ಜೇನುತುಪ್ಪ ಹಾಗೂ ಚಕ್ಕೆಯ ಕರಾಮತ್ತು

ಅನೇಕ ರೀತಿಯ ಖಾಯಿಲೆಗಳಿಗೆ ನಮ್ಮ ಅಕ್ಕ ಪಕ್ಕದಲ್ಲಿನ ಪರಿಸರದಲ್ಲಿಯೇ, ನಮ್ಮ ಮನೆ ಗಳಲ್ಲಿಯೇ ತಯಾರಿಸಲು ಸಾಧ್ಯ ವಿರುವಂತಹ ಹಲವು ಆಯುರ್ವೇದ ಗುಣಗಳನ್ನು ಹೊಂದಿರುವ ಔಷಧಿಗಳಿರುತ್ತವೆ. ಈ ರೀತಿಯ ಮನೆ ಮದ್ದುಗಳು ನಮಗೆ ಹಲವು ರೀತಿಯ ಖಾಯಿಲೆಗಳನ್ನು ವಾಸಿ ಮಾಡಿಕೊಳ್ಳಲು ಉಪಯೋಗವಾಗುತ್ತದೆ. ಸಣ್ಣ ಪುಟ್ಟ ರೋಗಗಳಿಗೆಲ್ಲ ವೈದ್ಯರ ಬಳಿಗೆ ಹೋಗಬೇಕಾದ ಪರಿಸ್ಥಿತಿ ಬರುವುದಿಲ್ಲ.

ಅದೇ ರೀತಿ ಸೋಂಕು ಅಥವಾ ಇನ್ಯಾವುದೋ ಕಾರಣದಿಂದ ಶರೀರದಲ್ಲಿ ಆದ ಗಾಯಕ್ಕೆ ಜೇನು ತುಪ್ಪ ಮತ್ತು ಚಕ್ಕೆ ಬಳಸಿ ಮನೆ ಮದ್ದು ತಯಾರಿಸಬಹುದು.

ಜೇನು ತುಪ್ಪ ಸೋಂಕು ನಿವಾರಿಸುವ ಗುಣವನ್ನು ಹೊಂದಿರುವುದರಿಂದ ಸಾಮಾನ್ಯವಾಗಿ ಸುಟ್ಟ ಗಾಯಗಳಾದರೆ ಜೇನು ತುಪ್ಪ ಸವರಲಾಗುತ್ತದೆ. ಯಾವುದೇ ರೀತಿಯ ಗಾಯಗಳಿಗೂ ಜೇನು ತುಪ್ಪ ಮತ್ತು ಚಕ್ಕೆಯ ಪುಡಿಯನ್ನು ಪೇಸ್ಟ್ ಮಾಡಿಕೊಂಡು ಹಚ್ಚಬಹುದು.

ಸೋಂಕು ಹರಡದಂತೆ ತಡೆಯುವ ಗುಣ ಇವೆರಡಕ್ಕಿರುವುದರಿಂದ ವಿಶೇಷವಾಗಿ ಸೋಂಕಿನ ಗಾಯಗಳಾಗಿದ್ದರೆ  ಇವೆರಡನ್ನೂ ಪೇಸ್ಟ್ ಮಾಡಿಕೊಂಡು ಗಾಯವಾದ ಜಾಗಕ್ಕೆ ಹಚ್ಚಿಕೊಳ್ಳುವುದು ಉತ್ತಮ.

0

Leave a Reply

Your email address will not be published. Required fields are marked *