ಬೀದರ್ ನಲ್ಲಿ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ…

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ಇದೀಗ ಜಿಲ್ಲೆಗಳಿಗೂ ವಿಸ್ತರಣೆಯಾಗಿದ್ದು, ಬೀದರ್ ನ 3 ಕಡೆ ಉದ್ಘಾಟಿಸಲಾಗಿದೆ. ಬೆಂಗಳೂರು ಜನತೆ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಇನ್ಮುಂದೆ ಜಿಲ್ಲೆಗಳಲ್ಲೂ ಹಸಿದವರ ಹಸಿವು ನೀಗಿಸಲಿದೆ…ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟೀನ್ ಜಿಲ್ಲೆಗಳಿಗೂ ವಿಸ್ತರಣೆಯಾಗಿದೆ. ಬೀದರ್ ಜಿಲ್ಲೆಯಲ್ಲೂ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆಗೊಂಡಿದ್ದು, ಇನ್ಮುಂದೆ ಜಿಲ್ಲೆಯ ಬಡವರ ಹೊಟ್ಟೆ ತಣಿಸಲಿದೆ.. ಗಡಿಜಿಲ್ಲೆ ಬೀದರ್ ನ ಜಿಲ್ಲಾಸ್ಪತ್ರೆ ಆವರಣ, ನಗರಸಭೆ ಹಾಗೂ ಗಾಂಧಿ ಗಂಜ್ ನಲ್ಲಿ ಇಂದಿರಾ ಕ್ಯಾಂಟೀನ್ ಗೆ ಚಾಲನೆ ದೊರೆಯಿತು. ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಉಪಹಾರ ಸೇವಿಸುವ ಮೂಲಕ ಮಹತ್ವದ ಯೋಜನೆ ಉದ್ಘಾಟಿಸಿದ್ರು. ಶಾಸಕ ರಹೀಂಖಾನ್ ಹಾಗೂ ವಿಜಯ್ ಸಿಂಗ್ ಸಚಿವರಿಗೆ ಸಾಥ್ ನೀಡಿದ್ರು. ಇನ್ಮುಂದೆ 5 ರುಪಾಯಿಗೆ ತಿಂಡಿ, 10 ರುಪಾಯಿಗೆ ರೊಟ್ಟಿ, ಚಪಾತಿ ಊಟ ಸಿಗಲಿದೆ….

ಬೀದರ್ ನಲ್ಲಿ ಇಂದೀರಾ ಕ್ಯಾಂಟೀನ್ ಆರಂಭವಾಗಿರೋದಕ್ಕೆ ಜನರು ಸಂತಸಗೊಂಡಿದ್ದಾರೆ. ಕಡಿಮೆ ದುಡ್ಡಿಗೆ ಹೊಟ್ಟೆ ತುಂಬಾ ಊಟ ಸಿಗುತ್ತದೆಂದು ಹರ್ಷ ವ್ಯಕ್ತಪಡಿಸಿದ್ದಾರೆ….ಈ ಮಧ್ಯೆ, ಚಾಮರಾಜನಗರದಲ್ಲಿ ಆರಂಭವಾದ ಇಂದಿರಾ ಕ್ಯಾಂಟೀನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು ಮಧ್ಯಾಹ್ನ 500 ಜನರ ಊಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಧ್ಯಾಹ್ನ 12.30ರ ಹೊತ್ತಿಗೆ 500 ಟೋಕನ್ ವಿತರಣೆಯಾಗಿದ್ದರೂ ಊಟಕ್ಕಾಗಿ ಜನರು ಸಾಗರೋಪಾದಿಯಲ್ಲಿ ನಿಂತಿದ್ರು….ಒಟ್ಟಾರೆ, ಸರ್ಕಾರದ ಮಹತ್ವದ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೀದರ್ ನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಂಡಿರೋದು ಜನತೆಗೆ ಖುಷಿ ನೀಡಿದೆ,,,,

ಬ್ಯೂರೋ ರಿಪೋರ್ಟ್, ಸುದ್ದಿಟಿವಿ

0

Leave a Reply

Your email address will not be published. Required fields are marked *