ಇಂಡಿಯಾ-ಚೀನಾ ಇನೋವೇಶನ್ ಫೋರಂ ಯಶಸ್ವಿ

ಭಾರತ ಮತ್ತು ಚೀನಾದ ನಡುವೆ ಅದೆಷ್ಟೇ ರಾಜತಾಂತ್ರಿಕ ಸಮಸ್ಯೆಗಳಿದ್ದರೂ, ವ್ಯಾವಹಾರಿಕವಾಗಿ ಎರಡೂ ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯ ಇದೆ ಅನ್ನೋದಕ್ಕೆ ಸಾಕ್ಷಿಯಾಗಿದ್ದು, ವರ್ಲ್ಡ್ ಟ್ರೇಡ್ ಸೆಂಟರ್ ನ ನಾರ್ಥನ್ ಹೈವೇಯಲ್ಲಿ ನಡೆದ ಇಂಡಿಯಾ-ಚೀನಾ ಇನೋವೇಶನ್ ಫೋರಂ 2017 ಕಾರ್ಯಕ್ರಮ.

ಒಂದೆಡೆ ಚೀನಾದವರನ್ನು ಸೆಳೆದ ಭಾರತೀಯ ಶಾಸ್ತ್ರೀಯ ಸಂಗೀತ, ಇನ್ನೊಂದೆಡೆ ಭಾರತೀಯರನ್ನು ರಂಜಿಸಿದ ಚೀನಾದ ಸಾಂಪ್ರದಾಯಿಕ ಗೀತೆ ಮತ್ತು ಅದನ್ನು ಪ್ರಸ್ತುತ ಪಡಿಸಿದ ಚೀನಾದ ಮಹಿಳಾ ಪ್ರತಿನಿಧಿಗಳು. ಈ ಸುಂದರ ಸಂಜೆಗೆ ಸಾಕ್ಷಿಯಾಗಿದ್ದು, ರಾಷ್ಟ್ರದ ಪ್ರತಿಷ್ಠಿತ ಕಂಪೆನಿ ಪೋಡಾರ್ ಎಂಟರ್ ಪ್ರೈಸಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 6ನೇ ಇಂಡಿಯಾ-ಚೀನಾ ಇನೋವೇಶನ್ ಫೋರಂ ಕಾರ್ಯಕ್ರಮ.

ಸುಮಾರು 200 ಚೀನಾ ಪ್ರತಿನಿಧಿಗಳು ಆಗಮಿಸಿದ್ದ ಕಾರ್ಯಕ್ರಮದಲ್ಲಿ ಎರಡೂ ದೇಶಗಳ ನಡುವೆ ವ್ಯಾವಹಾರಿಕ ಕೊಡುಕೊಳ್ಳುವಿಕೆಗೆ ಸಂಬಂಧಪಟ್ಟ ಪ್ರಮುಖ ಚರ್ಚೆಗಳು ನಡೆಯುತ್ತವೆ. ಈ ಸುಂದರ ಸಂಜೆಯ ಕಾರ್ಯಕ್ರಮಕ್ಕೆ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ ಗುರೂಜಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಎರಡೂ ದೇಶದ ಬಾಂಧವ್ಯ ಬೆಸುಗೆಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಅವರು ಮನುಷ್ಯನ ಒತ್ತಡದ ಜೀವನದಿಂದ ಹೊರಬಂದು ಬದುಕಬೇಕಾದ ಪರಿಯನ್ನು ವಿವರಿಸಿದರು.

ಬೆಂಗಳೂರಿನಲ್ಲಿ 6ನೇ ಬಾರಿಗೆ ಚೀನಾ ಮತ್ತು ಭಾರತದ ಇನೋವೇಶನ್ ಫೋರಂ ಹಮ್ಮಿಕೊಳ್ಳಲಾಗಿದ್ದು, ಎರಡೂ ದೇಶಗಳ ನಡುವೆ ಅತೀ ಹೆಚ್ಚು ಯಶಸ್ವಿ ವ್ಯವಹಾರಗಳನ್ನು ನಡೆಸಿದವರಿಗೆ ಈ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಅಷ್ಟೇ ಅಲ್ಲದೇ ಈ ಸ್ನೇಹಕೂಟ ಹಲವು ಮಹತ್ವದ ವ್ಯಾವಹಾರಿಕ ಒಪ್ಪಂದಗಳನ್ನು ಎರಡು ದೇಶಗಳ ನಡುವೆ ಬೆಳಸಲಿದೆ.

ರಾಜತಾಂತ್ರಿಕ ರೀತಿಯಲ್ಲಿ ನಮ್ಮ ನಡುವೆ ಅದೆಷ್ಟೇ ಅಸಮಾಧಾನಗಳಿದ್ದರೂ ವ್ಯಾವಹಾರಿಕವಾಗಿ ಇಂದಿಗೂ ಒಂದಿಷ್ಟು ಕೊಡುಕೊಳ್ಳುವಿಕೆ ನಡೆಯುತ್ತಲೇ ಇದೆ, ಅದು ಅನಿವಾರ್ಯ ಕೂಡ. ಈ ನಡುವೆ ಸಿಐಎಫ್ ಎ ಮತ್ತು ಫೋಡಾರ್ ಎಂಟರ್ ಪ್ರೈಸಸ್ ವತಿಯಿಂದ ಆಯೋಜಿಸಿದ ಈ ಸ್ನೇಹಕೂಟ ಯಶಸ್ವಿಯಾಗಿದೆ.

ಪವಿತ್ರ ಬಿದ್ಕಲ್ ಕಟ್ಟೆ ಮೆಟ್ರೋ ಬ್ಯುರೋ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *