ನಾನಾರಿಂದ ನನಗೆ ಯಾವುದೇ ನೊಟೀಸ್ ಬಂದಿಲ್ಲ: ತನುಶ್ರೀ ದತ್ತಾ

ಮುಂಬೈ: ನಾನಾ ಪಾಟೇಕರ್ ಅವರಿಂದ ನನಗೆ ಯಾವುದೇ ನೊಟೀಸ್ ಬಂದಿಲ್ಲ ಎಂದು ತನುಶ್ರೀ ದತ್ತಾ ಹೇಳಿದ್ದಾರೆ. ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಅವರ ಮೇಲೆ ಪಾಟೇಕರ್ ಅಭಿಮಾನಿಗಳು ದಾಳಿ ನಡೆಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ತನುಶ್ರೀ, ಈ ರೀತಿ ಬೆದರಿಕೆ ಒಡ್ಡಿದರೆ, ನನ್ನಂತೆ ಕಿರುಕುಳಕ್ಕೆ ಒಳಗಾಗಿರುವವರು ಸಮಸ್ಯೆ ಹೇಳಿಕೊಳ್ಳಲು ಮುಂದೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ನನ್ನಂತೆ ಕಿರುಕುಳಕ್ಕೆ ಒಳಗಾಗಿರುವ ಯಾರೂ ಇಂತಹ ಬೆದರಿಕೆ ತಂತ್ರಗಳಿಗೆ ಹೆದರಿಕೊಳ್ಳಬಾರದು ಎಂದು ಅವರು ಹೇಳಿದ್ದಾರೆ. ಅಲ್ಲದೇ, ಇಡೀ ದೇಶವೇ ಅಂತಹವರನ್ನು ಬೆಂಬಲಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಂಎನ್​ಎಸ್ ಪಕ್ಷ ಸಂದರ್ಶನ ಒಂದರಲ್ಲಿ ಹಿಂಸಾತ್ಮಕ ದಾಳಿ ನಡೆಸುವ ಬೆದರಿಕೆ ಒಡ್ಡಿದೆ ಎಂದ ಅವರು, ಇದು ಬೆದರಿಕೆಯಲ್ಲೇ ಅತ್ಯಂತ ದೊಡ್ಡಮಟ್ಟದ್ದು. ಇದನ್ನು ನಾನಾ ಪಾಟೇಕರ್ ಅವರೇ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ನಾನು ಮುಂಬೈ ಪೊಲೀಸರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ದಾಳಿ ವೇಳೆ ಅವರು ನನಗೆ ರಕ್ಷಣೆ ನೀಡಿದರು ಮತ್ತು ನನಗೆ ಶಕ್ತಿ ನೀಡಿದರು ಎಂದಿದ್ದಾರೆ.

0

Leave a Reply

Your email address will not be published. Required fields are marked *