ಏರ್ ಸೋ ಸ್ಥಳಾಂತರಕ್ಕೆ ಸಿಎಂ ಕುಮಾರಸ್ವಾಮಿ ಅಸಾಮಾಧಾನ

ಏರ್ ಸೋ ಸ್ಥಳಾಂತರಕ್ಕೆ ಸಿಎಂ ಕುಮಾರಸ್ವಾಮಿ ಸಹ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಕೇಂದ್ರ ಈ ನಿರ್ಧಾರ ಕೈಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳಿರುವುದರಿಂದ ಈ ನಿರ್ಣಯ ಎಂದ್ರು. ಇನ್ನು ಸಿಎಂ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ ಡಿಸಿಎಂ ಪರಮೇಶ್ವರ್, ಏರ್ ಶೋ ಸ್ಥಳಾಂತರ ವಿಚಾರದ ಸುದ್ದಿ ಹರಿದಾಟ ಬೇಸರ ತಂದಿದೆ, ಎನ್‌ಡಿಎ ನಿಂದಾಗಿ ಮಿಲಿಟರಿ ಕಾರ್ಯಕ್ರಮಗಳು ಕೈ ತಪ್ಪುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ರು.

ಎರ್ ಶೋ ಲಖನೌಗೆ ಸ್ಥಳಾಂತರ ಮಾಡಿದ್ದು ಇದು ಸರಿಯಾದ ನಿರ್ಧಾರವಲ್ಲ ಎಂದು ಡಿಕೆಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಬಿಜೆಪಿಯ ಯಡಿಯೂರಪ್ಪ, ಸದಾನಂದಗೌಡ, ಅನಂತಕುಮಾರ್ ಶೆಟ್ಟರ್ ರಾಜ್ಯಕ್ಕೆ ಮಾಡಿದ ಅನ್ಯಾಯದ ಬಗ್ಗೆ ಪ್ರಶ್ನಿಸಲಿ. ಕೇಂದ್ರಕ್ಕೆ ನಿಯೋಗ ಕೊಂಡೋಯ್ದು ಏರಶೋ ಬೆಂಗಳೂರಿಗೆ ತರಲಿ ಎಂದು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ಏರ್​ ಶೋ ಲಖನೌಗೆ ಸ್ಥಳಾಂತರ ವಿಚಾರಕ್ಕೆ ಸಂಬಂದಿಸಿದಂತೆ ರಕ್ಷಣಾ ಸಚಿವೆ ನಿರ್ಮಾಲ ಸೀತಾರಾಮನ್ ವಿರುದ್ಧ ದಿನೇಶ್ ಗುಂಡೂರಾವ್ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಲು ಕರ್ನಾಟಕ ಬೇಕಿತು..? ಆದ್ರೆ ರಫೆಲ್ ಸ್ಕ್ಯಾಮ್ ಮೂಲಕ ಎಚ್‌ಎಎಲ್ ಗೆ ಸಿಗಬೇಕಾದ ಯೋಜನೆ ಕೈ ತಪ್ಪಿಸಿದ್ರಿ .! ಈಗ ಏರ್ ಶೋ ಸರದಿ.. ವೆಲ್ ಡನ್ ಕೆಲಸ ಎಂದು ಟ್ವೀಟರ್ ಮೂಲಕ ಕಾಲೆಳೆದಿದ್ದಾರೆ.

0

Leave a Reply

Your email address will not be published. Required fields are marked *