ಕೆಲ್​ಗೆ ಕೆಟ್ಟ ಮೇಲೆ ಬುದ್ಧಿ ಬಂತು- ಸರಣಿಯ ಕಡೆಯ ಇನ್ನಿಂಗ್ಸ್​ನಲ್ಲಿ ಶತಕದ ಮಿಂಚು

ಟೀಮ್ ಇಂಡಿಯಾದ ಕೆ ಎಲ್​ ರಾಹುಲ್​ಗೆ ಕೆಟ್ಟ ಮೇಲೆ ಬುದ್ಧಿ ಮೇಲೆ ಬಂದಿದೆ. ಹೌದು, ಇಂಗ್ಲೆಂಡ್​ ವಿರುದ್ಧ ಟೆಸ್ಟ್ ಸರಣಿ ಆರಂಭದಿಂದಲೂ ರಾಹುಲ್​ ಸತತ ಬ್ಯಾಟಿಂಗ್ ವೈಫಲ್ಯ ಕಂಡಿದ್ರು. ಇದರಿಂದ ಅಭಿಮಾನಿಗಳಿಂದ ಸಾಕಷ್ಟು ಟೀಕೆಗೊಳಗಾಗಿದ್ರು. ಆದ್ರೆ ಕೊನೆಯ ಪರೀಕ್ಷೆಯಲ್ಲಿ ರಾಹುಲ್​ ಫಾರ್ಮ್​ ಕಂಡುಕೊಂಡಿದ್ದಾರೆ. ಭರ್ಜರಿ ಶತಕ ಬಾರಿಸುವ ಮೂಲಕ ರನ್​ಬರದಿಂದ ಹೊರಬಂದಿದ್ದಾರೆ. ನಿರ್ಣಾಯಕ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್​ನಲ್ಲಿ ಪಾಸಾಗುವ ಮೂಲಕ ತಂಡದ ಸೋಲಿನ ಅಂತರ ತಗ್ಗಿಸಿದ್ದಾರೆ.

ಮೊದಲ ಇನ್ನಿಂಗ್ಸ್​​ನಲ್ಲೇ ರಾಹುಲ್ ಬಿಗ್​ ಇನ್ನಿಂಗ್ಸ್​ ಸೂಚನೆ ನೀಡಿ ಔಟಾಗಿದ್ರು. ಆದ್ರೆ ಎರಡನೇ ಇನ್ನಿಂಗ್ಸ್​ನಲ್ಲಿ ರಾಹುಲ್​ ಆ ತಪ್ಪು ಮಾಡಲಿಲ್ಲ. ನಾಲ್ಕನೇ ದಿನ ಆರಂಭದಿಂದಲೇ ರಾಹುಲ್​ ಫುಲ್ಸ್ ಕಾನ್ಫಿಡೆನ್ಸ್​ನಿಂದ ಬ್ಯಾಟ್ ಬೀಸಿದ್ರು. ತಂಡ ಅಪಾಯದ ಸ್ಥಿತಿಯಲ್ಲಿದ್ದರೂ ಎದೆಗುಂದದೆ ಉತ್ತಮ ಶಾಟ್​ಗಳ ಮೂಲಕ ಗಮನಸೆಳೆದ್ರು. ನಿನ್ನೆ ಕೂಡ ರಾಹುಲ್​ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ರು. ನಾಲ್ಕನೇ ವಿಕಟ್​ಗೆ ಅಜಿಂಕಕ್ಯಾ ರಹಾನೆ ಜೊತೆ ಸೇರಿ ಶತಕದ ಜೊತೆಯಾಟವಾಡಿದ್ರು. ಏಕದಿನ ಮಾದರಿಯಲ್ಲಿ ರನ್​ಗಳಿಸಿದ್ರು. ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನ ತಾಳ್ಮೆಯಿಂದ ಎದುರಿಸಿದ್ರು. ಲೂಸ್​ ಬಾಲ್​ಗಳಿಗೆ ಬೌಂಡರಿಯ ದರ್ಶನ ಮಾಡಿಸಿದ್ರು.

ರಹಾನೆ ಔಟಾದ ನಂತರವೂ 6ನೇ ವಿಕೆಟ್​ಗೆ ರಿಷಬ್​ ಪಂತ್ ಜೊತೆಗೂಡಿ ಇನ್ನಿಂಗ್ಸ್​ ಬಿಲ್ಡ್​ ಮಾಡಿದ್ರು. ಟೆಸ್ಟ್​ ಕರಿಯರ್​ನ 5ನೇ ಶತಕದ ಮೈಲ್​ಸ್ಟೋನ್​ ತಲುಪಿದ್ರು. ಅಲ್ಲದೇ ಇಂಗ್ಲೆಂಡ್ ವಿರುದ್ಧ 2ನೇ ಹಾಗೂ ಇಂಗ್ಲೆಂಡ್​ನಲ್ಲಿ ಮೊದಲ ಶತಕ ದಾಖಲಿಸಿದ ಸಾಧನೆ ಮಾಡಿದ್ರು. 5 ವರೆ ಗಂಟೆಗಳ ಕಾಲ ಕ್ರೀಸ್​​​ನಲ್ಲಿ ಗಟ್ಟಿಯಾಗಿ ತಳವೂರಿ ಆಂಗ್ಲರ ಎದೆಯಲ್ಲಿ ಆತಂಕ ಮೂಡಿಸಿದ್ರು. ಆದ್ರೆ ಕೊನೆಗೆ ಕೇವಲ 1 ರನ್​ನಿಂದ 150 ರನ್​ನಿಂದ ವಂಚಿತರಾದ್ರು. ಹೌದು, ಐದನೇ ದಿನ ರಾಹುಲ್​ ನಷ್ಟೇ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್ ರಿಷಬ್ ಪಂತ್ ಕೂಡ ತಂಡವನ್ನ ಸೋಲಿನ ಸುಳಿಯಿಂದ ರಕ್ಷಿಸಲು ಪ್ರಯತ್ನಿಸಿದ್ರು. ರಾಹುಲ್ ಜೊತೆ ಸೇರಿ ಆಂಗ್ಲ ಬೌಲರ್​ಗಳನ್ನ ಕಾಡಿದ್ರು. ಒತ್ತಡ ಮೆಟ್ಟಿನಿಂತು ಅದ್ಭುತ ಶಾಟ್​ಗಳ ಮೂಲಕ ಮಿಂಚು ಹರಿಸಿದ್ರು. ರಾಹುಲ್​ಗೆ ತಕ್ಕ ಸಾಥ್ ನೀಡಿದ್ರು.

ಅಲ್ಲದೇ 200 ರನ್​ ಜೊತೆಯಾಟದಲ್ಲಿ ಭಾಗಿಯಾದ್ರು. ಈ ಜೊತೆಯಾಟದ ವೇಳೆ ರಿಷಬ್​ ಅದಿಲ್​ ರಶೀದ್ ಎಸೆತದಲ್ಲಿ ಸಿಕ್ಸ್ ಬಾರಿಸುವ ಮೂಲಕ ಟೆಸ್ಟ್​ ಕರಿಯರ್​ನ ಚೊಚ್ಚಲ ಶತಕ ಸಿಡಿಸಿದ ದಾಖಲೆ ಬರೆದ್ರು. ಅಲ್ಲದೇ ಮೊದಲ ಇಂಗ್ಲೆಂಡ್ ಪ್ರವಾಸದಲ್ಲೇ ಶತಕ ಗಳಿಸಿದ ಸಾಧನೆಗೈದ್ರು. ರಾಹುಲ್​ರಂತೆ ಬಿರುಸಿನ ಆಟಕ್ಕೆ ಮೊರೆ ಹೋದ ರಿಷಬ್​ 146 ಎಸೆತಗಳಲ್ಲಿ 15 ಬೌಂಡರಿ, 4 ಭರ್ಜರಿ ಸಿಕ್ಸರ್​ಗಳಿಂದ 114 ರನ್​ಗಳಿಸಿದ್ರು.

ಅದೇನೆ ಇರಲಿ, ಈ ಇಬ್ಬರ ಬ್ಯಾಟ್ಸ್​​ಮನ್ಸ್​ ಮೊದಲೇ ತಮ್ಮ ಬ್ಯಾಟಿಂಗ್ ತಾಕತ್ತು ತೋರಿಸಿದ್ರೆ, ಟೀಮ್ ಇಂಡಿಯಾ ಸರಣಿ ಸೋಲು ಕಾಣ್ತಾ ಇರಲಿಲ್ಲ. ಆದ್ರೆ ಮುಂದಿನ ಟೆಸ್ಟ್​ ಸರಣಿಗಳಲ್ಲಿ ಈ ಆಟಗಾರರು ಇದೇ ಆಟ ಮುಂದುವರೆಸಲಿ ಅನ್ನೋದು ಅಭಿಮಾನಿಗಳ ಆಶಯ.

0

Leave a Reply

Your email address will not be published. Required fields are marked *