ಇಂದಿರಾ ಕ್ಯಾಂಟೀನ್​ ಆಗಸ್ಟ್​ 15 ರ ಬದಲು 16ಕ್ಕೆ ಉದ್ಘಾಟನೆಗೊಳ್ಳಲಿದೆ….

ಉದ್ಯಾನನಗರಿ ಜನರ ಬಹುನಿರೀಕ್ಷಿತ ಇಂದಿರಾ ಕ್ಯಾಂಟೀನ್​ ಆಗಸ್ಟ್​ 15 ರ ಬದಲು 16ಕ್ಕೆ ಉದ್ಘಾಟನೆಗೊಳ್ಳಲಿದೆ. ಆಗಸ್ಟ್​ 15 ರಂದು ಸ್ವಾತಂತ್ರ್ಯ ದಿನಾಚರಣೆ ಇರೋದ್ರಿಂದ ಮರುದಿನ ಇಂದಿರಾ ಕ್ಯಾಂಟೀನ್​ಗೆ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡ್ತಾರೆ ಅಂತ ಮೇಯರ್ ಜಿ ಪದ್ಮಾವತಿ ತಿಳಿಸಿದ್ರು. ಈಗಾಗಲೇ 100 ಕಡೆ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿದೆ. ಮೊದಲನೇ ಹಂತದಲ್ಲಿ 125 ಕಡೆ ಕ್ಯಾಂಟೀನ್ ಆರಂಭವಾಗಲಿದ್ದು, ಉಳಿದೆಡೆ ಎರಡನೇ ಹಂತದಲ್ಲಿ ಅಕ್ಟೋಬರ್​ 2 ಕ್ಕೆ ಆರಂಭಿಸಲಾಗುತ್ತೆ. ಪೂರ್ವ ವಲಯದಲ್ಲಿ 27 ಕಡೆ , ಮಹದೇವಪುರದಲ್ಲಿ 14 , ಪಶ್ಚಿಮ ವಲಯದಲ್ಲಿ 23, ಆರ್ ಆರ್ ನಗರ ವಲಯದಲ್ಲಿ 12, ದಕ್ಷಿಣ ವಲಯದಲ್ಲಿ 25, ಬೊಮ್ಮನಹಳ್ಳಿ ವಲಯದಲ್ಲಿ 13, ಯಲಹಂಕ ಹಾಗೂ ದಾಸರಹಳ್ಳಿಯಲ್ಲಿ 15 ಕಡೆ ಇಂದಿರಾ ಕ್ಯಾಂಟೀನ್ ಆಗಸ್ಟ್​ 16 ಕ್ಕೆ ಆರಂಭಗೊಳ್ಳುತ್ತೆ.

0

Leave a Reply

Your email address will not be published. Required fields are marked *