ಐಸಿಸಿ ನೂತನ ಏಕದಿನ ರ್ಯಾಂಕಿಂಗ್

ಏಷ್ಯಾಕಪ್​ ಟೂರ್ನಿಯುದ್ದಕ್ಕೂ ರೋಹಿತ್ ಪಡೆ ನೀಡಿದ ಸಂಘಟಿತ ಪ್ರದರ್ಶನದ ತಂಡದ ಯಶಸ್ಸಿಗೆ ಪ್ರಮುಖ ಕಾರಣ. ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ರೋಹಿತ್​ ಶರ್ಮಾ ಹಾಗೂ ಶಿಖರ್​ ಧವನ್​ ಭರ್ಜರಿ ಬ್ಯಾಟಿಂಗ್ ಮೂಲಕ ಮಿಂಚಿದ್ರು. ಧವನ್​ ಇಂಗ್ಲೆಂಡ್​ ಟೆಸ್ಟ್​ ಸರಣಿಯ ವೈಫಲ್ಯ ಮರೆಸುವಂತೆ ಬ್ಯಾಟ್​ ಬೀಸಿ ಅಭಿಮಾನಿಗಳನ್ನ ಮನಗೆದ್ರು. ಜವಬ್ದಾರಿಯತ ಆಟದ ಮೂಲಕ ತಂಡಕ್ಕೆ ಆಸರೆಯಾದ್ರು. ರೋಹಿತ್​ ಶರ್ಮಾ ನಾಯಕತ್ದದ ಜೊತೆಗೆ ಬ್ಯಾಟಿಂಗ್​ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿ ಸೈ ಎನಿಸಿಕೊಂಡ್ರು.

ಏಷ್ಯಾಕಪ್​ನಲ್ಲಿ ಟೀಮ್ ಇಂಡಿಯಾದ ಕೆಲ ಆಟಗಾರರು ನೀಡಿದ ಉತ್ತಮ ಪ್ರದರ್ಶನ ಅವರನ್ನ ಐಸಿಸಿ ರ್ಯಾಂಕಿಂಗ್​ ಪಟ್ಟಿಯಲ್ಲಿ ಮೇಲೇರುವಂತೆ ಮಾಡಿದೆ. ಐಸಿಸಿ ಬಿಡುಗಡೆ ಮಾಡಿದ ನೂತನ ಏಕದಿನ ಬ್ಯಾಟ್ಸ್​ಮನ್​ ಹಾಗೂ ಬೌಲರ್ಸ್​ಗಳ ಪಟ್ಟಿಯಲ್ಲಿ ಐವರು ಭಾರತೀಯರು ಟಾಪ್​ ಟೆನ್​ರೊಳಗೆ ಸ್ಥಾನ ಪಡೆದಿದ್ದಾರೆ. ಏಕದಿನ ಬ್ಯಾಟ್ಸ್​ಮನ್​ಗಳ ರ್ಯಾಂಕಿಂಗ್​​ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ 884 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಏಷ್ಯಾಕಪ್​ನಲ್ಲಿ ಸ್ಫೋಟಕ ಬ್ಯಾಟಿಂಗ್​ ಮೂಲಕ ಟೀಮ್ ಇಂಡಿಯಾದ ಯಶಸ್ಸಿಗೆ ಕಾರಣವಾದ ರೋಹಿತ್​ ಶರ್ಮಾ ಎರಡು ಸ್ಥಾನ ಮೇಲೇರಿದ್ದಾರೆ. ಈ ಮೂಲಕ ತಮ್ಮ ಏಕದಿನ ಕ್ರಿಕೆಟ್​ ಕರಿಯರ್​​ನಲ್ಲೇ ಮೊದಲ ಬಾರಿಗೆ ಉನ್ನತ ಶಿಖರ ಏರಿದ್ದಾರೆ.

ಏಷ್ಯಾಕಪ್​ ಟೂರ್ನಿಯಲ್ಲಿ ಹಿಟ್​ಮ್ಯಾನ್ 5 ಇನ್ನಿಂಗ್ಸ್​​ಗಳಿಂದ 105.66ರ ಸರಾಸರಿಯಲ್ಲಿ 1 ಶತಕ ಹಾಗೂ ಮೂರು ಅರ್ಧಶತಗಳ ನೆರವಿನಿಂದ 317 ರನ್ ಸಿಡಿಸಿದ್ರು. ಇದು ರೋಹಿತ್​ಗೆ ಅದೃಷ್ಟ ತಂದುಕೊಟ್ಟಿದ್ದು, ಶ್ರೇಯಾಂಕ ಪಟ್ಟಿಯಲ್ಲಿ ಬಡ್ತಿಗೆ ಕಾರಣವಾಗಿದೆ. ಈ ರೋಹಿತ್​ ಒಟ್ಟು 842 ಪಾಯಿಂಟ್ಸ್​ಗಳೊಂದಿಗೆ ಎರಡನೇ ಸ್ಥಾನಗಳಿಸದ್ದಾರೆ. ಈ ಮೂಲಕ ಐಸಿಸಿ ಅಗ್ರಗಣ್ಯ ಬ್ಯಾಟ್ಸ್​​ಮನ್​ಗಳ ಪೈಕಿ ಮೊದಲ ಎರಡು ಸ್ಥಾನವನ್ನ ಟೀಮ್ ಇಂಡಿಯಾ ನಾಯಕ ಹಾಗೂ ಉಪನಾಯಕ ಆಕ್ರಮಿಸಿಕೊಂಡಿದ್ದಾರೆ.

ಇನ್ನೂ ಗಬ್ಬರ್​ಸಿಂಗ್​ ಕೂಡ ಎರಡು ಸ್ಥಾನ ಮೇಲಕ್ಕೆ ಜಿಗಿದಿದ್ದು, 5 ನೇ ಸ್ಥಾನ ಸಂಪಾದಿಸಿದ್ದಾರೆ. ಶಿಖರ್​ ಕೂಡ ಅರಬ್ಬರ ನಾಡಲ್ಲಿ ಅಮೋಘ ಬ್ಯಾಟಿಂಗ್​ನಿಂದ ತಂಡದ ಜಯದಲ್ಲಿ ಮಹತ್ತರ ಪಾತ್ರವಹಿಸಿದ್ರು. ಧವನ್​ ಏಷ್ಯಾಕಪ್​ನಲ್ಲಿ ಐದು ಪಂದ್ಯಗಳಿಂದ 2 ಶತಕಳಿಂದ 342 ರನ್​ಬಾರಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ರು. ಐಸಿಸಿ ಬೌಲರ್​ ರ್ಯಾಂಕಿಂಗ್ ಲಿಸ್ಟ್​​ ಟೀಮ್ ಇಂಡಿಯಾದ ವೇಗಿ ಯಾರ್ಕರ್ ಸ್ಪೆಷಲಿಸ್ಟ್​​ ಜಸ್ಪ್ರೀತ್ ಬೂಮ್ರಾಗೂ ಸಂತಸ ಮೂಡಿಸಿದೆ. 797 ಅಂಕಗಳೊಂದಿಗೆ ಬೂಮ್ರಾ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನೂ ತಮ್ಮ ರಿಸ್ಟ್​ ಸ್ಪಿನ್ ಮೂಲಕ ವಿಕೆಟ್​ ಬೇಟೆ ನಡೆಸುತ್ತಿರುವ ಕುಲ್​ದೀಪ್ ಯಾದವ್​ ಮೂರು ಸ್ಥಾನ ಮೇಲೇರಿದ್ದು ಮೂರನೇ ಸ್ಥಾನ ಪಡೆದಿದ್ದಾರೆ. ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಅಪ್ಘಾನಿಸ್ತಾನ ರಶೀದ್​ ಅಗ್ರಸ್ಥಾನ ಸಾಧನೆಗೈದಿದ್ದಾರೆ.

0

Leave a Reply

Your email address will not be published. Required fields are marked *