ರಾಜ್ಯಸರ್ಕಾರದ ಬಹುನಿರೀಕ್ಷಿತ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಕ್ಷಣಗಣನೆ….

ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಯೋಜನೆಯಾದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ದಿನಗಣನೆ ಪ್ರಾರಂಭವಾಗಿದೆ.. ಕೊನೆಯ ಹಂತದ ಪರಿಶೀಲನೆ ಕಾರ್ಯ ಭರದಿಂದ ನಡೆಯುತ್ತಿದೆ. ಐದು ದಿನಗಳಿಂದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತು ವಿಶೇಷ ಆಯುಕ್ತ ಮನೋಜ್ ರಾಜನ್ ನೇತೃತ್ವದಲ್ಲಿ ಕಾಮಗಾರಿ ಪರಿಶೀಲನೆ ಕಾರ್ಯ ನಡೆಯುತ್ತಿದೆ. ತಡರಾತ್ರಿ ಕೂಡಾ ಮನೋಜ್ ರಾಜನ್, ಬೊಮ್ಮನಹಳ್ಳಿ , ಬನ್ನೇರುಘಟ್ಟ ವ್ಯಾಪ್ತಿಯ ಕೆಲ ಕ್ಯಾಂಟೀನ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ರು. ಇನ್ನೊಂದೆಡೆ ‌ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಚಾಮರಾಜ ಪೇಟೆ, ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕ್ಯಾಂಟೀನ್ ಕಾಮಗಾರಿ ಪರಿಶೀಲನೆ ನಡೆಸಿದ್ರು. ಇನ್ನು ಇದೇ 16 ರಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಆಗಲಿದ್ದು, ಮೊದಲ ಹಂತದಲ್ಲಿ 101 ವಾರ್ಡ್‌ ಗಳಲ್ಲಿ ಕಾರ್ಯಾರಂಭವಾಗಲಿದೆ. ಇನ್ನುಳಿದ 97 ವಾರ್ಡ್ ಗಳಲ್ಲಿ ಆಕ್ಟೋಬರ್ 2 ಒಳಗೆ ಆರಂಭವಾಗಲಿದೆ.. ಮೊದಲ ಹಂತದಲ್ಲಿ ಉದ್ಘಾಟನೆ ಗೊಳ್ಳಲಿರುವ ಕ್ಯಾಂಟೀನ್ ಕಾರ್ಯ ಶೇ. ೯೦ ರಷ್ಟು ಮುಗಿದಿದ್ದು, ಇನ್ನೇನು ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ.

0

Leave a Reply

Your email address will not be published. Required fields are marked *