ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಗುತ್ತಿದೆ: ಲಾಲು ಯಾದವ್

 

ದೆಹಲಿ: ಕಳೆದ ಕೆಲವು ದಿನಗಳಿಂದ ದೆಹಲಿಯ ಏಮ್ಸ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರನ್ನು ರಾಂಚಿಯ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ತಮ್ಮ ವರ್ಗಾವಣೆ ಕುರಿತು ಅಸಮಧಾನ ವ್ಯಕ್ತಪಡಿಸಿರುವ ಲಾಲು, ಏಮ್ಸ್ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಬಿಡುಗಡೆಯನ್ನು ರಾಜಕೀಯ ಪಿತೂರಿ ಎಂದು ಬಣ್ಣಿಸಿದ ಅವರು, ಸೌಲಭ್ಯಗಳಿಲ್ಲದೆಡೆ ನನ್ನನ್ನು ವರ್ಗಾಯಿಸಲಾಗಿದೆ ಎಂದು ದೂರಿದರು. ಅಲ್ಲದೇ, ನನಗೆ ಕಷ್ಟದ ಸಂದರ್ಭ ಬಂದಿದೆ, ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.

0

Leave a Reply

Your email address will not be published. Required fields are marked *