ಮಗನ ಕುರಿತು ಹೆಮ್ಮೆ, ಸರ್ಕಾರ ಪಾಕ್ ವಿರುದ್ಧ ಕ್ರಮ ಕೈಗೊಳ್ಳಲಿ: ಮೃತ ಯೋಧನ ತಂದೆ

ಜೈಪುರ: ಜಮ್ಮು ಕಾಶ್ಮೀರದ ಸಾಂಬಾದಲ್ಲಿ ಪಾಕ್ ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಗೆ ಬಲಿಯಾದ ಬಿಎಸ್​ಎಫ್ ಸಹಾಯಕ ಕಮ್ಯಾಂಡರ್ ಜಿತೇಂದ್ರ ಸಿಂಗ್ ಅಂತ್ಯಕ್ರಿಯೆ ನೆರವೇರಿತು. ರಾಜಸ್ಥಾನದಲ್ಲಿ ನಡೆದ ಅಂತ್ಯ ಕ್ರಿಯೆ ವೇಳೆ ಸಾವಿರಾರು ಜನ ನೆರೆದಿದ್ದು, ಅಶ್ರು ತರ್ಪಣ ಸಲ್ಲಿಸಿದರು. ಮೃತ ಯೋಧನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ಸೇನಾಧಿಕಾರಿಗಳು ಕೂಡ ಹಾಜರಿದ್ದರು. ನನ್ನ ಪುತ್ರನ ಕುರಿತು ನನಗೆ ಹೆಮ್ಮೆ ಇದೆ. ಭಾರತ ಸರ್ಕಾರ ಪಾಕಿಸ್ತಾನದೊಂದಿಗೆ ಕಟಿಬದ್ಧವಾಗಿ ವರ್ತಿಸಲಿ ಎಂದು ಜಿತೇಂದ್ರ ಸಿಂಗ್ ತಂದೆ ಸಮುಂದರ್ ಸಿಂಗ್ ಹೇಳಿದ್ದಾರೆ.

0

Leave a Reply

Your email address will not be published. Required fields are marked *