ಯಾವ ಟೈಂನಲ್ಲಿ ಎಳೆನೀರು ಕುಡದ್ರೆ ಒಳ್ಳೇದು ಗೊತ್ತಾ??

ನಾವು ದಣಿದಾಗ, ಅತಿಯಾದ ಬಿಸಿಲು ಇರುವಾಗ ಯಾವುದೋ ತಂಪು ಪಾನೀಯಗಳನ್ನು ಹೆಚ್ಚು ಹಣ ಕೊಟ್ಟು ಕುಡಿಯುತ್ತೇವೆ. ಆದರೆ ಆರೋಗ್ಯಕ್ಕೆ ಎಳೆನೀರು ಎನ್ನುವುದು ಉತ್ತಮ ನೈಸರ್ಗಿಕ ಪಾನೀಯ. ಇದನ್ನು ಕುಡಿಯುವುದು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದು.

ಆದರೆ ಎಳೆನೀರು ತಂಪು ಪ್ರಕೃತಿ ಇರುವ ಆಹಾರವಾದ್ದರಿಂದ ಕೆಲವರಿಗೆ ಇದನ್ನು ಸೇವಿಸಲು ಹಿಂಜರಿಯುತ್ತಾರೆ. ಹೀಗಾಗಿ ಕೆಲವು ನಿರ್ದಿಷ್ಟ ಸಮಯದಲ್ಲಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ ಎನ್ನಬಹುದು.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಉಪವಾಸ ಮಾಡುವವರು, ಡಯಟ್ ಮಾಡುವವರು ಎಳೆನೀರು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಒಳಿತು. ಇದರಿಂದ ಶರೀರಕ್ಕೆ ಶಕ್ತಿ ಸಿಗುತ್ತದೆ.

ದೇಹ ನಿರ್ಜಲೀಕರಣಕ್ಕೊಳಗಾದರೆ ದೇಹಕ್ಕೆ ಶಕ್ತಿ ಒದಗಿಸಲು ಎಳೆನೀರು ಸಹಾಯಕ. ಹಾಗಾಗಿ ಜಿಮ್ ಮಾಡಿದ ನಂತರ, ಅಥವಾ ಇನ್ಯಾವುದೇ ವ್ಯಾಯಾಮದ ನಂತರ ಎಳೆನೀರಿನ ಸೇವನೆ ಉತ್ತಮ.

0

Leave a Reply

Your email address will not be published. Required fields are marked *