ಮೋದಿ ಅವಧಿಯಲ್ಲಿ ಭಾರತದ ಸಾಲದ ಪ್ರಮಾಣ ಶೇ.49ರಷ್ಟು ಏರಿಕೆ

ದೆಹಲಿ: ಸರ್ಕಾರ ನೀಡಿರುವ ಹೇಳಿಕೆಯ ಪ್ರಕಾರ ಕೇಂದ್ರ ಸರ್ಕಾರದ ಸಾಲದ ಪ್ರಮಾಣದಲ್ಲಿ ಶೇ. 49ರಷ್ಟು ಏರಿಕೆಯಾಗಿದೆ. ಜೂನ್ 2014ರವರೆಗೆ ಕೇಂದ್ರದ ಸಾಲದ ಪ್ರಮಾಣ 54,90,763 ರೂ. ಆಗಿದ್ದರೆ, ಸೆಪ್ಟಂಬರ್ 2018ರ ಹೊತ್ತಿಗೆ ಇದರ ಪ್ರಮಾಣ 82,03,253 ರೂ.ಗಳಿಗೆ ಏರಿಕೆಯಾಗಿದೆ.

ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಸಾಲದ ಮೊತ್ತದಲ್ಲಿ ಶೇ. 49ರಷ್ಟು ಏರಿಕೆಯಾಗಿದೆ. ಮಾರ್ಚ್ 1ರಂದು ಹಣಕಾಸು ಇಲಾಖೆ ಬಿಡುಗಡೆ ಮಾಡಿರುವ 8ನೇ ಆವೃತ್ತಿಯ ಕೇಂದ್ರ ಸರ್ಕಾರದ ಪ್ರಗತಿ ವರದಿ ಪ್ರಕಾರ, ಜೂನ್ 2014ರವರೆಗೆ ಕೇಂದ್ರದ ಸಾಲದ ಪ್ರಮಾಣ 54,90,763 ರೂ. ಆಗಿತ್ತು. ಆದರೆ, ಸೆಪ್ಟಂಬರ್ 2018ರ ಹೊತ್ತಿಗೆ ಇದರ ಪ್ರಮಾಣ 82,03,253 ರೂ.ಗಳಿಗೆ ಏರಿಕೆಯಾಗಿದೆ.

ಸೆಪ್ಟಂಬರ್ 2018ರವರೆಗಿನ ದತ್ತಾಂಶಗಳ ಪ್ರಕಾರ ಕೇಂದ್ರದ ಸಾಲದ ಮೊತ್ತದಲ್ಲಿ ಏರಿಕೆಯಾಗಿರುವ ಸಂಗತಿಯನ್ನು ಹಣಕಾಸು ಇಲಾಖೆಯ ದಾಖಲೆಗಳು ಬಹಿರಂಗಪಡಿಸಿವೆ. ಸಾರ್ವಜನಿಕ ಸಾಲದ ಪ್ರಮಾಣದಲ್ಲಿ ಶೇ.51.7ರಷ್ಟು ಏರಿಕೆಯಾಗಿದೆ. ಇದರ ಪ್ರಮಾಣ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ 48 ಲಕ್ಷ ಕೋಟಿಯಿಂದ 73 ಲಕ್ಷ ಕೋಟಿಗೆ ಏರಿಕೆಯಾಗಿದೆ. ಆಂತರಿಕ ಸಾಲದ ಪ್ರಮಾಣದಲ್ಲಿ ಶೇ. 54ರಷ್ಟು ಏರಿಕೆಯಾಗಿದ್ದು, ಇದರ ಪ್ರಮಾಣ 68 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಮಾರುಕಟ್ಟೆ ಸಾಲದ ಪ್ರಮಾಣದಲ್ಲಿ ಕೂಡ ಶೇ. 47.8ರಷ್ಟು ಏರಿಕೆಯಾಗಿದ್ದು, ಇದರ ಪ್ರಮಾಣ ಶೇ.52 ಲಕ್ಷ ಕೋಟಿಗೆ ಏರಿಕೆಯಾಗಿದೆ. ಬಂಗಾರದ ಬಾಂಡ್‌ಗಳ ಮೇಲಿನ ಸಾಲದ ಪ್ರಮಾಣ ಜೂನ್ 2014ರಂದಿ 9,089 ಕೋಟಿಗೆ ಸೀಮಿತವಾಗಿದೆ. ಇದರಲ್ಲಿ ಬಂಗಾರದ ಸಾಲ ಯೋಜನೆಗಳೂ ಸೇರಿವೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪ್ರಗತಿ ವರದಿಯಲ್ಲಿ ವಿವರವಾದ ವಿಶ್ಲೆಷಣೆಗಳನ್ನು ನೀಡಿದ್ದು, ಕೇಂದ್ರ ಸರ್ಕಾರ ಅತಿ ಸಾಲಗಾರ ಎಂದು ಹೇಳಿದಂತಾಗಿದೆ. 2010-11ರಿಂದ ವಾರ್ಷಿಕ ಸಾಲದ ಪ್ರಮಾಣವನ್ನು ಬಿಡುಗಡೆ ಮಾಡುವ ಪರಿಪಾಠವನ್ನು ಕೇಂದ್ರ ಸರ್ಕಾರ ಪಾಲಿಸಿಕೊಂಡು ಬರುತ್ತಿದೆ.

ಒಟ್ಟಿನಲ್ಲಿ ದೇಶವನ್ನು ಸಮಗ್ರವಾಗಿ ಪ್ರಗತಿಪಥದತ್ತ ಕೊಂಡೊಯುತ್ತಿದ್ದೆನೆ ಎಂದು ಹೇಳಿಕೊಳ್ಳುತ್ತಿದ್ದ ಮೋದಿಯವರಿಗೆ ಅವರದೇ ಸರ್ಕಾರದ ಸಚಿವಾಲಯ ನೀಡಿರುವ ಹೇಳಿಕೆ ಮುಜುಗರಕ್ಕೆ ಸಿಲುಕಿಸಿದೆ.

0

Leave a Reply

Your email address will not be published. Required fields are marked *