ಕಾರವಾರ: ಕೇರಳ ಮೂಲದ ಲಾರಿಯಲ್ಲಿ ಕಾರವಾರ ಮತ್ತು ಗೋವಾ ಗಡಿಭಾಗದ ಮಾಜಾಳಿಯಲ್ಲಿ ಅಕ್ರಮ ಸ್ಪೀರಿಟ್ ವಶಕ್ಕೆ ಪಡೆಯಲಾಗಿದೆ. ಗೋವಾದಿಂದ ಕರ್ನಾಟಕದ ಕಡೆಗೆ ಇನ್ಸೂಲೇಟರ್ ಲಾರಿ ಮೂಲಕ ಸಾಗಿಸುತ್ತಿರುವ ಸ್ಪೀರಿಟ್ ಅನ್ನು ಅಬಕಾರಿ ಇಲಾಖಾ ಅಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿಗಳ ನೇತ್ರತ್ವದಲ್ಲಿ ಕಾರ್ಯಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಕೇರಳ ಮೂಲದ ಜೀತನ್ ಜೋಶ್(34) ಬಂಧಿತ ಆರೋಪಿಯಾಗಿದ್ದು, ಏಳು ಲಕ್ಷ ಮೂವತ್ತು ಸಾವಿರ ಮೌಲ್ಯದ 3,640 ಲೀಟರ್ ಸ್ಪೀರಿಟ್ ಅನ್ನು ಸಾಗಿಸುತ್ತಿರುವುದನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.