ತಂಡಕ್ಕೆ ಕಾಡಿದ ಎಬಿಡಿ ಅನುಪಸ್ಥಿತಿ…

ಸೂಪರ್​​ ಸಂಡೆಯಂದು ಆರ್​ಸಿಬಿ ಅಭಿಮಾನಿಗಳ ಮಂಡೆ ಬಿಸಿ ಆಗಿದೆ. ಏನಪ್ಪಾ ನಿಮಗೆ ನಾವೂ ಎಷ್ಟು ಬೆಂಬಲಿಸಿದ್ರೂವೆಷ್ಟೇ.. ನಮ್ಮ ತಂಡ ಎಂಬ ಗತ್ತು ಕಳೆದು ಕೊಳ್ಳುವ ಹಾಗೆ ಆಡಿದ್ದೀರಿ.. ನೀವು ಹೀಗೆ ಆಡಿದ್ರೆ ಈ ಬಾರಿ ಕಪ್​ ನಮ್ಮದೇ ಆಗುತ್ತಾ..? ಎಂಬ ಅಭಿಮಾನಿಗಳ ಬೆಸರದ ಮಾತು ನಿನ್ನೆ ಚಿನ್ನಸ್ವಾಮಿಯ ಸುತ್ತ ಕಾಮನ್​ ಆಗಿತ್ತು. ಹಾಗಿದ್ರೆ ಈ ಬೇಸರಕ್ಕೆ ಕಾರಣ ಏನು ಅಂತಾ ಗೊತ್ತಾ..ಟಾಸ್ ಸೋತರೂ ಮೊದಲ ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭವನ್ನೆ ಪಡೆಯಿತು. ನಿನ್ನೆಯ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಮೈದಾನಕ್ಕೆ ಇಳಿಯಲಿಲ್ಲ. ಆರೋಗ್ಯದಲ್ಲಿ ಕೊಂಚ ಏರು ಪೇರು ಆಗಿದ್ದರಿಂದ ಇವರ ಬದಲಿಗೆ ಬ್ರೆಂಡನ್ ಮೆಕಲಂ ತಂಡ ಸೇರಿಕೊಂಡ್ರು.ಕಳೆದ ಕೆಲವು ಪಂದ್ಯ ಗಳಿಂದ ದೂರ ಉಳಿದಿದ್ದ ಮೆಕಲಂ, ಕೆಕೆಆರ್ ವಿರುದ್ಧ ನೈಜ ಆಟ ಆಡಿದ್ರು. ನಾಯಕನ ಮನ ಗೆಲ್ಲುವಲ್ಲಿ ಸಫಲರಾದ ಮೈಕಲಂ ರನ್ ಚಿತ್ತಾರ ಬಿಡಿಸಿದ್ರು.

8 ಓವರ್ ವರೆಗೂ ಬ್ಯಾಟ್ ಮಾಡಿದ ಕ್ವಿಂಟನ್ ಡಿಕಾಕ್ ಹಾಗೂ ಮೆಕಲಂ ತಂಡಕ್ಕೆ ಭರ್ಜರಿ ಜೊತೆಯಾಟ ನೀಡಿತು. ಈ ಇಬ್ಬರು ಆರಂಭಿಕರು ಕಾರ್ತಿಕ್ ಮುಖದಲ್ಲಿ ಚಿಂತೆಯ ಗೆರೆ ಎದ್ದು ಕಾಣುವಂತೆ ಮಾಡಿದ್ರು. ಡಿಕಾಕ್, ಕುಲ್ದೀಪ್ ಯಾದವ್ ಎಸೆತದಲ್ಲಿ ಔಟ್ ಆದ್ರು. ಮೆಕಲಂ ದೊಡ್ಡ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದ್ರು. ಆದ್ರೆ ಆ್ಯಂಡ್ರಿ ರಸೆಲ್ ಎಸೆತದಲ್ಲಿ ಕಾರ್ತಿಕ್ ಗೆ ಕ್ಯಾಚ್ ನೀಡಿದರು. ಮೆಕಲಂ ಇನ್ನಿಂಗ್ಸ್ ನಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ 38 ರನ್ ಬಾರಿಸಿ ರಂಜಿಸಿದ್ರು. ಇನ್ನು ಮನನ್ ವೋಹ್ರಾ ಬಂದಷ್ಟೆ ಬೇಗ ಪೆವಿಲಿಯನ್ ಸೇರಿದರು. 4ನೇ ವಿಕೆಟ್ ಗೆ ಮಂದೀಪ್ ಸಿಂಗ್ ಹಾಗೂ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ನೆರವಾದ್ರು. ಈ ಜೋಡಿ ತಂಡ ಹಾಕಿಕೊಂಡ ರನ್ ಮುಟ್ಟಿಸುವಲ್ಲಿ ಎಡವಿದ್ರೂ ಸಹ, ಆರ್ ಸಿಬಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲ ನೆರವಾದ್ರು. ಈ ಜೋಡಿ ಕೆಕೆ ಆರ್ ಬೌಲರ್ ಗಳ ವಿರುದ್ಧ ಸ್ಟ್ರೈಕ್ ರೋಟೆಟ್ ಮಾಡುತ್ತಾ ಆಡಿತು. ಅಲ್ಲದೆ ಬೆಂಗಳೂರು ತಂಡಕ್ಕೆ ಅರ್ಧಶತಕದ ಕಾಣಿಕೆ ನೀಡಿತು.

ಇನ್ನು ನಾಯಕ ವಿರಾಟ್ ಕೊಹ್ಲಿ ಉತ್ತಮ ಆಟ ಆಡಿದ್ರು. ವಿರಾಟ್ 44 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ನೆರವಿನಿಂದ 68 ರನ್ ಬಾರಿಸಿ ಮಿಂಚಿದ್ರು. ಅಂತಿಮವಾಗಿ ಆರ್ ಸಿಬಿ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗೆ 175 ರನ್ ಕಲೆ ಹಾಕಿತು. ಇನ್ನು ಸ್ಪರ್ಧಾತ್ಮಕ ಮೊತ್ತ ಹಿಂಬಾಲಿಸಿದ ಕೆಕೆ ಆರ್ ಆರಂಭ ಉತ್ತಮವಾಗಿತ್ತು. ಕ್ರಿಸ್ ಲೈನ್ ಹಾಗೂ ಸುನಿಲ್ ನರೈನ್ ಭರದಜರಿ ಜೊತೆಯಟ ನೀಡಿದರು. ಈ ಜೋಡಿ ವಿರಾಟ್ ರ ಯೋಜನೆಯನ್ನು ಬುಡಮೇಲು ಮಾಡಿತು. ಇನ್ನು ಚಹಾಲ್ ಎಸೆತ ದಲ್ಲಿ ಕ್ರಿಸ್ ಲೈನ್ ಗೆ ಎಂ. ಆಶ್ವಿನ್ ಜೀವದಾನ ನೀಡಿದರು. ಇದರ ಸಂಪೂರ್ಣ ಲಾಭ ಪಡೆದ ಲೈನ್ ಅರದಭಟಿಸಿದರು.

ಇನ್ನು ನರೈನ್ ಮುರಗನ್ ಎಸೆತದಲ್ಲಿ ಒಂದು ಸಿಕ್ಸರ್ ಬಾರಿಸಿದರು. ನಂತರ ಮತ್ತೊಂದು ಅಂತಹದೆ ಸಿಕ್ಸರ್ ಬಾರಿಸಲು ಮುನ್ನುಗಿ ಗ್ರ್ಯಾಂಡ್ ಹೋಮ್ ಗೆ ಕ್ಯಾಚ್ ನೀಡಿದರು.ನಂತರ ಲೈನ್ ಜೊತೆಗೂಡಿದ ಕನ್ನಡಿಗ ರಾಬಿನ್ ಉತ್ತಪ್ಪ ಪಿಚ್ ನ ಮರ್ಮ ಅರಿತು ಬ್ಯಾಟ್ ಮಾಡಿದರು. ಈ ಜೋಡಿ ಸಹ ತಂಡಕ್ಕೆ ಅರ್ಧ ಶತಕದ ಜೊತೆಯಾಟ ನೀಡಿತು. ರಾಬಿನ್ ಸಹ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್ ಆದ್ರು. ಇನ್ನು ನಂತರ ನಂದ ನಿತೀಶ್ ರಾಣಾ ತಂಡವನ್ನು ಗೆಲುಚಿಯ ದಡ ಸೇರಿಸುವತ್ತ ಚಿತ್ತ ನೆಟ್ಟರು. ಆದ್ರೆ ಗಾಯದ ಸಮಸ್ಯೆಯಿಂದ ಮೈದಾನದಿಂದ ಹೊರ ನಡೆದರು. ನಂತರ ಬಂದ ಆ್ಯಂಡ್ರಿ ರಸೆಲ್ ಬಿಗ್ ಶಾಟ್ ಹೊಡೆಯಲು ಹೋಗಿ ಪೆವಿಲಿಯನ್ ಸೇರಿದರು. ನಾಯಕ ದಿನೇಶ್ ಕಾರ್ತಿಕ್ ಹಾಗೂ ಲೈನ್ ತಂಡವನ್ನು ಜಯದ ದಡ ದಾಟಿಸಿದರು. ಕ್ರಿಸ್ ಲೈನ್ 7 ಬೌಂಡರಿ, ಒಂದು ಸಿಕ್ಸರ್ ನೆರವಿನಿಂದ 62 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದ್ರು.ಗೆಲುವಿನ ಆಸೆ ಕೈ ಬಿಟ್ಟ ಆರ್ ಸಿಬಿ ಪ್ಲೇ ಆಫ್ ಆಸೆ ದೂರ ಸರಿದಂತೆ ಕಾಣುತ್ತಿದೆ.

ಸ್ಪೋರ್ಟ್ಸ್ ಬ್ಯೂರೋ ಸುದ್ದಿ ಟಿವಿ

0

Leave a Reply

Your email address will not be published. Required fields are marked *