ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ 103ನೇ ಸ್ಥಾನ: ಕೇಂದ್ರಕ್ಕೆ ಮುಜುಗರ

ಚಿತ್ರ ಕೃಪೆ: www.newsclick.in

ದೆಹಲಿ: 2018ರ ಭಾರತ ಜಾಗತಿಕ ಹಸಿವಿನ ಸೂಚ್ಯಂಕ ಪ್ರಕಟವಾಗಿದ್ದು, ಭಾರತ 103ನೇ ಸ್ಥಾನ ಪಡೆದಿದೆ. ಹಸಿವಿನಿಂದ ನರಳುತ್ತಿರುವ 119 ರಾಷ್ಟ್ರಗಳ ಪೈಕಿ ಭಾರತ 103ನೇ ಸ್ಥಾನ ಪಡೆದಿದೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಮುಜುಗರ ಎದುರಾದಂತಾಗಿದೆ. ಗಂಭೀರ ಹಸಿವಿನ ಸಮಸ್ಯೆ ಮತ್ತು ಅಪೌಷ್ಠಿಕತೆಯ ಸಮಸ್ಯೆಯ ಸುಳಿಯಲ್ಲಿರುವ ದೇಶಗಳ ಪೈಕಿ ಭಾರತ ಚೀನಾ, ಬಾಂಗ್ಲಾ, ನೇಪಾಳ ಮತ್ತು ಶ್ರೀಲಂಕಾ ದೇಶಗಳಿಗಿಂತ ಹಿಂದುಳಿದಿದೆ.

ಜಾಗತಿಕ ಹಸಿವಿನ ಸೂಚ್ಯಂಕವನ್ನು ನಿರ್ಧರಿಸಲು ಪ್ರಮುಖವಾಗಿ 4 ಅಂಶಗಳನ್ನು ಮಾನದಂಡವಾಗಿ ಇಟ್ಟುಕೊಳ್ಳಲಾಗುತ್ತದೆ. ಪೋಷಣೆಯ ಕೊರತೆ, ಶಿಶುಗಳ ಮರಣ, ಮಗುವಿನಲ್ಲಿ ಪೋಷಕಾಂಶದ ಕೊರತೆ ಮತ್ತು ಮಗುವಿನ ಬೆಳವಣಿಗೆ ಕುಂಠಿತವಾಗಿರುವುದನ್ನು ಆಧರಿಸಿ ಈ ಅಂಕಿ ಅಂಶಗಳನ್ನು ತಯಾರಿಸಲಾಗುತ್ತದೆ. ಗಮನಾರ್ಹ ಸಂಗತಿಯೆಂದರೆ, ಭಾರತದ ನೆರೆಹೊರೆಯ ರಾಷ್ಟ್ರಗಳಾದ ಚೀನಾಗೆ 25 ನೇ ಸ್ಥಾನ, ನೇಪಾಳಕ್ಕೆ 72ನೇ ಸ್ಥಾನ, ಮಯನ್ಮಾರ್​ಗೆ 68ನೇ ಸ್ಥಾನ, ಶ್ರೀಲಂಕಾ ದೇಶಕ್ಕೆ 67ನೇ ಸ್ಥಾನ ಮತ್ತು ಬಾಂಗ್ಲಾದೇಶಕ್ಕೆ 86ನೇ ಸ್ಥಾನ ಸಿಕ್ಕಿದೆ. ಈ ದೇಶಗಳಿಗಿಂತ ಭಾರತ ಕಳಪೆ ಸಾಧನೆ ತೋರಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಹಿಂದಿ ಪತ್ರಿಕೆಯ ವರದಿಯನ್ನು ಟ್ವೀಟ್ ಮಾಡಿದ್ದು, ಕಾವಲುಗಾರ ಭಾಷಣವನ್ನು ತುಂಬಾ ಚೆನ್ನಾಗಿ ಕೊಟ್ಟರು. ಹೊಟ್ಟೆಯ ಸ್ಥಿತಿಯನ್ನು ಮರೆತುಬಿಟ್ಟರು. ಯೋಗ – ಭೋಗಗಳೆಲ್ಲವನ್ನು ಚೆನ್ನಾಗಿ ಮಾಡಿದರು. ಜನತೆಯ ಪಡಿತರವನ್ನು ಮರೆತುಬಿಟ್ಟರು ಎಂದು ಹಿಂದಿಯಲ್ಲಿ ಕವಿತೆಯ ಶೈಲಿಯಲ್ಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, 22,000 ಲೈಕ್​​ಗಳು, 7.5 ಸಾವಿರ ಬಾರಿ ಶೇರ್ ಆಗಿವೆ.

ಅಧ್ಯಯನದ ವರದಿಯ ಪ್ರಕಾರ, ಜಾಗತಿಕ ಮಟ್ಟದಲ್ಲಿ 124 ದಶಲಕ್ಷ ಜನ ತೀವ್ರ ಹಸಿವಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. 13ನೇ ಆವೃತ್ತಿಯ ಸಮೀಕ್ಷೆಯನ್ನು ವೆಲ್ತ್​​ಹಂಗರ್​ಲೈಫ್ ಮತ್ತು ಕನ್ಸರ್ನ್​​ ವರ್ಲ್​​​ವೈಡ್ ಎನ್​​ಜಿಒ ಈ ಸಮೀಕ್ಷೆಯನ್ನು ನಡೆಸಿದೆ. ಈ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *