ಅತಿಕ್ರಮವಾಗಿ ವಾಯುನೆಲೆ ಪ್ರವೇಶ ಯತ್ನ: ಗುಂಡು ಹಾರಿಸಿ ತಡೆದ ಭದ್ರತಾ ಸಿಬ್ಬಂದಿ

ಘಾಜಿಯಾಬಾದ್: ಘಾಜಿಯಾಬಾದ್​​ನ ಹಿಂದೋನ್ ವಾಯುನೆಲೆಯನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯೊಬ್ಬನ ಮೇಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ ಘಟನೆ ನಡೆದಿದೆ. ಎತ್ತರದ ಗೋಡೆಯನ್ನು ಹತ್ತಿ ವಾಯುನೆಲೆಗೆ ನುಗ್ಗಲು ವ್ಯಕ್ತಿ ಬಯಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಗುಂಡಿನ ದಾಳಿಯಲ್ಲಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಆರೋಪಿ ಸುಜೀತ್ ಕುಮಾರ್, ನನಗೆ ಊಟಕ್ಕೆ ಏನೂ ಇರಲಿಲ್ಲ. ನಾನು ಕೇವಲ ಕಾಂಪೌಂಡಿನ ಮೇಲೆ ಕುಳಿತುಕೊಳ್ಳಬೇಕೆಂದು ಬಯಸಿದ್ದೆ. ಇಂಥ ತಪ್ಪನ್ನು ಮತ್ತೊಮ್ಮೆ ಪುನರಾವರ್ತನೆ ಮಾಡುವುದಿಲ್ಲ ಎಂದು ಕ್ಷಮೆ ಕೋರಿದ್ದಾನೆ.

0

Leave a Reply

Your email address will not be published. Required fields are marked *