ಅಶ್ವಿನ್​​ ಸ್ಪಿನ್​ ಮೋಡಿಗೆ ವೆಸ್ಟ್​​ ಇಂಡಿಸ್​ ಕಂಗಾಲು: ಟೀಮ್​ ಇಂಡಿಯಾಗೆ ಭರ್ಜರಿ ಜಯ

ಎರಡನೇ ದಿನ 6 ವಿಕೆಟ್​ ನಷ್ಟಕ್ಕೆ 74 ರನ್​ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ ಮೂರನೇ ದಿನ ಉತ್ತಮ ಬ್ಯಾಟಿಂಗ್ ಮೂಲಕ ಫಾಲೋಆನ್ ಸುಳಿಯಿಂದ ಹೊರಬರುವ ಲೆಕ್ಕಾಚಾರದಲ್ಲಿತ್ತು. ಅದರಂತೆ ದಿನದಾಟ ಆರಂಭಿಸಿದ ವಿಂಡೀಸ್​ಗೆ ಕೀಮೋ ಪಾಲ್ ಹಾಗೂ ಹಾಗೂ ರೋಸ್ಟನ್ ಚೇಸ್​ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿದ್ರು. ವೇಗದ ಆಟಕ್ಕೆ ಒತ್ತು ನೀಡಿದ ಈ ಇಬ್ಬರು ಬ್ಯಾಟ್ಸ್​​ಮನ್ಸ್ ಕೆಲ ಕಾಲ ಟೀಮ್ ಇಂಡಿಯಾವನ್ನ ಕಾಡಿದ್ರು. ಪಾಲ್ ಬೌಂಡರಿ ಸಿಕ್ಸರ್​ಗಳ ಮೂಲಕ ಮಿಂಚಿದ್ರು. ಈ ಜೋಡಿ ಏಳನೇ ವಿಕೆಟ್​ಗೆ 74 ರನ್ ಜೊತೆಯಾಟವಾಡಿ ತಂಡಕ್ಕೆ ಆಸರೆಯಾಯಿತು.

ಆದ್ರೆ 47 ರನ್​ಗಳಿಸಿದ್ದ ಪಾಲ್​ ಉಮೇಶ್ ಯಾದವ್ ಬೌಲಿಂಗ್​​ನಲ್ಲಿ ಚೇತೇಶ್ವರ್ ಪೂಜಾರಗೆ ಕ್ಯಾಚ್ ನೀಡಿದ್ರು. ಅರ್ಧಶತಕ ಗಳಿಸಿ ಆಡ್ತಿದ್ದ ರೋಸ್ಟನ್ ಸ್ಪಿನ್ನರ್ ಅಶ್ವಿನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ್ರು. ಕೊನೆಯಲ್ಲಿ ದೇವೇಂದ್ರ ಬಿಶೂ ಮಾತ್ರ ಎರಡಂಕಿ ದಾಟಿದ್ರು. ಅಂತಿಮವಾಗಿ ವಿಂಡೀಸ್ ಮೊದಲ ಇನ್ನಿಂಗ್ಸ್​ನಲ್ಲಿ 181 ರನ್​ಗೆ ಸರ್ವಪತನವಾಯ್ತು. ಅಶ್ವಿನ್ 4, ಶಮಿ 2 ವಿಕೆಟ್ ಪಡೆದ್ರು. ಉಮೇಶ್ ಯಾದವ್, ಕುಲ್​ದೀಪ್ ಯಾದವ್​, ರವೀಂದ್ರ ಜಡೇಜಾ ತಲಾ 1 ವಿಕೆಟ್​ ಗಳಿಸಿದರು.

482 ರನ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಪ್ರವಾಸಿಗರು ಮತ್ತೊಮ್ಮೆ ಆರಂಭಿಕ ಆಘಾತ ಅನುಭವಿಸಿದ್ರು. ಆರಂಭಿಕ ಕ್ರೇಗ್ ಬ್ರಾಥ್​ವೇಟ್​ ಬಹುಬೇಗ ಪೆವಿಲಿಯನ್ ಸೇರಿದ್ರು. ಮೂರನೇ ಕ್ರಮಾಂಕದಲ್ಲಿ ಬಂದ ಶಾಯಿ ಹೋಪ್ ಹೋರಾಟ 17 ರನ್ ಅಂತ್ಯವಾಯ್ತು. ಶಿಮ್ರಾನ್ ಹಿಟ್​ಮ್ಯಾರ್ ಕುಲ್​ದೀಪ್ ಸ್ಪಿನ್​ಗೆ ಬಲಿಯಾದ್ರು. ಸುನೀಲ್ ಆ್ಯಂಬ್ರಿಸ್​ ಗೋಲ್ಡನ್ ಡಕೌಟ್ ಆದ್ರು. ಮೊದಲ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸಿದ ರೋಸ್ಟನ್ ಎರಡನೇ ಇನ್ನಿಂಗ್ಸ್​​​ನಲ್ಲಿ ಕ್ರೀಸ್​​​ನಲ್ಲಿ ತಳವೂರಿ ನಿಲ್ಲುವಲ್ಲಿ ವಿಫಲರಾದರು.

ಕೀರನ್ ಪೋವೆಲ್​ ಮಾತ್ರ ಭಾರತದ ಬೌಲಿಂಗನ್ನ ಸಮರ್ಥವಾಗಿ ಎದುರಿಸಿದ್ರು. 93 ಎಸೆತಗಳಲ್ಲಿ 8 ಬೌಂಡರಿ 4 ಭರ್ಜರಿಸ ಸಿಕ್ಸ್​ ಮೂಲಕ 83 ರನ್ ಸಿಡಿಸಿ ಕುಲ್​ದೀಪ್​ಗೆ ವಿಕೆಟ್​ ನೀಡಿದ್ರು. ಕೆಳಕ್ರಮಾಂಕದ ಬ್ಯಾಟ್ಸ್​ ಮನ್ಸ್ ಬಂದಷ್ಟೇ ಬೇಗ ಅಂಗಳದಿಂದ ಹೊರನಡೆದ್ರು. ನಿನ್ನೆಯ ಪಂದ್ಯದ ಆರಂಭದಲ್ಲಿ ವಿಂಡೀಸ್​ ತಂಡ 4 ವಿಕೆಟ್​​ಗಳನ್ನು ಉಳಿಸಿಕೊಂಡು ಕ್ರೀಸ್​​ಗೆ ಇಳಿದಿತ್ತು. ಇನ್ನು ಟೀಮ್​​ ಇಂಡಿಯಾ ಈ ನಾಲ್ಕು ವಿಕೆಟ್​​ಗಳನ್ನು ಭೋಜನ ವಿರಾಮದ ವಳಗೆ ಕಾಯ್ದುಕೊಳ್ಳುವಲ್ಲಿ ವಿಂಡೀಸ್​ ತಂಡ ವಿಫಲವಾಯಿತು. ಇನ್ನು ಎರಡನೇ ಇನ್ನಿಂಗ್ಸ್​​ನಲ್ಲಿ ನೆಲಕಚ್ಚಿ ಬ್ಯಾಟ್ ಮಾಡುವ ಆಸೆಯನ್ನು ಹೊಂದಿದ್ದ ಪ್ರವಾಸಿ ತಂಡದ ಬ್ಯಾಟ್ಸ್​​ಮನ್ಸ್​​ಗೆ ಸ್ಪಿನ್​ ಬೌಲರ್ಸ್​ ಕಂಟಕರಾದ್ರು. ಪರಿಣಾಮ ಮೊದಲ ಟೆಸ್ಟ್​​ ಪಂದ್ಯ ಮೂರನೇ ದಿನದಲ್ಲಿ ಅಂತ್ಯವಾಯಿತು.

ಕೊನೆಯದಾಗಿ ವಿಂಡೀಸ್ ಎರಡನೇ ಇನ್ನಿಂಗ್ಸ್​​ನಲ್ಲಿ 196ಕ್ಕೆ ಆಲೌಟ್ ಆಯ್ತು. ಇದರಿಂದ ಭಾರತ ಇನ್ನಿಂಗ್ಸ್​ ಹಾಗೂ 272 ರನ್​ಗಳ ಭಾರಿ ಜಯಗಳಿಸಿತು. ಟೀಮ್ ಇಂಡಿಯಾ ಪರ ಕುಲ್​ದೀಪ್ 5, ಜಡೇಜಾ 3 ವಿಕೆಟ್ ಪಡೆದ್ರು. ಭಾರತದ ಪರ ಮೊದಲ ಟೆಸ್ಟ್​ನಲ್ಲೇ ಶತಕದ ಸಾಧನೆ ಮಾಡಿದ ಯುವ ಬ್ಯಾಟ್ಸ್​​ಮನ್ ಪೃಥ್ವಿ ಶಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

0

Leave a Reply

Your email address will not be published. Required fields are marked *