ಪಾಕ್ ವಿರುದ್ಧ ಭಾರತಕ್ಕೆ ಹ್ಯಾಟ್ರಿಕ್ ಗೆಲುವು..!

ಐಸಿಸಿ ಮಹಿಳಾ ವಿಶ್ವಕಪ್​ನಲ್ಲಿ ನಡೆದ ಭಾರತ- ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಭಾರತದ ಶಿಸ್ತು ಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕ್ ಪಡೆ ಹೀನಾಯ ಸೋಲು ಕಂಡಿದೆ. ನಿನ್ನೆ ಇಂಗ್ಲೆಂಡ್​ನ ಡರ್ಬಿಯಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್​ನಲ್ಲಿ ಭಾರತ ವನಿತೆಯರ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನ ಮಣಿಸಿ, ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸಿದ ಮಿಥಾಲಿ ಪಡೆ ಪಾಯಿಂಟ್ ಪಟ್ಟಿಯಲ್ಲಿ ಆಗ್ರ ಸ್ಥಾನಕ್ಕೇರಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ವನಿತೆಯರ ತಂಡ ಬೃಹತ್ ಮೊತ್ತವನ್ನ ಕಲೆಹಾಕೋ ಲೆಕ್ಕಾಚಾರದಲ್ಲಿತ್ತು. ಆದ್ರೇ, ಈ ಪಾಕ್ ಬೌಲಿಂಗ್ ಆಟ್ಯಾಕ್ ಮುಂದೆ ಮಿಥಾಲಿ ಸೈನ್ಯದ ಆಟ ನಡೆಯಲಿಲ್ಲ. ಕಳೆದೆರೆಡು ಪಂದ್ಯಗಳಲ್ಲಿ ಮಿಂಚಿದ್ದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ 2 ರನ್​ ಗಳಿಸಿದ್ದಾಗ ಎಲ್ಬಿಡಬ್ಲೂ ಬಲೆಗೆ ಬಿದ್ರು.ಆನಂತರ ಕ್ರೀಸ್​ಗೆ ಬಂದ ದೀಪ್ತಿ ಶರ್ಮಾ, ಪೂನಮ್ ರಾವತ್ ಜೊತೆಗೂಡಿ 2ನೇ ವಿಕೆಟ್​ಗೆ 74 ರನ್​ಗಳ ಜೊತೆಯಾಟವಾಡಿದ್ರು. ಆದ್ರೆ, 28 ರನ್ ಗಳಿಸಿದ್ದಾಗ, ದೀಪ್ತಿ ಕೂಡ ಪೆವಿಲಿಯನ್ ಸೇರಿಕೊಂಡ್ರು. ಆದ್ರೆ, ವಿಕೆಟ್ ಮೇಲೆ ವಿಕೆಟ್ ಬೀಳ್ತಾ ಇದ್ರು, ಪೂನಮ್ ರಾವತ್ ಮಾತ್ರ ಏಕಾಂಗಿಯಾಗಿ ಕ್ರೀಸ್​ ಕಚ್ಚಿ ನಿಂತಿದ್ರು.

ಆದ್ರೆ. 47 ರನ್ ಗಳಿಸಿದ್ದಾಗ ರಾವತ್ ಕೂಡ ಔಟಾದ್ರು. ಈ ಮೂಲಕ ಕೆಳ ಕ್ರಮಾಂಕದಲ್ಲೂ ಯಾರೂ ಕೂಡ ನೀರಿಕ್ಷಿತ ಪ್ರದರ್ಶನ ನೀಡಲಿಲ್ಲ. ಅಂತಿಮವಾಗಿ ಭಾರತ ಕೇವಲ 169 ರನ್ ಗಳಿಸಲಷ್ಟೇ ಶಕ್ತವಾಯಿತು.ಇನ್ನು, ಗೆಲುವಿಗೆ ಸುಲಭ 170 ರನ್​ಗಳ ಟಾರ್ಗೆಟ್ ಪಡೆದ ಪಾಕ್ ತಂಡಕ್ಕೆ ಆರಂಭದಲ್ಲೇ ಮಿಥಾಲಿ ಬೌಲರ್​​ಗಳು ಶಾಕ್ ಕೊಟ್ರು. 7 ಓವರ್​​ಗಳಾಗುವಷ್ಟರಲ್ಲಿ ಪ್ರಮುಖ 4 ವಿಕೆಟ್​ಗಳನ್ನ ಕಳೆದುಕೊಂಡು ಪಾಕ್ ಸಂಕಷ್ಟಕ್ಕೆ ಸಿಲುಕಿತು.ಆದ್ರೇ, ನಾಯಕಿ ಸಾನಾ ಮೀರಾ ಹಾಗೂ ಆರಂಭಿಕ ಆಟಗಾರ್ತಿ ನಹೀದಾ ಖಾನ್ ಹೊರತು ಪಡಿಸಿ ಮತ್ಯಾವ ಆಟಗಾರ್ತಿಯೂ ಎರಡಂಕಿ ಮೊತ್ತವನ್ನ ದಾಟಲಿಲ್ಲ. ಅಂತಿಮವಾಗಿ ಪಾಕ್ ಪಡೆ ಕೇವಲ 74 ರನ್​ಗಳಿಗೆ ಸರ್ವಪತನ ಕಾಣೋ ಮೂಲಕ 95 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಭಾರತದ ಪರ ಶಿಸ್ತು ಬದ್ದ ಬೌಲಿಂಗ್ ದಾಳಿ ಮಾಡಿದ ಏಕ್ತಾ ಬಿಷ್ಟ್ 5 ವಿಕೆಟ್ ಪಡೆದ್ರೆ, ಮನ್ಶಿ ಜೋಶಿ 2 ವಿಕೆಟ್ ಪಡೆದು ಮಿಂಚಿದ್ರು. ಕೇವಲ 10 ಓವರ್​ಗಳಲ್ಲಿ 18 ರನ್ ನೀಡಿದ ಏಕ್ತಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದ್ರು..ಒಟ್ನಲ್ಲಿ ಟೂರ್ನಿಯಲ್ಲಿ ಗೆಲುವಿನ ಅಜೇಯ ಓಟವನ್ನ ಮುಂದುವರೆಸಿರೋ ಮಿಥಾಲಿ ಪಡೆ, ಪಾಕ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಹ್ಯಾಟ್ರಿಕ್ ಜಯ ಸಾಧಿಸಿ, ಪ್ರಶಸ್ತಿ ಗೆಲ್ಲೋ ಫೇವರಿಟ್ ಎನಿಸಿದೆ……

ಶಿವಕುಮಾರ್, ಕೆ ಸ್ಪೋರ್ಟ್ಸ್ ಬ್ಯೂರೋ ಸುದ್ದಿಟಿವಿ

0

Leave a Reply

Your email address will not be published. Required fields are marked *