ಎಎಫ್​​ಸಿ ಕಪ್​ ಅರ್ಹತಾ ಸುತ್ತಿನ ಪಂದ್ಯಕ್ಕೆ ಕಾಡಿತು ಮಳೆ- ಕಂಠೀರವದಲ್ಲಿ ಬ್ಲ್ಯೂ ಬಾಯ್ಸ್​ ಹರಿಸಿದ್ರು ಗೋಲಿನ ಮಳೆ

ಒಂದು ಕಡೆ ತುಂತುರು ಮಳೆ.. ಇನ್ನೊಂದೆಡೆ ಗೋಲುಗಳ ಸುರಿಮಳೆ.. ಟೀಮ್​ ಇಂಡಿಯಾ AFC ಕಪ್​ ಫುಟ್ಬಾಲ್​ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ, ಮಕಾವೊ ತಂಡದ ವಿರುದ್ಧ ಜಯ ಸಾಧಿಸಿದೆ. ಪಂದ್ಯದ ರೋಚಕ ಕ್ಷಣಗಳ ಗುಚ್ಛ ನಿಮ್ಮ ಮುಂದೆ.

ಭಾರತ VS ಮಕಾವ್​​
ಮೊದಲಾವಧಿಯಲ್ಲಿ ಸಮಬಲದ ಆಟ

ಕಂಠೀರವ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ AFC ಕಪ್​ ಫುಟ್ಬಾಲ್​ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಭಾರತ ಹಾಗೂ ಮಕಾವ್ ತಂಡಗಳು ಕಾದಾಟವನ್ನು ನಡೆಸಿದವು. ಒಂದು ಕಡೆಯಲ್ಲಿ ಮಳೆ.. ಮಳೆಯ ಮಧ್ಯ ಫುಟ್ಬಾಲ್..

ಪಂದ್ಯದ ಆರಂಭದಿಂದಲೂ ಆಕರ್ಷಕ ಹೊಡೆತ ಹಾಗೂ ರಕ್ಷಣಾತ್ಮಕ ಆಟದ ಮೂಲಕ ಗಮನ ಸೆಳೆದ ಭಾರತ ಅಬ್ಬರದ ಆಟ ಪ್ರದರ್ಶಿಸಿತು. ಮೊದಲಾವಧಿಯ ಅಂಕಗಳಿಸಿ ಎದುರಾಳಿ ತಂಡದ ಮೇಲೆ ಒತ್ತಡ ಹೇರುವ ಸುನಿಲ್​ ಛೆಟ್ರಿ ಪಡೆಯ ಆಸೆ ಫಲಿಸಿತು. 28ನೇ ನಿಮಿಷದಲ್ಲಿ ರಾವಲಿನ್​ ಬೊರ್ಗಸ್​​, ಸಹ ಆಟಗಾರ ನೀಡಿದ ಉತ್ತಮ ಪಾಸ್​ನ ಲಾಭ ಪಡೆದು, ಭಾರತಕ್ಕೆ ಮೊದಲ ಅಂಕದ ಮಾಲೆ ತೊಡಿಸಿದ್ರು.

ಇದೇ ಅವಧಿಯ 37ನೇ ನಿಮಿಷದಲ್ಲಿ ಮಕಾವ್ ತಂಡದ ನಿಕ್ಕಿ ಛೆಟ್ರಿ ಪಡೆಯ ರಕ್ಷಣಾ ಕೋಟೆಯ ಕಣ್ಣು ತಪ್ಪಿಸಿ ಗೋಲು ದಾಖಲಿಸಿ, ಅಂತರವನ್ನು ಸಮನಾಗಿಸಿತು.

ಎರಡನೇ ಅವಧಿಯಲ್ಲಿ ಅಬ್ಬರಿಸಿದ ಭಾರತ
ಉಡುಗೊರೆ ಗೋಲು ನೀಡಿದ ಮಕಾವ್
ಅಕ್ಷರಶಃ ಬ್ಲ್ಯೂ ಬಾಯ್ಸ್​ ಎರಡನೇ ಅವಧಿಯಲ್ಲಿ ಆರ್ಭಟವನ್ನು ನಡೆಸಿದ್ರು. ತಮ್ಮ ಅನುಭವದ ಸಂಪೂರ್ಣ ಲಾಭ ಪಡೆದ ಆಡಿದ ತಂಡದ, ಅನುಭವಿ ಆಟಗಾರ ಸುನಿಲ್​ ಛೆಟ್ರಿ 60ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ರು. ಪರಿಣಾಮ ಭಾರತ 2-1ರಿಂದ ಮುನ್ನಡೆ ಸಾಧಿಸಿತು.

ಇನ್ನು ಈ ಅವಧಿಯಲ್ಲಿ ಮಕಾವ್ ಮತ್ತೊಂದು ಎಡವಟ್ಟು ಮಾಡಿಕೊಂಡಿತು. 70ನೇ ನಿಮಿಷದಲ್ಲಿ ಭಾರತ ಚೆಂಡಿನ ಮೇಲೆ ಹಿಡಿತ ಸಾಧಿಸಿ, ಗೋಲು ಬಾರಿಸುವ ಇರಾದೆಯನ್ನು ಹೊಂದಿತ್ತು. ಗೋಲು ಪೆಟ್ಟಿಗೆಯ ಎಡಭಾಗದಿಂದ ಬಂದ ಚೆಂಡು ಗೋಲು ಪೆಟ್ಟಿಗೆಯತ್ತ, ಹೊರಟಿತ್ತು. ಆಗ ಮಕಾವ್ ತಂಡದ ಹು ಮನ್​ ಫೈ ಎಡವಟ್ಟು ಮಾಡಿಕೊಂಡ್ರು. ಪರಿಣಾಮ ಭಾರತಕ್ಕೆ ಉಡುಗೊರೆ ಗೊಲಂದು ಲಭಿಸಿತು.

ಪಂದ್ಯದ ಕೊನೆಯ ಕ್ಷಣದಲ್ಲಿ ಮತ್ತೊಂದು ಗೋಲು ದಾಖಲಿಸಿದ ಟೀಮ್​ ಇಂಡಿಯಾ 4-1 ರಿಂದ ಪಂದ್ಯ ಗೆದ್ದಿತು. ಅಲ್ಲದೆ ಏಷ್ಯಾ ಕಪ್ ಫುಟ್‌ಬಾಲ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ 4 ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ವಿನಾಯಕ ಲಿಮಯೆ, ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *