪಿಎಲ್​​ನಲ್ಲಿ ಆಡಲಿದೆ.ಭಾರತಕ್ಕೆ ಐಪಿಎಲ್​ ಎಂಬ ರಂಗು ರಂಗಿನ ಆಟ ಎಂಟ್ರಿ ನೀಡಿದಾಗಿನಿಂದಲೂ, ಎಂಟು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಿವೆ. ಅದ್ರಲ್ಲಿ ಕೆಲವು ತಂಡ ಸಫಲವಾದ್ರೆ, ಇನ್ನು ಕೆಲವು ತಂಡಗಳು ನಿರಾಸೆಯನ್ನು ಅನುಭವಿಸಿದೆ. ಇನ್ನು ಒಂದೊಂದು ತಂಡ ಐಪಿಎಲ್​​ನಲ್ಲಿ ತನ್ನದೇ ಆದಾ ಚರಿಷ್ಮಾ ಹೊಂದಿದೆ ಅಂದ್ರೆ ತಪ್ಪಾಗಲಾರದು. ಎಂಟು ತಂಡಗಳು ಜೆರ್ಸಿ ಸಹ ಅಭಿಮಾನಿಗಳ ಫೆವರೀಟ್​​ಗಳಲ್ಲಿ ಒಂದು. ಈ ಬಾರಿ ಎರಡು ತಂಡಗಳು ಐಪಿಎಲ್​​ಗೆ ರಿ ಎಂಟ್ರಿ ಪಡೆದಿವೆ. ರಾಜಸ್ಥಾನ ಹಾಗೂ ಚೆನ್ನೈ ತಂಡಗಳು ಮತ್ತೆಮ್ಮ ಅಖಾಡ ಪ್ರವೇಶಿಸಲಿವೆ.

ಅಂದಾಹಾಗೆ ತಂಡಗಳ ಹಿಂದಿನ ಶಕ್ತಿಯೂ ರೋಚಕ.. ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಬಾಲಿವುಡ್​ ಬಾದ್​ಶಾ ಶಾರುಕ್​ ಖಾನ್​ ಹೊಂದಿದ್ದರೆ, ರಾಜಸ್ಥಾನ ತಂಡವನ್ನು ಶಿಲ್ಪಾ ಶೆಟ್ಟಿ, ಕಿಂಗ್ಸ್​ ಇಲೆವೆನ್ ತಂಡವನ್ನು ಪ್ರೀತಿ ಝಿಂಟಾ ಹೊಂದಿದ್ದಾರೆ. ಈ ಸ್ಟಾರ್​​ಗಳು ತಮ್ಮ ತಂಡ ಮೈದಾನಕ್ಕೆ ಇಳಿದಾಗ ಹುರಿದುಂಬಿಸುತ್ತಾರೆ. ಇನ್ನು ಐಪಿಎಲ್​​ ಆರಂಭವಾದಾಗ ತಂಡಗಳ ಹೆಸರನ್ನು ಬಹುವಾಗಿ ಚರ್ಚೆಸಿ ಇಡಾಲಗಿತ್ತು. ಅಲ್ಲದೆ ಆ ತಂಡ ಆ ಪ್ರಾಂತ್ಯವನ್ನು ಪ್ರತಿನಿಧಿಸುತ್ತಿತ್ತು. ಹೀಗಿರುವಾಗ ಮಾಲೀಕರು ಸಹ ತಂಡದ ಹೆಸರನ್ನು ಇಡುವಾಗ ತುಂಬ ಯೋಚನೆ ಮಾಡಿ ಇಟ್ಟಿದ್ದರು. ಆದ್ರೆ ಈ ಬಾರಿ ಐಪಿಎಲ್​​ನಲ್ಲಿ ಒಂದು ತಂಡ ವಿಭಿನ್ನವಾಗಿ ಕಾಣಿಸಿಕೊಳ್ಳಲಿದೆ. ಅಲ್ಲದೆ ತನ್ನ 10 ವರ್ಷದ ತಂಡದ ಹೆಸರನ್ನು ಬದಲಿಸೋಕೆ ಮುಂದಾಗಿದೆ.

ಕಿಂಗ್ಸ್​​ ಇಲೆವೆನ್​ ಪಂಜಾಬ್​.. ಹತ್ತು ವರ್ಷಗಳಿಂದ ಇಂಡೀಯನ್​ ಪ್ರಿಮಿಯರ್​ ಲೀಗ್​​ನಲ್ಲಿ ಆಡುತ್ತಿದೆ. ಅಲ್ಲದೆ ಪಂಜಾಬ್​ ಪ್ರಾಂತ್ಯವನ್ನು ಈ ತಂಡ ಪ್ರತಿನಿಧಿಸುತ್ತಿದ್ದು, ಈ ತಂಡಕ್ಕೆ ಈ ಹೆಸರನ್ನು ಇಡಾಲಾಗಿದೆ. ಕಳೆದ ಕೆಲವು ಆವೃತ್ತಿಗಳಲ್ಲಿ ಅನುಭವಿಸಿದ ನಿರಾಸೆಯಿಂದ ಹೊರ ಬರಲು ಪ್ರೀತಿ ಝಿಂಟಾ ಬಿಸಿಸಿಐಗೆ ಮನವಿಯನ್ನು ಮಾಡಿದ್ದಾರೆ. ಅಂದಾಹಾಗೆ ತಂಡದ ಹೆಸರನ್ನು ಬದಲಾವಣೆ ಮಾಡುವ ಬಗ್ಗೆ ಬಿಸಿಸಿಐಗೆ ಮನವಿಯನ್ನು ಕಿಂಗ್ಸ್​​ ಮಾಲೀಕರು ಸಲ್ಲಿಸಿದ್ದಾರೆ. ಒಂದು ವೇಳೆ ಇದಕ್ಕೆ ಅಸ್ತು ಎಂದಲ್ಲಿ ಐಪಿಎಲ್​ ಇತಿಹಾಸದಲ್ಲಿ ಹೆಸರನ್ನು ಬದಲಾವಣೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆ ಕಿಂಗ್ಸ್​ ಇಲೆವೆನ್​ ತಂಡದ ಪಾಲಾಗಲಿದೆ. ಒಂದು ಮಾಹಿತಿ ಪ್ರಕಾರ ಬಿಸಿಸಿಐ ಪ್ರೀತಿಯ ಮನವಿಯನ್ನು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಈಗೇನಿದ್ರು, ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಬದಲಾದ ಹೆಸರು ಏನು ಎಂಬ ಕುತೂಹಲ ಮನೆ ಮಾಡಿದೆ. ಇದಕ್ಕೆಲ್ಲಾ ಉತ್ತರ ಕೆಲವೇ ದಿನಗಳಲ್ಲಿ ಸಿಗಲಿದ್ದು, ಅಭಿಮಾನಿಗಳಲ್ಲಿ ಕೌತುಕ ಮನೆ ಮಾಡಿದೆ.

ವಿನಾಯಕ ಲಿಮೆಯ, ಸ್ಪೋರ್ಟ್ಸ್​ ಬ್ಯೂರೋ, ಸುದ್ದಿ ಟಿವಿ

2+

Leave a Reply

Your email address will not be published. Required fields are marked *