ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಸಾರಥಿ.

..  ವಿರಾಟ್​ ಕೊಹ್ಲಿ ಇನ್ನು ಮುಂದೆ ಟೀಮ್ ಇಂಡಿಯಾದ ನೂತನ ಸಾರಥಿ.  ಟೆಸ್ಟ್​ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ, ಇದೀಗ ಏಕದಿನ ಮತ್ತು ಟಿ-ಟ್ವೆಂಟಿ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಜನವರಿ 15ರಿಂದ ಇಂಗ್ಲೆಂಡ್ ವಿರುದ್ಧ ಏಕದಿನ ಹಾಗೂ ಟ್ವಿ-ಟ್ವೆಂಟಿ ಸರಣಿ ಆರಂಭವಾಗಲಿದೆ. ಈಗಾಗಲೇ ಏಕದಿನ ಮತ್ತು ಟಿ-ಟ್ವೆಂಟಿ ತಂಡದ ನಾಯಕ ಸ್ಥಾನಕ್ಕೆ ಧೋನಿ ರಾಜೀನಾಮೆ ನೀಡಿದ್ದು, ಅವ್ರ ಸ್ಥಾನವನ್ನು ವಿರಾಟ್​ ಕೊಹ್ಲಿ ವಹಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾದ ಆಟಗಾರರ ಪಟ್ಟಿ ಈ ಹೀಗಿದೆ.  ಏಕದಿನ ತಂಡ  ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್. ರಾಹುಲ್​, ಶಿಖರ್ ಧವನ್​ ಯುವರಾಜ್​ ಸಿಂಗ್, ಮಹೇಂದ್ರ ಸಿಂಗ್ ಧೋನಿ, ಮನೀಶ್ ಪಾಂಡೆ, ಕೇದಾರ್ ಜಾಧವ್​, ಅಜ್ಯಂಕ್ಯಾ ರಹಾನೆ, ಹಾರ್ದಿಕ್ ಪಾಂಡ್ಯ, ಆರ್. ಆಶ್ವಿನ್​, ರವೀಂದ್ರ ಜಡೇಜಾ, ಅಮಿತ್ ಮಿಶ್ರಾ, ಜಸ್ಪ್ರಿತ್ ಬೂಮ್ರಾ, ಭುವನೇಶ್ವರ್ ಕುಮಾರ್​, ಉಮೇಶ್​ ಯಾದವ್​.   ಟಿ-ಟ್ವೆಂಟಿ ತಂಡ  ವಿರಾಟ್ ಕೊಹ್ಲಿ (ನಾಯಕ), ಮಹೇಂದ್ರ ಸಿಂಗ್​ ಧೋನಿ, ಮನ್​ದೀಪ್ ಸಿಂಗ್, ಕೆ.ಎಲ್. ರಾಹುಲ್​, ಯುವರಾಜ್ ಸಿಂಗ್​, ಸುರೇಶ್ ರೈನಾ, ರಿಶಬ್ ಪಂತ್​, ಹಾರ್ದಿಕ್ ಪಾಂಡ್ಯಾ, ಆರ್. ಅಶ್ವಿನ್​,  ರವೀಂದ್ರ ಜಡೇಜಾ, ಯುಜುವೇಂದ್ರ ಚಾಹಾಲ್​, ಮನೀಶ್ ಪಾಂಡೆ, ಜಸ್ಪ್ರಿತ್ ಬೂಮ್ರಾ, ಭುವನೇಶ್ವರ್ ಕುಮಾರ್, ಆಶೀಶ್​ ನೆಹ್ರಾ

0

Leave a Reply

Your email address will not be published. Required fields are marked *