ಸ್ಯಾಂಡಲ್​​ವುಡ್​​ನಲ್ಲಿ ಸದ್ದು ಮಾಡೋಕೆ ಬರ್ತಿದೆ ‘ಇಲ್ಲಾ’

ದಿನಬೆಳಗಾದ್ರೆ ನಮಗೆ ಟೈಮ್​ ಇಲ್ಲಾ. ಆ ಕೆಲಸ ಮಾಡಿಲ್ಲಾ ಈ ಕೆಲಸ ಮಾಡಿಲ್ಲ ಅಂತ ಹೇಳ್ತಾನೇ ಇರ್ತಿವಿ. ಇಲ್ಲೋಬ್ರು ಇದೇ ಎಳೆ ಇಟ್ಕೊಂಡು ಒಂದು ಹೊಸ ಸಿನಿಮಾ ಮಾಡ್ತಿದ್ದಾರೆ. ಈ ಹೊಸ ಚಿತ್ರದ ಟೈಟಲ್​ ಕೂಡ “ಇಲ್ಲಾ” ಅಂತ. ಕೇಳೊದಿಕ್ಕೆ ಇಷ್ಟೊಂದು ಡಿಫರೆಂಟ್​ ಆಗಿದೆ. ಇನ್ನು ಸಿನಿಮಾ ಇನ್ಯಾವರೀತಿ ಇರಬಹುದು.? ಸ್ಯಾಂಡಲ್​ವುಡ್​ನಲ್ಲಿ ಹೊಸ ಹೊಸ ಪ್ರಯೋಗಾತ್ಮಕ ಚಿತ್ರಗಳು ಬರ್ತಾನೇ ಇರುತ್ತವೆ. ಇದರಂತೆ ಹೊಸ ಹೊಸ ಪ್ರತಿಭೆಯ​ ಜನರೂ ಕೂಡ ಹುಟ್ಟಿಕೊಳ್ತಾನೇ ಇರ್ತಾರೆ. ಇಲ್ಲೊಬ್ರು ಇಂಥದ್ದೇ ಪ್ರಯತ್ನ ಮಾಡಿ ಈಗಾಗ್ಲೇ ಟೈಟಲ್​ ಮೂಲಕವೂ ಕ್ಯೂರಿಯಾಸಿಟಿ ಬಿಲ್ಡ್​ ಮಾಡಿದ್ದಾರೆ. ಅದು ಬೇರೆ ಯಾರು ಅಲ್ಲ, ತಮಿಳು ಹಾಗೂ ತೆಲುಗು ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲ ಮಾಡ್ತಿದ್ದ ರಾಜ್​ಪ್ರಭು.

‘ಇಲ್ಲಾ’ ಇದು ರಾಜ್​ ಪ್ರಭು ಆಕ್ಷನ್​ ಕಟ್​ ಹೇಳ್ತಿರುವ ಹೊಸ ಸಿನಿಮಾ. ಸಸ್ಪೆನ್ಸ್​, ಥ್ರಿಲ್ಲರ್​ ಜೊತೆಗೆ ಅಲ್ಲಲ್ಲಿ ಸ್ವಲ್ಪ ಭಯ ಹುಟ್ಟಿಸುವಂತಹ ಅಂಶಗಳನ್ನ ಈ ಚಿತ್ರ ಹೊಂದಿದೆ. ನಮ್ಮ ಡೇ ಟು ಡೇ ಲೈಫ್​ನಲ್ಲಿ ನಡೆಯುವ ಕಥೆಯನ್ನೇ ಇಟ್ಕೊಂಡು ಅದಕ್ಕೆ ಪಾಸಿಟಿವ್​ ಟಚ್​ ಕೊಟ್ಟಿದ್ದಾರೆ ನಿರ್ದೇಶಕ ರಾಜ್​ ಪ್ರಭು. ಇಂಟರೆಸ್ಟಿಂಗ್​ ಅಂದ್ರೆ ರಾಜ್​ ಪ್ರಭು ಅವರೇ ಈ ಚಿತ್ರದ ನಾಯಕನಾಗಿದ್ದು, ಕೇವಲ ಒಂದೇ ಕ್ಯಾರೆಕ್ಟರ್​ ಮೇಲೆ ಸಿನಿಮಾ ಪ್ಲೇ ಆಗ್ತಿರುವುದು ವಿಶೇಷ.

ಈ “ಇಲ್ಲಾ” ಚಿತ್ರಕ್ಕೆ ಹೈದರಾಬಾದ್​ ಟೆಕ್ಷನಿಷಿಯನ್ಸ್​ ವರ್ಕ್​ ಮಾಡಿದ್ದು, ಕ್ಯಾಮೆರಾ ಕೈ ಚಳಕ ತೋರಿಸಿರುವುದು ನಾಗರಾಜ್​ ಮೂರ್ತಿ. ಇನ್ನು ಚಿತ್ರದ ಹಾಡುಗಳು ಕೂಡ ತುಂಬ ವಿಭಿನ್ನವಾಗಿದ್ದು ಮ್ಯೂಸಿಕ್​ ಕಂಪೋಸ್​ ಮಾಡಿದ್ದಾರೆ ಪವನ್​ ಪಾರ್ಥ. ಚಿತ್ರದ ಪೋಸ್ಟರ್​ ನೋಡ್ತಿದ್ರೆ ಇದೊಂದು ವೆರಿ ಸ್ಪೆಷಲ್​ ಸಿನಿಮಾ ಅನಿಸಬಹುದು. ಜೊತೆಗೆ ಚಿತ್ರದ ಟ್ರೈಲರ್​ ಹಾಗೂ ಟೀಸರ್​ ನಿರೀಕ್ಷೆ ಹುಟ್ಟಿಸುವಂತಿವೆ. “ಇಲ್ಲಾ” ಚಿತ್ರವು ಬೆಂಗಳೂರಿನಲ್ಲೇ ಶೂಟಿಂಗ್​ ಮಾಡಿದ್ದು, ಚಿತ್ರಕ್ಕೆ ಸೆನ್ಸಾರ್​ ಮಂಡಳಿಯಿಂದ ಯು.ಎ. ಸರ್ಟಿಫಿಕೇಟ್​ ಸಿಕ್ಕಿದೆ. ಇನ್ನೇನು  ಡಿಸೆಂಬರ್ 15ಕ್ಕೆ ಚಿತ್ರ ತೆರೆಕಾಣಲಿದ್ದು, ಇದು ಕನ್ನಡ ಚಿತ್ರರಂಗದಲ್ಲಿ ಯಾವ ರೀತಿ ಸದ್ದು ಮಾಡುತ್ತೋ ನೋಡಬೇಕು.

ರೆನಿಟ ಫಿಲ್ಮ್​ ಬ್ಯೂರೊ ಸುದ್ದಿಟಿವಿ.

0

Leave a Reply

Your email address will not be published. Required fields are marked *