ಮದುವೆ ಕುರಿತು ರಾಹುಲ್ ಗಾಂಧಿ ಹೇಳಿದ್ದೇನು?

ಹೈದರಾಬಾದ್: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿವಾಹದ ಕುರಿತು ಕಾಂಗ್ರೆಸ್​​ನವರಿಗಿಂಥ ವಿಪಕ್ಷಗಳಿಗೆ ತೀವ್ರ ಕುತೂಹಲ. ಈ ಕುರಿತು ಸ್ವತಃ ಅವರೇ ಹೇಳಿಕೆ ನೀಡಿದ್ದಾರೆ. ನಿನ್ನೆ ಹೈದರಾಬಾದ್​​​ನಲ್ಲಿ ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಅವರು ತಮ್ಮ ಮದುವೆಯ ಗುಟ್ಟನ್ನು ಬಿಚ್ಚಿಟ್ಟರು. ಪತ್ರಕರ್ತರು ನಿಮ್ಮ ವಿವಾಹದ ಯೋಜನೆಯೇನು? ಎಂದಾಗ, ನಾನು ಈಗಾಗಲೇ ಮದುವೆಯಾಗಿದ್ದೇನೆ. ಕಾಂಗ್ರೆಸ್ ಪಕ್ಷವನ್ನು ನಾನು ಮದುವೆಯಾಗಿದ್ದೇನೆ ಎನ್ನುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಬೇಟಿ ಬಚಾವೋ ಭೇಟಿ ಪಡಾವೋ ಘೋಷಣೆ ಕೊಟ್ಟಿದ್ದಾರೆ. ಆದರೆ, ಯಾರಿಂದ ಮಗಳನ್ನು ರಕ್ಷಿಸಬೇಕು ಎನ್ನುವುದನ್ನು ಹೇಳಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮತ್ತು ಮಿತ್ರ ಕೂಟಗಳ ನಾಯಕರ ಮೇಲೆ ಎದುರಾಗಿರುವ ಅತ್ಯಾಚಾರ ಆರೋಪವನ್ನು ಉಲ್ಲೇಖಿಸಿದ ಅವರು, ಬಿಹಾರದಲ್ಲಿ ಸಚಿವರೇ ಅತ್ಯಾಚಾರ ಮಾಡಿದ್ದಾರೆ. ಎಳೆಯ ಬಾಲಕಿಯರ ಮೇಲೆ ಅತ್ಯಾಚಾರ ಎಸಗಲಾಗಿದೆ. ಆದ್ದರಿಂದ, ಬಿಜೆಪಿ ಶಾಸಕರಿಂದ ಮಗಳನ್ನು ರಕ್ಷಿಸಬೇಕು ಎಂದು ಅವರು ವ್ಯಂಗ್ಯವಾಗಿ ಬಿಜೆಪಿಗರನ್ನು ಕುಟುಕಿದರು. ದೇಶದಲ್ಲಿ ದಲಿತರು, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಆದರೆ, ಈ ಕುರಿತು ಮೋದಿಯವರು ಇದುವರೆಗೆ ಒಂದೇ ಒಂದು ಮಾತನ್ನೂ ಆಡಿಲ್ಲ ಎಂದು ಕಿಡಿಕಾರಿದರು.

ತೆಲಂಗಾಣದ ಜನರ ಶಕ್ತಿಯಿಂದ ರಾಜ್ಯ ಅಭಿವೃದ್ಧಿಯಾಗಬೇಕು. ಆದರೆ, ಇಂದು ತೆಲಂಗಾಣದ ಒಂದು ಕುಟುಂಬ ನಿಮ್ಮ ಅಧಿಕಾರ ಮತ್ತು ಶಕ್ತಿಯ ಮೇಲೆ ಹಿಡಿತ ಸಾಧಿಸಿದೆ ಎಂದು ಅವರು ಪರೋಕ್ಷವಾಗಿ ಸಿಎಂ ಚಂದ್ರಶೇಖರ ರಾವ್ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿಯವರು ದೇಶ ಮತ್ತು ತೆಲಂಗಾಣ ಸಿಎಂ ರಾಜ್ಯವನ್ನು ಮರುರೂಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *