ಕಿಂಗ್ಸ್​ ಇಲೆವೆನ್ ಭರ್ಜರಿ ಆರಂಭ…

ನಿನ್ನೆ ನಡೆದ ಐಪಿಎಲ್​ ಸಮರದ ಮತ್ತೊಂದು ಪಂದ್ಯದಲ್ಲಿ ಪಂಜಾಬ್​ ಚನ್ನೈ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಿದೆ. ಕೊನೆಯ ಓವರ್​ವರೆಗೂ ನಡೆದ ಪಂದ್ಯದಲ್ಲಿ ವಿಜಯಲಕ್ಷ್ಮಿ ಪಂಜಾಬ್​ಗೆ ಒಲಿದಿದ್ದಾಳೆ. ಸಿಎಸ್​ಕೆ ಗೆಲುವಿಗಾಗಿ ನಾಯಕ ಧೋನಿ ನಡೆಸಿದ ಹೋರಾಟ ಫಲ ನೀಡಲಿಲ್ಲ.ನಿನ್ನೆ ಮೊಹಾಲಿಯಲ್ಲಿ ನಡೆದ ಐಪಿಎಲ್​ ಸಮರದ 12ನೇ ಪಂದ್ಯದಲ್ಲಿ, ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ ನಾಯಕ ಮಹೇಂದ್ರ ಸಿಂಗ್ ಧೋನಿ, ಮೊದಲು ಫೀಲ್ಡಿಂಗ್​ ಮಾಡುವ ನಿರ್ಧಾರ ಕೈಗೊಂಡ್ರು. ಅದರಂತೆ ಇನ್ನಿಂಗ್ಸ್​ ಆರಂಭಿಸಿದ ಪಂಜಾಬ್​ಗೆ ಆರಂಭಿಕಾರದ ಕನ್ನಡಿಗ ಕೆ.ಎಲ್ ರಾಹುಲ್, ಕ್ರಿಸ್​ ಗೇಲ್​ ಭರ್ಜರಿ ಅಡಿಪಾಯ ಹಾಕಿದ್ರು. ಮೊದಲು ​ತಾಳ್ಮೆಯ ಆಟವಾಡಿದ ಈ ಇಬ್ಬರು ಸ್ಟಾರ್ಸ್​, ನಂತರ ಅಬ್ಬರದ ಆಟದ ಮೂಲಕ ತಂಡದ ಸ್ಕೋರ್​ ಹಿಗ್ಗಿಸಿದ್ರು. ಒಬ್ಬರಿಗೊಬ್ರು ಜಿದ್ದಿಗೆ ಬಿದ್ದವರಂತೆ ಬೌಂಡರಿ ಸಿಕ್ಸರ್​ಗಳನ್ನು ಬಾರಿಸಿದ್ರು. ಟೂರ್ನಿಯಲ್ಲಿ ಭರ್ಜರಿ ಫಾರ್ಮ್​ನಲ್ಲಿರುವ ಕೆ.ಎಲ್ ರಾಹುಲ್, ​ ಅಬ್ಬರದ 37ರನ್​ಗಳಿಸಿ ಹರಭಜನ್​ ಬೌಲಿಂಗ್​ನಲ್ಲಿ ಔಟಾದ್ರು.

ಐಪಿಎಲ್​​ 11ರ ಆವೃತ್ತಿಯಲ್ಲಿ ಮೊದಲ ಪಂದ್ಯವಾಡಿದ ದೈತ್ಯ ಕ್ರಿಸ್ ಗೇಲ್​ ಆರ್ಭಟಿಸಿದ್ರು. 33 ಎಸೆತಗಳನ್ನು ಎದುರಿಸಿದ ಗೇಲ್ 7 ಬೌಂಡರಿ, 4 ಭರ್ಜರಿ ಸಿಕ್ಸರ್​ಗಳ ಮೂಲಕ 63 ರನ್​ ಸಿಡಿಸಿ, ವ್ಯಾಟ್ಸನ್​ ಎಸೆತದಲ್ಲಿ ಇಮ್ರಾನ್ ತಾಹಿರ್​ಗೆ ಕ್ಯಾಚ್ ನೀಡಿದ್ರು. ನಂತರ ಬಂದ ಮಾಯಂಕ್​ ಅಗರ್​ವಾಲ್​ ಬಿರುಸಿನ 30 ರನ್ ಗಳಿಸಿ ತಂಡಕ್ಕೆ ಅಗತ್ಯ ಕಾಣಿಕೆ ನೀಡಿದ್ರು. ಯುವರಾಜ್​ ಸಿಂಗ್​ ಆಟ ಕೇವಲ 20 ರನ್​ಗಳಿಗೆ ಸೀಮಿತವಾಯ್ತು. ಆರಾನ್ ಫಿಂಚ್​ ಸೊನ್ನೆ ಸುತ್ತಿದ್ರು. ಕೊನೆಯಲ್ಲಿ ಕರುಣ ನಾಯರ್​ ಸ್ಫೋಟಕ 29ರನ್​ಗಳಿಸಿ, ತಂಡದ ಮೊತ್ತವನ್ನ 190ರ ಗಡಿ ದಾಟಿಸಿದ್ರು. ನಾಯಕ ರವಿಚಂದ್ರನ್ ಅಶ್ವಿನ್ 14 ರನ್​ಗಳಿಸಿದ್ರು. ಸಿಎಸ್​ಕೆ ಪರ ಶಾರ್ದೂಲ್ ಠಾಕೂರ್​, ಇಮ್ರಾನ್ ತಾಹಿರ್​ ತಲಾ 2 ವಿಕೆಟ್, ಹರಭಜನ್ ಸಿಂಗ್, ಶೇನ್​ ವ್ಯಾಟ್ಸನ್​ ಹಾಗೂ ಬ್ರಾವೊ ತಲಾ 1 ವಿಕೆಟ್ ಪಡೆದ್ರು. ಅಂತಿಮವಾಗಿ ಕಿಂಗ್ಸ್ ಇಲೆವೆನ್ ಪಂಜಾಬ್​ 20 ಓವರ್​ಗಳಲ್ಲಿ 197 ರನ್ ಕಲೆಹಾಕಿತು.

ಪಂಜಾಬ್​ ನೀಡಿದ ಬೃಹತ್​ ಗುರಿ ಬೆನ್ನತ್ತಿದ ಸಿಎಸ್​ಕೆಗೆ ಆರಂಭಿಕ ಆಘಾತ ಎದುರಾಯ್ತು. ಒಪನರ್ಸ್​ಗಳಾದ ಶೇನ್​ ವ್ಯಾಟ್ಸನ್​ ಹಾಗೂ ಮುರಳಿ ವಿಜಯ್​​ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದ್ರು. 39 ರನ್​ ಆಗುವಷ್ಟರಲ್ಲಿ ಈ ಇಬ್ರು ಪೆವಿಲಿಯನ್​ ಸೇರಿದ್ರು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಸ್ಯಾಮ್ ಬಿಲ್ಲಿಂಗ್ಸ್​ ಕೇವಲ 9ರನ್​ ಗಳಿಸಿ ಅಶ್ವಿನ್​ ಎಲ್​ಬಿ ಬಲೆಗೆ ಬಿದ್ರು. ಇದ್ರಿಂದ ಚೆನ್ನೈ ಕೇವಲ 56ರನ್​ಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ನಾಲ್ಕನೇ ವಿಕೆಟ್​ಗೆ ಅಂಬಟಿ ರಾಯುಡು ಹಾಗೂ ನಾಯಕ ಧೋನಿ 57ರನ್​ ಜೊತೆಯಾಡವಾಡಿದ್ರು. ಈ ಹಂತದಲ್ಲಿ 49 ರನ್​ಗಳಿಸಿ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ರಾಯುಡು, ಅಶ್ವಿನ್​ರ ಚುರುಕಿನ ಫೀಲ್ಡಿಂಗ್​​ನಿಂದಾಗಿ ರನ್​ ಔಟಾದ್ರು. ಆಗ ಚೆನ್ನೈ ಗೆಲುವಿಗೆ ಪ್ರತಿ ಓವರ್​ನಲ್ಲಿ 10ರ ಸರಾಸರಿಯಲ್ಲಿ ರನ್​ ಬೇಕಾಗಿತ್ತು. ಆದ್ರೆ ಕ್ರೀಸ್​ನಲ್ಲಿದ್ದ ಧೋನಿ ತಂಡವನ್ನು ಹೇಗಾದ್ರು ಮಾಡಿ ಗೆಲುವಿನ ದಡ ಸೇರಿಸುವ ಪಣತೊಟ್ಟಿದ್ರು. ರವೀಂದ್ರಾ ಜಡೇಜಾ ಜೊತೆಗೂಡಿ 50ರನ್​ಗಳ ಜೊತೆಯಾಟವಾಡಿದ್ರು. ನಿಧಾನವಾಗಿ ಆಡ್ತಿದ್ದ ಧೋನಿ, 16ನೇ ಓವರ್​ನಲ್ಲಿ ಗೇರ್​ ಬದಲಾಯಿಸಿದ್ರು.ಮೈದಾನದಲ್ಲಿ ಬೌಂಡರಿ, ಸಿಕ್ಸರ್​ಗಳ ಸುರಿಮಳೆಗೈದ್ರು. ಇದ್ರಿಂದ ಗೆಲುವಿನ ಆಸೆ ಕೈ ಬಿಟ್ಟಿದ್ದ ಸೂಪರ್​ ಕಿಂಗ್ಸ್​ ಪಾಳಯದಲ್ಲಿ ಮಂದಹಾಸ ಮೂಡಿಸಿದ್ರು.

ಚೆನ್ನೈ ಗೆಲುವಿಗೆ ಕೊನೆಯ ಓವರ್​​ನಲ್ಲಿ 17 ರನ್​ಗಳ ಅವಶ್ಯಕತೆ ಇತ್ತು. ಮೊದಲ ಎಸೆತದಲ್ಲಿ ಸಿಂಗಲ್ ತೆಗೆದ ಡ್ವೇನ್ ಬ್ರಾವೊ ಧೋನಿಗೆ ಸ್ಟ್ರೈಕ್ ನೀಡಿದ್ರು. 5 ಎಸೆತಳನ್ನು ಎದುರಿಸಿದ ಧೋನಿ ಕೇವಲ 10 ರನ್ ಗಳಿಸಿ ನಿರಾಸೆ ಅನುಭವಿಸಿದ್ರು. ಇದ್ರಿಂದ ಧೋನಿ ಹೋರಾಟ ವ್ಯರ್ಥ್ಯವಾಯ್ತು. ಪಂಜಾಬ್​ 4 ರನ್​ಗಳ ರೋಚಕ ಗೆಲುವು ದಾಖಲಸಿತು. ಕ್ರಿಸ್​ ಗೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.ಪಂಜಾಬ್​ ಪರ ಆಂಡ್ರಿ ಟೈ 2, ಮೋಹಿತ್ ಶರ್ಮಾ ಹಾಗೂ ರವಿಚಂದ್ರನ್ ಅಶ್ವಿನ್​ ತಲಾ 1 ವಿಕೆಟ್ ಪಡೆದ್ರು. ಒಟ್ಟಿನಲ್ಲಿ ಹ್ಯಾಟ್ರಿಕ್​ ಗೆಲುವಿನ ಕನಸು ಕಂಡಿದ್ದ ಚೆನ್ನೈಗೆ ಪಂಜಾಬ್​ ಬ್ರೇಕ್​ ಹಾಕಿದೆ. ಅಲ್ಲದೆ ಸರಣಿಯಲ್ಲಿ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಸ್ಫೋರ್ಟ್ಸ್ ಬ್ಯೂರೊ ಸುದ್ದಿ ಟಿವಿ

0

Leave a Reply

Your email address will not be published. Required fields are marked *