ದಯಾ ಮರಣಕ್ಕೆ ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್​: ಐತಿಹಾಸಿಕ ನಿರ್ಧಾರ ಪ್ರಕಟಿಸಿದ ನ್ಯಾಯಪೀಠ

ದೆಹಲಿ: ದಯಾಮರಣಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಕುಟುಂಬದ ಸದಸ್ಯರ ಲಿಖಿತ ಹೇಳಿಕೆ ಮತ್ತು ಪರಿಣತ ವೈದ್ಯರ ಶಿಫಾರಸು ಆಧರಿಸಿ, ವಾಸ್ತವದಲ್ಲಿ ಜೀವಿಸಲು ಸಾಧ್ಯವಿಲ್ಲದ ವ್ಯಕ್ತಿಗಳಿಗೆ ದಯಾಮರಣಕ್ಕೆ ಅವಕಾಶ ನೀಡಬಹುದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಪೀಠ ಅಭಿಪ್ರಾಯಪಟ್ಟಿದೆ. ಈ ತೀರ್ಪಿನ ಮೂಲಕ ದಯಾಮರಣ ಕುರಿತು ಸುಪ್ರೀಂ ಕೋರ್ಟ್​​ನಿಂದ ಐತಿಹಾಸಿಕ ತೀರ್ಪು ಹೊರಬಿದ್ದಿದ್ದು, ಮಾರ್ಗ ಸೂಚಿಗಳನ್ನು ರಚಿಸಲು ನಿರ್ದೇಶನ ನೀಡಲಾಗಿದೆ. ವಿವೇಚನೆ ಆಧರಿಸಿ ದಯಾಮರಣಕ್ಕೆ ಅವಕಾಶವನ್ನು ಸುಪ್ರೀಂ ಕೋರ್ಟ್ ನೀಡಿದೆ. ಮನುಷ್ಯರು ಘನತೆಯಿಂದ ಮರಣ ಹೊಂದುವ ಹಕ್ಕು ಹೊಂದಿದ್ದಾರೆ ಎಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ.

2011ರಲ್ಲಿ ಕರ್ನಾಟಕದ ಅರುಣಾ ಶಾನ್​ಭಾಗ್ ಸಲ್ಲಿಸಿದ್ದ ದಯಾ ಮರಣದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಕಳೆದ ಅಕ್ಟೋಬರ್​​ 11ರಂದು ತೀರ್ಪನ್ನು ಕಾಯ್ದಿರಿಸಿತ್ತು. ಮಾರಣಾಂತಿಕ ಖಾಯಿಲೆ ಇತ್ಯಾದಿಗಳಿಂದ ನರಳುತ್ತಿರುವವರಿಗೆ ದಯಾ ಮರಣ ಕುರಿತು ದೇಶದಾದ್ಯಂತ ಅನೇಕ ಅರ್ಜಿಗಳು ಕೂಡ ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲ ಸುಪ್ರೀಂ ಕೋರ್ಟ್ ನೀಡಿರುವ ಇಂದಿನ ತೀರ್ಪು ಮಹತ್ವ ಪಡೆದುಕೊಂಡಿದೆ.

0

Leave a Reply

Your email address will not be published. Required fields are marked *