ಎದುರಾಳಿಗಳನ್ನು ಕಾಡಬೇಕಿದೆ ಸ್ಟಾರ್​ ಪ್ಲೇಯರ್ಸ್​​…

ಐಪಿಎಲ್​ ಆರಂಭಕ್ಕೂ ಮುನ್ನವೇ ಈ ಬಾರಿ ಕಪ್​ ನಮ್ಮದೇ.. ನಮ್ಮದೇ ಎಂದು ಡಂಗುರ ಸಾರಿದ್ದ ಅಭಿಮಾನಿಗಳು, ಈಗ ಪೇಪರ್​​ ಪೆನ್ನಿನ ಮೊರೆ ಹೋಗಿದ್ದಾರೆ. ಯಾವ ತಂಡ ಗೆದ್ದರೆ ಆರ್​ಸಿಬಿಗೆ ಲಾಭ.. ಯಾವ ತಂಡ ಸೋತ್ರೆ ಲಾಭ ಎಂಬ ಲೆಕ್ಕಾಚಾರದ ಗಣಿತ ಆರಂಭವಾಗಿದೆ. ಇನ್ನು ವಿರಾಟ್​​ ಪಡೆ ಪ್ಲೇ ಆಫ್​​ ಸುತ್ತನ್ನು ಪ್ರವೇಶಿಸಲು ಅವಕಾಶ ಇದ್ದು, ಇದಕ್ಕೆ ಹೀಗೇ ಆಗಬೇಕಿದೆ.ರಾಯಲ್​ ಚಾಲೆಂಜರ್ಸ್​​ ಬೆಂಗಳೂರು, ಐಪಿಎಲ್​ನಲ್ಲಿ ಅಪಾರ ಅಭಿಮಾನಿ ಹೊಂದಿರುವ ತಂಡ. ತನ್ನ ಫ್ಯಾನ್ಸ್​​ಗೆ ನಿರಾಸೆ ಮೂಡಿಸಿರುವ ಆರ್​​ಸಿಬಿ, ಮುಂದಿನ ಪಂದ್ಯಗಳಲ್ಲಿ ಪುಟಿದೇಳುವ ಲೆಕ್ಕಾಚಾರ ಹಾಕಿಕೊಂಡಿದೆ. ಈ ಲೆಕ್ಕಾಚಾರಗಳೆಲ್ಲವೂ ಸರಿಯಾಗಿ ವಿರಾಟ್​ ಪಡೆಯ ಕೈ ಹಿಡಿದಲ್ಲಿ ಬೆಂಗಳೂರು ಮುಂದಿನ ಹಂತ ತಲುಪುವ ಕನಸು ನನಸಾಗುತ್ತದೆ.

ಪ್ರಸಕ್ತ ಐಪಿಎಲ್​​ನಲ್ಲಿ ಆರ್​ಸಿಬಿ ಕಳಪೆ ಆಟದ ಮೂಲಕ ಟೀಕೆಗೆ ಗುರಿಯಾಗಿದೆ. ರಾಯಲ್​ ಚಾಲೆಂಜರ್ಸ್​ ತಂಡ, ತಾನಾಡಿದ 10 ಪಂದ್ಯಗಳಲ್ಲಿ 3 ರಲ್ಲಿ ಜಯ, 7 ರಲ್ಲಿ ಗೆಲುವು ಕಂಡಿದ್ದು, ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪ್ಲೇ ಆಫ್​ ಸುತ್ತನ್ನು ಪ್ರವೇಶಿಸಲು ಆರ್​​ಸಿಬಿಗೆ ಮುಂದಿನ ಎಲ್ಲ ಪಂದ್ಯಗಳಲ್ಲಿ ಗೆಲುವು ಅನಿವಾರ್ಯ. ಅಲ್ಲದೆ ದೊಡ್ಡ ಗೆಲುವು ಆರ್​ಸಿಬಿಗೆ ಅಪ್ಪಿಕೊಂಡಲ್ಲಿ, ಮುಂದಿನ ಹಂತ ಪ್ರವೇಶಿಸುವ ಆಸೆಗೆ ಪುಷ್ಠಿ ಸಿಗಬಹುದು. ಸ್ಟಾರ್ ಪ್ಲೇಯರ್​​ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಆರ್​ಸಿಬಿ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿಲ್ಲ. ಸ್ಟಾರ್​ ಬ್ಯಾಟ್ಸ್​​ಮನ್​​ಗಳ ಬ್ಯಾಟ್​ ಅಬ್ಬರಿಸುತ್ತಿಲ್ಲ. ಕಳೆದ ಕೆಲವು ಪಂದ್ಯಗಳನ್ನು ಅವಲೋಕಿಸಿದ್ರೆ, ಆರ್​ಸಿಬಿ ಬ್ಯಾಟ್ಸ್​​ಮನ್​​ಗಳು ಜವಾಬ್ದಾರಿ ಮರೆತಿದ್ದಾರೆ. ತಂಡದ ನಾಯಕ ವಿರಾಟ್​​ ಕೊಹ್ಲಿ, 10 ಪಂದ್ಯಗಳಲ್ಲಿ 396 ರನ್​ ಕಲೆ ಹಾಕಿದ್ದಾರೆ. ಇದ್ರಲ್ಲಿ 3 ಅರ್ಧಶತಕ ಸೇರಿವೆ. ಇವರನ್ನು ಹೊರತು ಪಡಿಸಿದ್ರೆ, ಎಬಿ ಡಿವಿಲಿಯರ್ಸ್​​​ 286, ಮಂದೀಪ್​​ ಸಿಂಗ್​​ 232, ಕ್ವಿಂಟನ್​ ಡಿಕಾಕ್​​ 201, ಬ್ರೆಂಡನ್​ ಮೆಕಲಂ 127 ರನ್​​ ಬಾರಿಸಿದ್ದಾರೆ. ಆದ್ರೆ ಯಾವೊಬ್ಬ ಬ್ಯಾಟ್ಸ್​​​ಮನ್ಸ್​​ ಸಹ ಸ್ಥಿರ ಪ್ರದರ್ಶನ ನೀಡದೆ ಇರೋದು ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಇನ್ನು ಆರ್​​ಸಿಬಿ ಬೌಲಿಂಗ್​ ಲೈನ್​ ಅಪ್​​ ಮೇಲೆ ಒಂದು ಬಾರಿ ಕಣ್ಣು ಹಾಯಿಸಿದ್ರೆ, ಯಾವಬ್ಬ ಬೌಲರ್​​ ಏಕನಾಮಿ 6ಕ್ಕಿಂತ ಕಡಿಮೆ ಇಲ್ಲವೇ ಇಲ್ಲ. ಡೆತ್​ ಓವರ್​​ಗಳಲ್ಲಿ ರನ್​​ಗಳನ್ನು ಸರಾಗವಾಗಿ ನೀಡಿ ಕೈ ಸುಟ್ಟುಕೊಂಡಿದೆ. ಲೆಕ್ಕಾಚಾರ ನೋಡೋದಾದ್ರೆ, ಆರ್​ಸಿಬಿ ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಲ್ಲಿ ಒಟ್ಟಾರೆಯಾಗಿ 1746 ರನ್​​ ನೀಡಿ, 65 ವಿಕೆಟ್​ ಕಬಳಿಸಿದೆ. ಇದ್ರಲ್ಲಿ ಡೆತ್​ ಓವರ್​​ಗಳಲ್ಲಿ 446 ರನ್​​ ನೀಡಿ ಕೈ ಸುಟ್ಟು ಕೊಂಡಿದೆ. ಅಲ್ಲದೆ ಒಟ್ಟು ನೀಡಿದ ರನ್​​ನ ಶೇಕಡಾ 25 ರಷ್ಟನ್ನು ಡೆತ್​​ ಓವರ್​​ಗಳಲ್ಲಿ ನೀಡಿ ದುಬಾರಿಯಾಗಿದೆ. ಡೆತ್​ ಓವರ್​​ಗಳಲ್ಲಿ 20 ವಿಕೆಟ್​​ಗಳನ್ನು ಆರ್​​ಸಿಬಿ ಪಡೆದುಕೊಂಡಿದೆ. ಇನ್ನು ಆರ್​ಸಿಬಿ ಮುಂದಿನ ಹಂತಕ್ಕೆ ತಲುಪಲು ಮುಂದಿನ ಎಲ್ಲ ಪಂದ್ಯಗಳಲ್ಲಿ ದೆಡ್ಡ ಮಾರ್ಜಿನ್​​ನ ಗೆಲುವು ಅನಿವಾರ್ಯ. ಅಲ್ಲದೆ ಸದ್ಯ ಟೂರ್ನಿಯಲ್ಲಿ ಪುಟಿದೆದ್ದಿರುವ ಮುಂಬೈ ಹಾಗೂ ಕೆಕೆಆರ್​ ಸಹ ಮೂರು ಪಂದ್ಯಗಳಲ್ಲಿ 1 ಗೆಲುವು ಸಾಧಿಸಿದ್ರೆ, ಸಾಕು. ಉಳಿದ ಪಂದ್ಯಗಳಲ್ಲಿ ರೋಹಿತ್​ ಪಡೆ ನಿರಾಸೆ ಅನುಭವಿಸ ಬೇಕು. ಇನ್ನು ಡೆಲ್ಲಿ ಹಾಗೂ ರಾಜಸ್ಥಾನ ತಂಡಗಳು ಮುಂದಿನ ಪಂದ್ಯದಲ್ಲಿ ಸೋಲು ಅನುಭವಿಸಬೇಕು. ಇನ್ನು ಆರ್​ಸಿಬಿ ತಂಡದ ಮುಂದಿನ ಪಂದ್ಯಗಳಲ್ಲಿ ಗೆಲುವಿನ ಅಂತರ ದೊಡ್ಡದಿದ್ದರೆ ಪ್ಲೇ ಆಫ್​ ಹಂತಕ್ಕೆ ಏರುವುದು ಫಿಕ್ಸ್…

ವಿನಾಯಕ ಲಿಮಯೆ, ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿಟಿವಿ

0

Leave a Reply

Your email address will not be published. Required fields are marked *