ಜೀವಾ ದೋನಿ ಡ್ಯಾನ್ಸ್ ವೀಡಿಯೋ ಸಖತ್​ ವೈರಲ್…

ಧೋನಿ ತಮ್ಮ ಬಿಡುವಿನ ಸಮಯವನ್ನು ಹೆಚ್ಚಾಗಿ ಕುಟುಂಬಕ್ಕೆ ಮೀಸಲು ಇಡ್ತಾರೆ ಎಂಬುದು ಎಲ್ಲರಿಗೂ ಗೊತ್ತೆ ಇದೆ. ಅದ್ರಲ್ಲೂ, ತಮ್ಮ ಪತ್ನಿ ಹಾಗೂ ಪುತ್ರಿಯ ಜೊತೆ ಮಾಹಿ ಎಂಜಾಯ್​ ಮಾಡ್ತಾರೆ. ಇತ್ತೀಚಿಗೆ ಕೂಲ್​ ಕ್ಯಾಪ್ಟನ್​ ಮಗಳು ಸಾಮಾಜಿಕ ಜಾಲತಾಣದಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಜೀವಾ ಮತ್ತೊಂದು ವಿಡಿಯೋ ಭಾರಿ ಸದ್ದು ಮಾಡ್ತಾ ಇದೆ.ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಪುತ್ರಿ ಜೀವ ಧೋನಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಒಂದಲ್ಲಾ ಒಂದು ರೀತಿಯ ತರ್ಲೆ ಅಥವಾ ತುಂಟತನ ಮಾಡಿ ಅಭಿಮಾನಿಗಳಿಂದ ಕೈ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಜೀವ ಇದೀಗ ಮತ್ತೊಂದು ಬಾರಿ ಸುದ್ದಿಯಲ್ಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್​ ಧೋನಿ ಮಗಳು ಝೀವಾ ಯಾವಾಗಲು ಫುಲ್​ ಸೌಂಡ್​ ಮಾಡ್ತಿರ್ತಾಳೆ. ಝೀವಾ ಮಾಡೋ ತುಂಟಾವನ್ನು ಸೆರೆ ಹಿಡಿಯೋ ಧೋನಿ – ಸಾಕ್ಷಿ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಾ ಇರ್ತಾರೆ. ಝೀವಾಳ ಈ ತುಂಟಾಟ ನೋಡಿ, ಜನ್ರಂತು ಸಖತ್​ ಎಂಜಾಯ್​ ಮಾಡ್ತಿದ್ದಾರೆ. ಇದೀಗ ಧೋನಿ-ಸಾಕ್ಷಿ, ತಮ್ಮ ಮಗಳ ಹೊಸ ವಿಡಿಯೋವೊಂದನ್ನ ಅಪ್ಲೋಡ್​ ಮಾಡಿದ್ದು, ಭರ್ಜರಿ ಸದ್ದು ಮಾಡ್ತಿದೆ. ಇತ್ತೀಚಿಗೆ ಧೋನಿ ತಮ್ಮ ಮಗಳ ತಲೆ ಕೂದಲನ್ನು ಬಾಚುವ ವಿಡಿಯೋಗಳು ಸಕತ್​ ವೈರಲ್​ ಆಗಿತ್ತು. ಈಗ ಜೂನಿಯರ್​ ಧೋನಿ ಸಖತ್​ ಸ್ಟೆಪ್ಸ್​​ ಹಾಕಿ ಸದ್ದು ಮಾಡಿದ್ದಾರೆ. ವೆಸ್ಟ್​​ಇಂಡೀಸ್​​ನ ಸ್ಟಾರ್​ ಆಲ್​ರೌಂಡರ್​ ಡ್ವೇನ್ ಬ್ರಾವೋ, ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿ ಮಸ್ತ್​ ಎಂಜಾಯ್ ಮಾಡುವ ಪ್ಲೇಯರ್​. ಇವರು ಇದ್ದರೆ ಅಲ್ಲಿ ಸಂತೋಷಕ್ಕೆ ಏನು ಕೊರತೆ ಅಂತೂ ಇಲ್ಲವೇ ಇಲ್ಲ. ಅಲ್ಲದೆ ಎಲ್ಲರನ್ನು ನಕ್ಕು ನಗಿಸುವ ಕಲೆಯನ್ನು ಬ್ರಾವೊ ಕರಗತ ಮಾಡಿಕೊಂಡ ಪ್ಲೇಯರ್​. ಇತ್ತೀಚಿಗೆ ನಡೆದ ಪಾರ್ಟಿಯಲ್ಲಿ ಬ್ರಾವೋ ಎಲ್ಲ ಮಕ್ಕಳನ್ನು ಸೇರಿಸಿಕೊಂಡು, ತಮ್ಮ ಹಾಡನ್ನು ಹಾಡಿದ್ರು. ಅಷ್ಟೇ ಅಲ್ಲಾ ಮಕ್ಕಳೊಂದಿಗೆ, ಮಗುವಾಗಿ ಸ್ಟೆಪ್ಸ್​ ಹಾಕಿದ್ರು. ಈ ಪಾರ್ಟಿಯ ವೇಳೆ ಧೋನಿಯ ಮಗಳು ಜೀವಾ ಸಹ ಇದ್ದರು. ಆಗ ಬ್ರಾವೋ, ಜೀವರೊಂದಿಗೆ ಚಾಂಪಿಯನ್​ ಡ್ಯಾನ್ಸ್​​ಗೆ ಹೆಜ್ಜೆ ಹಾಕಿದ್ರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸದ್ದು ಮಾಡ್ತಾ ಇದೆ.

ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿಟಿವಿ

0

Leave a Reply

Your email address will not be published. Required fields are marked *