ರಾಜನಾಥ್ ಸಿಂಗ್​​ರನ್ನು ಪೇಚಿಗೆ ಸಿಲುಕಿಸಿದ ದಿಗ್ವಿಜಯ್

ನವದೆಹಲಿ: ರಾಜ್ಯಸಭೆ ಕಲಾಪದಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ದಿಗ್ವಿಜಯ್ ಸಿಂಗ್ ಇಕ್ಕಟ್ಟಿಗೆ ಸಿಲುಕಿಸಿದರು. ಎನ್​ಐಎ ವರದಿ ಶೂನ್ಯವೇಳೆಯಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್, ಎನ್​​ಐಎ ಪ್ರಧಾನಿ ಮೋದಿಯವರಿಗೆ ವರದಿ ಸಲ್ಲಿಸುತ್ತದೆಯೇ? ಎಂದು ಪ್ರಶ್ನಿಸಿದರು. ಉತ್ತರಪ್ರದೇಶದ ಗೊಂಡಾದಲ್ಲಿ ನಡೆದ ಚುನಾವಣೆ ರ್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಕಾನ್ಪುರ ರೈಲು ಸ್ಫೋಟ ಕುರಿತು ಹೇಳಿಕೆ ನೀಡಿದ್ದರು. ಐಸಿಸ್ ಉಗ್ರರು ದಾಳಿ ನಡೆಸಿದ್ದಾರೆ ಎಂದಿದ್ದ ಪ್ರಧಾನಿ ಮಾತುಗಳನ್ನು ಉಲ್ಲೇಖಿಸಿದ ದಿಗ್ವಿಜಯ್ ಸಿಂಗ್, ರಾಷ್ಟ್ರೀಯ ತನಿಖಾ ದಳ ಗೃಹಸಚಿವರ ಬದಲಿಗೆ ಪ್ರಧಾನಿಗೆ ವರದಿ ಸಲ್ಲಿಸುತ್ತಿದೆಯೇ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಲು ಗೃಹಸಚಿವ ರಾಜನಾಥ್ ಸಿಂಗ್ ತಡವರಿಸಿದ ಘಟನೆ ನಡೆಯಿತು.

0

Leave a Reply

Your email address will not be published. Required fields are marked *