ಕೊನೆಗೂ ತವರಿನಲ್ಲಿ ಪಂದ್ಯ ಗೆದ್ದ ಕೊಹ್ಲಿ..

ಮಹತ್ವದ ಪಂದಯದಲ್ಲಿ ಅಬ್ಬರಿಸಿದ ಕೊಹ್ಲಿ ಪಡೆ.. ಬ್ಯಾಟಿಂಗ್​​ನಲ್ಲಿ ಸ್ಪೋಟಿಸಿದ ಮೋಯಿನ್​ ಅಲಿ, ಎಬಿಡಿ.. ರನ್​​ಗಳನ್ನು ಮಳೆ ಸೂರಿಸಿದ ಬ್ಯಾಟ್ಸ್​​ಮನ್​​.. ಗೆಲುವಿನ ಹೊಸ್ತಿಲಲ್ಲಿ ಎಡವಿದ ಸನ್​ರೈಸರ್ಸ್​ ಹೈದರಾಬಾದ್​. ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಜಯಿಸಿದ ಸನ್​ ರೈಸರ್ಸ್​​​​ ಹೈದ್ರಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್​ ಮೊದಲಿಗೆ ಆರ್​ಸಿಬಿಗೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ರು. ನ್ನಿಂಗ್ಸ್​ ಆರಂಭಿಸಿದ ಬೆಂಗಳೂರಿಗೆ ನಿರೀಕ್ಷಿತ ಆರಂಭ ಮಾತ್ರ ಸಿಗಲಿಲ್ಲ. ಆರಂಭಿಕ ಪಾರ್ಥೀವ್ ಪಟೇಲ್​ ಬಹುಬೇಗನೆ ಪೆವಿಲಿಯನ್​​ ಸೇರಿದ್ರು. ನಾಯಕ ವಿರಾಟ್​ ಕೊಹ್ಲಿ ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 12 ರನ್​ಗಳಿಸಿದ್ದ ಕೊಹ್ಲಿ ಸ್ಪಿನ್ನರ್​ ರಶೀದ್​ ಖಾನ್​ ಎಸೆತದಲ್ಲಿ ಬೌಲ್ಡ್​ ಆದ್ರು.

ಆದ್ರೆ ಮೂರನೇ ವಿಕೆಟ್​ಗೆ ಮಿಸ್ಟರ್​ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಹಾಗೂ ಇಂಗ್ಲೆಂಡ್ ಆಲ್​ರೌಂಡರ್​ ಮೊಯಿನ್ ಅಲಿ ಶತಕದ ಜೊತೆಯಾಟವಾಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ್ರು. 107 ರನ್​ಗಳ ಕಲೆಹಾಕಿದ ಈ ಜೋಡಿ ರೈಸರ್ಸ್​ ಬೌಲರ್​ಗಳಿಗೆ ಮನಬಂದಂತೆ ದಂಡಿಸಿದ್ರು. ಒಬ್ಬರಿಗೊಬ್ಬರು ಪೈಪೋಟಿ ಬಿದ್ದಂತೆ ಬೌಂಡರಿ ಬಾರಿಸಿ ತಂಡದ ರನ್​ಗತಿ ಹಿಗ್ಗಿಸಿದ್ರು. ಈ ಜೊತೆಯಾಟದ ವೇಳೆ ಈ ಇಬ್ಬರು ಆಟಗಾರರು ತಲಾ ಅರ್ಧಶತಕ ಬಾರಿಸಿದ್ರು.ಆರ್​ಸಿಬಿ ಬ್ಯಾಟಿಂಗ್ ಬೆನ್ನೆಲುಬಾಗಿರುವ ಡಿವಿಲಿಯರ್ಸ್​ ಟೂರ್ನಿಯಲ್ಲಿ ಮತ್ತೊಮ್ಮೆ ಅರ್ಧಶತಕ ಸಿಡಿಸಿ ಗುಡುಗಿದ್ರು. 39 ಎಸೆತಗಳನ್ನು ಎದುರಿಸಿದ ಡಿವಿಲಿರ್ಸ್​ 11 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್​ ನೆರವಿನಿಂದ 69 ರನ್​ ದಾಖಲಿಸಿ, ರಶೀದ್​ ಖಾನ್​ ಎಸೆತದಲ್ಲಿ ಶಿಖರ್​ ಧವನ್​ಗೆ ಕ್ಯಾಚ್ ನೀಡಿದ್ರು. ಎಬಿಡಿ ಆಟದ ವೈಖರಿಯಂತೆ ಮೋಯಿನ್​ ಅಲಿ ಸಹ ಮನಮೋಹಕ ಬ್ಯಾಟಿಂಗ್ ನಡೆಸಿದ್ರು. ಮೋಯಿನ್​​ ಅಲಿ 34 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಸಿಕ್ಸರ್​ ನೆರವಿನಿಂದ 65 ರನ್​ ಸಿಡಿಸಿದ ಅಲಿ ರಶೀದ್ ಎಸೆತದಲ್ಲಿ ರಿವರ್ಸ್ ಸ್ವೀಪ್​ ಮಾಡಲು ಹೋಗಿ ಕೀಪರ್​ ವೃದ್ಧಿಮಾನ್​ ಸಾಹಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ಕೊನೆಯಲ್ಲಿ ಕಾಲಿನ್ ಗ್ರಾಂಡ್ ಹೋಮ್ ಕೂಡ ಆರ್ಭಟಿಸಿದ್ರು. ಕೇವಲ 17 ಎಸೆತಗಳಲ್ಲಿ 4 ಸಿಕ್ಸರ್​, ಸಹಿತ 40 ರನ್​ ಗಳಿಸಿ ತಂಡದ ಮೊತ್ತ 200ರ ದಡ ಸೇರಿಸಿ ಔಟಾದ್ರು. ಸರಫ್​ರಾಜ್​ ಖಾನ್​ ಬಿರುಸಿನ ಆಟವಾಡಿದ್ರು.

ಅಂತಿಮವಾಗಿ ಆರ್​ಸಿಬಿ 6 ವಿಕೆಟ್​ ನಷ್ಟಕ್ಕೆ 218 ರನ್​ ಕಲೆಹಾಕಿತು. ರೈಸರ್ಸ್​ ಪರ ಬಸಿಲ್ ತಂಪಿ 4 ಓವರ್​ಗಳಲ್ಲಿ 70 ರನ್ ನೀಡಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್​ ನೀಡಿದ ಬೌಲರ್ ಎಂಬ ಕಳಪೆ ದಾಖಲೆಗೆ ಪಾತ್ರರಾದ್ರು.ಇನ್ನು ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಸನ್​ರೈಸರ್ಸ್​​ ಹೈದರಾಬಾದ್​ ತಂಡ ಭರ್ಜರಿ ಆರಂಭವನ್ನು ಪಡೆಯಿತು. ಆರಂಭಿಕ ಶಿಖರ್​ ಧವನ್​​ ಹಾಗೂ ಸ್ಪೋಟಕ ಬ್ಯಾಟ್ಸ್​​ಮನ್​ ಅಲೆಕ್ಸ್​ ಹೇಲ್ಸ್​​ ತಂಡಕ್ಕೆ ಅಬ್ಬರದ ಆರಂಭವನ್ನು ನೀಡುವಲ್ಲಿ ಸಫಲರಾದ್ರು. ಈ ಜೋಡಿ 5.1 ಓವರ್​​ಗಳಲ್ಲಿ 47 ರನ್​ ಕಲೆ ಹಾಕಿತು. ಶಿಖರ್​ ಧವನ್​​ 18 ರನ್​ ಬಾರಿಸಿ ಮುನ್ನುಗುತ್ತಿದ್ದಾಗ ಚಹಾಲ್​ ಎಸೆತದಲ್ಲಿ ಕಾಟ್​ ಆ್ಯಂಡ್​ ಬೋಲ್ಡ್​ ಆದ್ರು. ಇನ್ನು 64 ರನ್​​​ಗಳಿಗೆ ಎರಡು ವಿಕೆಟ್​ ಕಳೆದುಕೊಂಡು ಕುಂಟುತ್ತಿದ್ದ ಹೈದರಾಬಾದ್​ ತಂಡಕ್ಕೆ, ನಾಯಕ ಕೇನ್​ ವಿಲಿಯಮ್ಸನ್​​ ಹಾಗೂ ಭರವಸೆಯ ಆಟಗಾರ ಮನೀಶ್​ ಪಾಂಡೆ ತಂಡಕ್ಕೆ ಉತ್ತಮ ಜೊತೆಯಾಟ ನೀಡುವ ಸೂಚನೆ ನೀಡಿದ್ರು. ಅಲ್ಲದೆ ಮೊದಲು ತಾಳ್ಮೆಯಿಂದ ಇನ್ನಿಂಗ್ಸ್​ ಕಟ್ಟಿದ ಜೋಡಿ, ನಂತರ ದೊಡ್ಡ ಹೊಡೆತಕ್ಕೆ ಕೈ ಹಾಕಿತು.

ಚಿನ್ನಸ್ವಾಮಿ ಅಂಗಳದ ಮರ್ಮ ಅರಿತಿದ್ದ ಮನೀಶ್​ ಹಾಗೂ ಕೇನ್ ಆಟಕ್ಕೆ ಆರ್​​ಸಿಬಿ ಸ್ಟನ್​ ಆಯಿತು. ಮನಮೋಹಕ ಆಟ ಆಡಿದ ಈ ಜೋಡಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿತು. ಕೇನ್​ ವಿಲಿಯಮ್ಸನ್​ 20ನೇ ಓವರ್​​ನ ಮೊದಲ ಎಸೆತದಲ್ಲಿ ಬಿಗ್​ ಹಿಟ್​ ಹೊಡೆಯಲು ಹೋಗಿ ಸಿರಾಜ್​ಗೆ ವಿಕೆಟ್​ ಒಪ್ಪಿಸಿದ್ರು. ಕೇನ್​​ 42 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್​ ಸಹಾಯದಿಂದ 81 ರನ್​ ಬಾರಿಸಿ ಅಬ್ಬರಿಸಿದ್ರು. 5 ಎಸೆತಗಳಲ್ಲಿ 20 ರನ್​ ಕಲೆ ಹಾಕ ಬೇಕಿದ್ದ ಹೈದರಾಬಾದ್​ ಒತ್ತಡದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿತು. ಅಲ್ಲದೆ ರನ್​ ಕಲೆ ಹಾಕುವಲ್ಲಿ ಎಡವಿತು. 14 ರನ್​​ಗಳಿಂದ ಪಂದ್ಯ ಗೆದ್ದು ಪ್ಲೇ ಆಫ್​ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿಟಿವಿ

0

Leave a Reply

Your email address will not be published. Required fields are marked *