ಭಾರತ ವಿರುದ್ಧ ತೊಡೆ ತಟ್ಟಿರುವ ಲಂಕಾ

​ತವರಿನಲ್ಲಿ ಹುಲಿಯಂತೆ ಘರ್ಜಿಸುತ್ತಿರುವ ಟೀಮ್​ ಇಂಡಿಯಾ ಕೊಂಚ ವಿಶ್ರಾಂತಿಯ ಬಳಿಕ ಮತ್ತೊಂದು ಸರಣಿಗೆ ಸಿದ್ಧವಾಗಿದೆ. ಕಳೆದ ಒಂದು ತಿಂಗಳು ಸೀಮಿತ ಓವರ್​​ಗಳಲ್ಲಿ ಮಿಂಚು ಹರಿಸಿದ್ದ ಕೋಹ್ಲಿ ಬಾಯ್ಸ್​​, ನಾಳೆಯಿಂದ ಆರಂಭವಾಗುವ ಟೆಸ್ಟ್​​​ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದ್ದಾರೆ. ತವರಿನ ಅಭಿಮಾನಿಗಳ ಬೆಂಬಲ ಹಾಗೂ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಟೀಮ್​ ಇಂಡಿಯಾ ಬಲಿಷ್ಠವಾಗಿದೆ.

ಸದ್ಯ ಟೀಮ್​ ಇಂಡಿಯಾದ ರ್ಯಾಂಕಿಂಗ್​ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಈ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಇನ್ನು ಲಂಕಾ ಆರನೇ ಸ್ಥಾನದಲ್ಲಿದ್ದು, ಸರಣಿ ಗೆದ್ದು ಶ್ರೇಯಾಂಕದಲ್ಲಿ ಬಡ್ತಿ ಪಡೆಯುವ ಯೋಜನೆಯನ್ನು ಹೆಣೆದುಕೊಂಡಿದೆ. ಉಭಯ ತಂಡದಲ್ಲಿ ಸ್ಟಾರ್​ ಆಟಗಾರರು ಇದ್ದು ಯಾರ ಕೈ ಮೇಲಾಗುತ್ತದೆ ಎಂಬ ಕುತೂಹಲ ಹೆಚ್ಚಿದೆ.

ತವರಿನಲ್ಲಿ ನಡೆಯುವ ಪಂದ್ಯದಲ್ಲಿ ಯಾವ ಆರಂಭಿಕರ ಜೋಡಿ ಟೀಮ್​ ಇಂಡಿಯಾ ಪರ ಕಣಕ್ಕೆ ಇಳಿಯುತ್ತಾರೆ ಎಂಬ ಕುತೂಹಲ ಮೂಡಿಸಿದೆ. ಇನ್ನು ಶಿಖರ್​​ ಧವನ್​, ಮುರುಳಿ ವಿಜಯ್​ ನಾಯಕನ ಮೊದಲ ಆದ್ಯತೆ. ಇನ್ನು ಕನ್ನಡಿಗ ಕೆ.ಎಲ್​ ರಾಹುಲ್​ ಭರ್ಜರಿ ಫಾರ್ಮ್​​ನಲ್ಲಿರುವುದರಿಂದ ಇವರನ್ನು ಕಡೆಗಣಿಸುವಂತಿಲ್ಲ. ಈ ಮೂವರಲ್ಲಿ ಯಾವ ಇಬ್ಬರಿಗೆ ಸ್ಥಾನ ಸಿಗುತ್ತದೆ ಎಂಬ ಕುತೂಹಲ ಹೆಚ್ಚಿದೆ.

ಇನ್ನು ದೇಶಿಯ ಟೂರ್ನಿಗಳಲ್ಲಿ ಆಕರ್ಷಕ ಆಟವಾಡಿರುವ ಚೇತೇಶ್ವರ್​ ಪೂಜಾರ್​, ಈಡನ್​ನಲ್ಲಿ ರನ್​​ ಹೊಳೆ ಹರಿಸುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ನಾಯಕ ವಿರಾಟ್​ ಕೊಹ್ಲಿ ರನ್​ ಕಲೆ ಹಾಬಲ್ಲರು. ಅಜಿಂಕ್ಯ ರಹಾನೆ, ವೃದ್ಧಿಮಮ್​ ಸಹಾ ಜವಾಬ್ದಾರಿಯುತ ಇನಿಂಗ್ಸ್​ ಕಟ್ಟಬಲ್ಲರು.

ಇನ್ನು ಬೌಲಿಂಗ್​ ವಿಭಾಗದಲ್ಲಿ ಮೂವರು ಸ್ಪಿನ್ನರ್​​ಗಳು ಕಣಕ್ಕೀಳಿಯುವ ನಿರೀಕ್ಷೆ ಇದೆ. ಈಡನ್​ ಗಾರ್ಡನ್​ ಅಂಗಳ ಸ್ಪಿನ್ನರ್​​ಗಳಿಗೆ ನೆರವು ನೀಡಲಿದ್ದು, ಆರ್​ ಅಶ್ವಿನ್​, ರವೀಂದ್ರ ಜಡೇಜಾ, ಮತ್ತು ಕುಲ್ದೀಪ್​ ಯಾದವ್​ ಕಣಕ್ಕಿಳಿಯುವ ನಿರೀಕ್ಷೆ ಇದೆ. ವೇಗಿ ಇಶಾಂತ ಮತ್ತು ಮಹಮ್ಮದ ಶಮಿಗೆ ನಿಜವಾದ ಸವಾಲು ಎದುರಾಗುವ ಸಾಧ್ಯತೆ ಇದೆ. ಒಂದು ವೇಳೆ ನಾಯಕ ಇಬ್ಬರು ಸ್ಪಿನ್ನರ್​​ಗಳನ್ನ ಮಾತ್ರ ಕಣಕ್ಕಿಳಿಸಿದಲ್ಲಿ. ಅಶ್ವಿನ್​, ರವೀಂದ್ರ ಜಡೇಜಾ ಸ್ಥಾನ ಪಡೆಯುವುದು ಪಕ್ಕಾ.

ಲಂಕಾ ತವರಿನಲ್ಲಿ ಸರಣಿ ವೈಟ್​ವಾಶ್​ ಮುಖಭಂಗ ಅನುಭವಿಸಿದ್ದು, ಸೇಡು ತೀರಿಸಿಕೊಳ್ಳಲು ಪ್ಲಾನ್​ ಮಾಡಿಕೊಂಡಿದೆ. ಭಾರತವನ್ನು ತವರಿನಲ್ಲಿ ಮಣಿಸಲು ಭಿನ್ನ ತಂತ್ರವನ್ನ ಹೆಣೆದುಕೊಂಡಿದೆ. ಲಂಕಾ ಕೂಡ ಸ್ಪಿನ್ನ​ರ್​ಗೆ ಮಣೆ ಹಾಕುವ ನಿರೀಕ್ಷೆ ಇದ್ದು, ಇಬ್ಬರು ಸ್ಪಿನ್ನರ್​ಗಳಾದ ರಂಗನ್​ ಹೆರಾತ್​ ಮತ್ತು ಸುರಂಗಾ ಲಕ್ಮಾಲ್​, ಕಣಕ್ಕಿಳಿಸಬಹುದು. ಟೆಸ್ಟ್​ನಲ್ಲಿ​ ಮಿಂಚಿದ್ದ ಲಂಕಾ ಹಿರಿಯ ಸ್ಪಿನ್ನರ್​ ರಂಗನ್​ ಹೆರಾತ್​ ಇಂದಿನ ಪಂದ್ಯದಲ್ಲೂ ಕಮಾಲ್​ ಮಾಡಲು ರೆಡಿಯಾಗಿದ್ದಾರೆ.

ಇನ್ನು ಉಭಯ ತಂಡಗಳು ಈಡನ್​ಗಾರ್ಡನ್​ ಅಂಗಳದಲ್ಲಿ ಒಂದು ಬಾರಿಯು ಮುಖಾಮುಖಿಯಾಗಿಲ್ಲ. ಇದೇ ಮೊದಲ ಬಾರಿಗೆ ಎರಡು ತಂಡಗಳು ಮೊದಲ ಟೆಸ್ಟ್​ ಆಡಲಿವೆ. ಲಂಕನ್ನರು ಬ್ಯಾಟಿಂಗ್​ ವಿಭಾಗದಲ್ಲಿ, ಆ್ಯಂಜಲೋ ಮ್ಯಾಥ್ಯೂಸ್​, ದಿನೇಶ್​ ಚಾಂಡಿಮಾಲ್​, ಡಕ್​ವೆಲ್ಲಾ,  ತಿರುಮನ್ನೆ ಅವರನ್ನು ನಂಬಿಕೊಂಡಿದ್ದು, ಭಾರತೀಯ ಬೌಲರ್​ ವಿರುದ್ಧ ತೊಡೆ ತಟ್ಟಲು ಸಜ್ಜಾಗಿದ್ದಾರೆ.

ಇನ್ನು ಅಂಕಿ ಅಂಶಗಳ ಲೆಕ್ಕಾಚಾರದ ಪ್ರಕಾರ ಶ್ರೀಲಂಕಾ ಭಾರತದ ನೆಲದಲ್ಲಿ ಒಂದೇ ಒಂದು ಟೆಸ್ಟ್​ ಗೆದ್ದಿಲ್ಲ. ಅಲ್ದೇ ಭಾರತ ಬೌಲಿಂಗ್​ ಬ್ಯಾಟಿಂಗ್​ ವಿಭಾಗದಲ್ಲಿ ಬಲಿಷ್ಠವಾಗಿದೆ. ಹೀಗಿರುವಾಗ, ಸಿಂಹಳೀಹರು ಭಾರತದ ವಿರುದ್ಧ ಗೆದ್ದು ಇತಿಹಾಸ ನಿರ್ಮಿಸ್ತಾರಾ..? ಅಥವಾ ತಮ್ಮ ಸೋಲಿನ ಸರಪಳಿ ಮುಂದವರೆಸುತ್ತಾ.. ಕಾದು ನೋಡಬೇಕು.

ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *